Mercedes: ಮರ್ಸಿಡಿಸ್ ಬೆಂಜ್ ಕಾರುಗಳು ಬಿಡುಗಡೆ, ಹತ್ತಾರು ವೈಶಿಷ್ಟ್ಯಗಳು.. 18 ಕಿ.ಮೀ ಮೈಲೇಜ್

ಮರ್ಸಿಡಿಸ್ ಬೆಂಜ್ (Mercedes Benz) ಐಷಾರಾಮಿ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಬುಧವಾರ ಭಾರತದಲ್ಲಿ ನವೀಕರಿಸಿದ 2024 ಜಿಎಲ್ಎ (2024 GLA) ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಗೆ ದೊರೆಯುವ ಕಾರಾಗಿದ್ದು, ರೂ.50.50 ಲಕ್ಷ ಆರಂಭಿಕ ಬೆಲೆಗೆ ಪರಿಚಯಿಸಿದೆ.

ನೂತನ ಮರ್ಸಿಡಿಸ್ ಬೆಂಜ್ ಜಿಎಲ್ಎ ಎಸ್‌ಯುವಿ, ಹೊರಭಾಗ ಹಾಗೂ ವೈಶಿಷ್ಟ್ಯದಲ್ಲಿ ಕೆಲವೊಂದು ಸಣ್ಣ ಪುಟ್ಟ ಬದಲಾವಣೆಗಳನ್ನು ಪಡೆದುಕೊಂಡಿದೆ. ಹೊಸದಾದ 'ಸ್ಪೆಕ್ಟ್ರಲ್ ಬ್ಲೂ' ಬಣ್ಣದ ಆಯ್ಕೆಯಲ್ಲಿಯೂ ಲಭ್ಯವಿದೆ. 2010ರಲ್ಲಿ ಮೊದಲ ಬಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇಲ್ಲಿಯವರೆಗೂ 14,000ಕ್ಕೂ ಹೆಚ್ಚು ಯುನಿಟ್ ಮಾರಾಟಗೊಳಿಸಿದೆ.

Mercedes Benz 2024 GLC And GLE 53 Coupe Facelift Launched In India

2024ರ ಮರ್ಸಿಡಿಸ್ ಬೆಂಜ್ ಜಿಎಲ್ಎ (Mercedes-Benz GLA) ಎಸ್‌ಯುವಿ 2 ರೂಪಾಂತರದ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಅವುಗಳೆಂದರೆ, ಪ್ರೋಗ್ರೆಸ್ಸಿವ್ ಲೈನ್ ಹಾಗೂ ಎಎಂಜಿ ಲೈನ್. ಪ್ರೋಗ್ರೆಸ್ಸಿವ್ ಲೈನ್ ರೂಪಾಂತರ ಪೆಟ್ರೋಲ್ - ಡೀಸೆಲ್ ಎಂಜಿನ್ ಮತ್ತು ಎಎಂಜಿ ಲೈನ್ ರೂಪಾಂತರ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಪವರ್‌ಟ್ರೇನ್ ಗೆ ತಕ್ಕಂತೆ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿವೆ.

ಪೆಟ್ರೋಲ್ ಎಂಜಿನ್ ಆಯ್ಕೆ ಬಗ್ಗೆ ಹೇಳುವುದಾದರೆ, 1.3-ಲೀಟರ್ ಯುನಿಟ್ 160 ಬಿಹೆಚ್‌ಪಿ ಗರಿಷ್ಠ ಪವರ್, 270 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 7-ಸ್ವೀಡ್ ಡುಯಲ್ ಕ್ಲಚ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಕೇವಲ 8.9 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆಯಲಿದ್ದು, 17.4 ಕಿ.ಮೀ ಮೈಲೇಜ್ ನೀಡುತ್ತದೆ.

Mercedes Benz 2024 GLC And GLE 53 Coupe Facelift Launched In India

ಈ ಮರ್ಸಿಡಿಸ್ ಬೆಂಜ್ ಜಿಎಲ್ಎ ಕಾರಿನ 2.0-ಲೀಟರ್ ಡಿಸೇಲ್ ಎಂಜಿನ್ ಕುರಿತು ಮಾತನಾಡುವುದಾದರೆ, ಇದು 187 ಬಿಹೆಚ್‌ಪಿ ಪವರ್, 400 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 7.5 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ಇಂಧನ ದಕ್ಷತೆ ಕುರಿತು ಮಾತನಾಡುವುದಾದರೆ, ಪ್ರತಿ ಲೀ.ಗೆ 18.9 ಕಿ.ಮೀ ಮೈಲೇಜ್ ಕೊಡುತ್ತದೆ.

