2024ರ ಹೊಸ ಹ್ಯುಂಡೈ ಕ್ರೆಟಾ ಡಿಸೈನ್ ಬಹಿರಂಗ: ರಗಡ್ ಲುಕ್‌ನಲ್ಲಿ ಮಿಂಚುತ್ತಿರುವ SUV ವಿಶೇಷತಗಳು!

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಕುತೂಹಲದಿಂದ ಕಾಯುತ್ತಿದ್ದ ತನ್ನ ಹೊಸ SUV ಹುಂಡೈ CRETA ವಿನ್ಯಾಸವನ್ನು ಬಹಿರಂಗಪಡಿಸಿದೆ. ಬಹಿರಂಗಗೊಂಡ ವಿನ್ಯಾಸವನ್ನು ನೋಡಿದರೆ ಹ್ಯುಂಡೈ ತನ್ನ ಮುಂಬರುವ ಹೊಸ ಕ್ರೆಟಾ SUV ಅನ್ನು ಸಾಕಷ್ಟು ಅಡ್ವೆಂಚರ್ ಆಗಿ ಕಾಣಲು ರೂಪಿಸಿರುವಂತೆ ತೋರುತ್ತಿದೆ.

ಆಧುನಿಕ ಎಸ್‌ಯುವಿಗಳ ಜಗತ್ತಿನಲ್ಲಿ ಹೊಸ ಮತ್ತು ಆಕರ್ಷಕವಾದ ಪ್ರೀಮಿಯಂ ಚಾಲನಾ ಅನುಭವ ನೀಡಲು ಹೊಸ ಹುಂಡೈ CRETA ಶೀಘ್ರದಲ್ಲೇ ಎಂಟ್ರಿ ಕೊಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹ್ಯುಂಡೈನ 'ಸೆನ್ಸುಯಸ್ ಸ್ಪೋರ್ಟಿನೆಸ್' ವಿನ್ಯಾಸದೊಂದಿಗೆ ಹೊಸ ಹ್ಯುಂಡೈ CRETA ಆಫ್-ರೋಡ್ ಅಡ್ವೆಂಚರ್ ಮತ್ತು ನಗರ ಪ್ರಯಾಣಕ್ಕಾಗಿ ಒರಟುತನದ ವಿನ್ಯಾಸ ಸ್ಫೂರ್ತಿ ಪಡೆದಿದೆ.

2024-new-hyundai-creta-design-revealed-check-all-details

ಹೊಸ ಹ್ಯುಂಡೈ CRETA ನ ದಪ್ಪವಾದ ಮುಂಭಾಗವು ಹೊಸ ಪ್ಯಾರಾಮೆಟ್ರಿಕ್ ಬ್ಲಾಕ್ ಕ್ರೋಮ್ ಗ್ರಿಲ್ ಮತ್ತು ನೇರವಾದ ಹುಡ್ ವಿನ್ಯಾಸದೊಂದಿಗೆ ದೃಢವಾದ ರಸ್ತೆ ಉಪಸ್ಥಿತಿಯನ್ನು ಪ್ರದರ್ಶಿಸುತ್ತಿದೆ. ವಿಶಿಷ್ಟವಾದ ಕ್ವಾಡ್ ಬೀಮ್ LED ಹೆಡ್‌ಲ್ಯಾಂಪ್‌ಗಳು ಮತ್ತು ಉದ್ದವಾದ LED ಪೊಸಿಷನಿಂಗ್ ಲ್ಯಾಂಪ್‌ಗಳು ಮುಂಭಾಗದ ಗೋಚರತೆಯನ್ನು ಹೆಚ್ಚಿಸುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

ಉಳಿದಂತೆ ಹೊಸ ಕ್ರೆಟಾದ ಸೈಡ್ ಪ್ರೊಫೈಲ್‌ ಹೊಸ ಅಲಾಯ್ ವೀಲ್ ವಿನ್ಯಾಸದೊಂದಿಗೆ ಮತ್ತಷ್ಟು ಎದ್ದುಕಾಣುತ್ತದೆ. ಜೊತೆಗೆ ಹಿಂಬದಿಯ ಪ್ರೊಫೈಲ್ ಹೊಸ ಉದ್ದವಾದ ಕನೆಕ್ಟೆಡ್ LED ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಸಮಗ್ರ LED ಸ್ಟಾಪ್ ಲ್ಯಾಂಪ್‌ನೊಂದಿಗೆ ಸ್ಪೋರ್ಟಿ ಹೊಸ ಸ್ಪಾಯ್ಲರ್ ವಿನ್ಯಾಸದೊಂದಿಗೆ ಟೈಲ್‌ಗೇಟ್ ಮತ್ತು ಸ್ಕಿಡ್ ಪ್ಲೇಟ್‌ನೊಂದಿಗೆ ಬಂಪರ್ ಕೂಡ ಸ್ಪೋರ್ಟಿ ಲುಕ್ ಪಡೆದಿದೆ.