ವಿನ್ಯಾಸದ ದೃಷ್ಟಿಯಿಂದಲೂ ನವೀಕರಿಸಿದ ಮರ್ಸಿಡಿಸ್ ಬೆಂಜ್ ಜಿಎಲ್ಎ ಎಸ್‌ಯುವಿ ಹೆಚ್ಚು ಅತ್ಯಾಧುನಿಕವಾಗಿದೆ. ಪ್ರೋಗ್ರೆಸ್ಸಿವ್ ಲೈನ್ ರೂಪಾಂತರ ಮುಂಭಾಗ (ಫ್ರಂಟ್) ಹೊಸದಾದ ಗ್ರಿಲ್ ಹೊಂದಿದೆ. ಜೊತೆಗೆ ಏಪ್ರನ್ ವಿನ್ಯಾಸ (ಡಿಸೈನ್) ಪಡೆದಿದೆ. ಎಎಂಜಿ ಲೈನ್ ರೂಪಾಂತರ ಸಹ ಅತ್ಯುತ್ತಮವಾಗಿದ್ದು, ವಿನೂತನ ಬಂಪರ್ ಹಾಗೂ ಡೈಮಂಡ್ ಗ್ರಿಲ್ ಒಳಗೊಂಡಿದೆ. ಅದು ಬಿಟ್ಟರೆ, ಇವೆರೆಡು ಮಾದರಿಗಳು ಆಕರ್ಷಕ ಹೆಡ್‌ಲ್ಯಾಂಪ್‌, ಅಲಾಯ್ ವೀಲ್ಸ್, ಟೈಲ್ ಲ್ಯಾಂಪ್‌ನ್ನು ಹೊಂದಿವೆ.

Mercedes Benz 2024 GLC And GLE 53 Coupe Facelift Launched In India

ಮರ್ಸಿಡಿಸ್ ಬೆಂಜ್ ಜಿಎಲ್ಎ ಎಸ್‌ಯುವಿ, ಹಲವು ಹೊಚ್ಚ ಹೊಸ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಮೇಲ್ದರ್ಜೆಗೇರಿಸಲಾಗಿದೆ. ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕೀಲೆಸ್ ಗೋ, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್, ಆಕ್ಟಿವ್ ಪಾರ್ಕ್ ಅಸಿಸ್ಟ್, ಅಡಾಪ್ಟಿವ್ ಹೈ ಬೀಮ್ ಅಸಿಸ್ಟ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ಸುರಕ್ಷತೆಯ ಸಲುವಾಗಿ 7 ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ನವೀಕರಿಸಿದ ಮರ್ಸಿಡಿಸ್ ಎಎಂಜಿ ಜಿಎಲ್ಇ 53 ಕೂಪೆ (Mercedes AMG GLE 53 Coupe facelift) ಕೂಡ ಬಿಡುಗಡೆಯಾಗಿದ್ದು, ರೂ.1.85 ಕೋಟಿ ದರವನ್ನು ಹೊಂದಿದೆ. ಇದರ 3.0-ಲೀಟರ್ 6-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್, 435 ಹೆಚ್‌ಪಿ ಮತ್ತು 560 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 9-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

ಎಎಂಜಿ ಜಿಎಲ್ಇ 53 ಕೂಪೆ ಹೊಸದಾದ 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಹೊಂದಿದ್ದು, ಹೆಚ್ಚುವರಿಯಾಗಿ 20 ಹೆಚ್‌ಪಿ ಪವರ್, 200 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಗಂಟೆ 250 ಕಿ.ಮೀ ಗರಿಷ್ಠ ವೇಗವನ್ನು ಪಡೆಯಲಿದೆ. ಈ ಕಾರಿನ ಹೊರ ಮತ್ತು ಒಳಭಾಗದ ವಿನ್ಯಾಸ ಅತ್ಯುತ್ತಮವಾಗಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 9 ಏರ್‌ಬ್ಯಾಗ್‌, ಬ್ಲೈಂಡ್ ಸ್ಪಾಟ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

More from DriveSpark

Article Published On: Wednesday, January 31, 2024, 15:10 [IST]
English summary
2024 mercedes benz glc and gle 53 coupe facelift launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+