2024-new-hyundai-creta-design-revealed-check-all-details

ಇಂಟೀರಿಯರ್ ವಿಷಯಕ್ಕೆ ಬಂದರೆ ಪ್ರೀಮಿಯಂ ಎಲಿಮೆಂಟ್‌ಗಳನ್ನು ನೀಡಲಾಗಿದೆ. ಹೊಸ ಹ್ಯುಂಡೈ CRETA ಹೊಸ ಉದ್ದವಾದ ಡ್ಯಾಶ್‌ಬೋರ್ಡ್‌ನೊಂದಿಗೆ ಇಂಟಿಗ್ರೇಟೆಡ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಕ್ಲಸ್ಟರ್ ಸ್ಕ್ರೀನ್‌ಗಳು, ಆಧುನಿಕ ಗ್ರಾಫಿಕ್ಸ್‌ನೊಂದಿಗೆ ಪ್ರೀಮಿಯಂ ಲೆಥೆರೆಟ್ ಸೀಟ್‌ಗಳು, ಲೆಥೆರೆಟ್ ಡೋರ್ ಆರ್ಮ್‌ರೆಸ್ಟ್ ಕವರಿಂಗ್, ಲೆಥೆರೆಟ್ ಡಿ ಕಟ್ ಸ್ಟೀರಿಂಗ್ ವೀಲ್, ಲೆಥೆರೆಟ್ ಸಿಫ್ಟರ್ ರೀಪ್ಡ್ ರೀಡಿಯಂಟ್ ಇಂಟೀರಿಯರ್‌ಗಳನ್ನು ಒಳಗೊಂಡಿದೆ.

ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಮತ್ತು ದುಬಾರಿ ಪ್ಯಾಕೇಜ್ ಜೊತೆಗೆ, ಹೊಸ ಹುಂಡೈ CRETA ಒಳಭಾಗವು ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ. ಹೊಸ ಹ್ಯುಂಡೈ CRETA ಕೇವಲ SUV ಮಾತ್ರವಲ್ಲ ಅದರ ಎಸ್‌ಯುವಿ ವಿಭಾಗದಲ್ಲಿ ಶ್ರೇಷ್ಠತೆಯ ಹೊಸ ಯುಗವನ್ನು ಪ್ರಾರಂಭಿಸಲು ಸಜ್ಜಾಗಿರುವ ಐರಾವತ ಎಂದು ಕಂಪನಿ ಹೇಳಿಕೊಂಡಿದೆ.

2024-new-hyundai-creta-design-revealed-check-all-details

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ತರುಣ್ ಗಾರ್ಗ್ ಮಾತನಾಡಿ, "ಮುಂಬರಲಿರುವ ಹೊಸ ಹ್ಯುಂಡೈ ಕ್ರೆಟಾದ ಹೊಸ ವಿನ್ಯಾಸ ಮತ್ತು ಅತ್ಯಾಕರ್ಷಕ ನಿರ್ದೇಶನವನ್ನು ಪ್ರಸ್ತುತಪಡಿಸಲು ನಾವು ಬಹಳ ಸಂತೋಷಪಡುತ್ತೇವೆ. ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಹ್ಯುಂಡೈನ ಸಿಗ್ನೇಚರ್ ಡಿಸೈನ್ ಭಾಷೆಯಾದ 'ಸೆನ್ಸುಯಸ್ ಸ್ಪೋರ್ಟಿನೆಸ್' ಮೂಲಕ ಹೊಸ CRETA ಮತ್ತೊಮ್ಮೆ ಭಾರತದಲ್ಲಿ SUV ಜೀವನಶೈಲಿಯನ್ನು ಕ್ರಾಂತಿಗೊಳಿಸಲು ಸಿದ್ಧವಾಗಿದೆ ಎಂದರು.

ಹೊಸ ಹ್ಯುಂಡೈ CRETA ಸಮಕಾಲೀನ ಮತ್ತು ಸಾಹಸಮಯ SUV ಯನ್ನು ಬಯಸುವವರ ಕನಸುಗಳನ್ನು ಈಡೇರಿಸಲು ಭರವಸೆ ನೀಡುತ್ತದೆ, ಇದು ದೃಢವಾದ ನಿಲುವು ಮತ್ತು ರಸ್ತೆಗಳಲ್ಲಿ ಅಧಿಕೃತ ಉಪಸ್ಥಿತಿಯನ್ನು ಹೊಂದಿದೆ. ಹ್ಯುಂಡೈನ ಸಾಬೀತಾದ SUV ಡಿಎನ್‌ಎಯಲ್ಲಿ ಬೇರೂರಿದೆ, ಈ ಅದ್ಭುತ ಕೊಡುಗೆಯು ನಿಮ್ಮ ಅಲೆದಾಡುವಿಕೆಯ ಮುಂಚೂಣಿಯಲ್ಲಿದೆ ಎಂದು ತರುಣ್ ಗಾರ್ಗ್ ಹೇಳಿದರು.

2024-new-hyundai-creta-design-revealed-check-all-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 8, 2024, 16:22 [IST]
English summary
2024 new hyundai creta design revealed check all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+