Maruti Suzuki: ಸದ್ದಿಲ್ಲದೇ ಈ ಹೊಸ ಕಾರಿನ ಬಿಡುಗಡೆಗೆ ಡೇಟ್ ಫಿಕ್ಸ್.. 5-ಸೀಟರ್, ಅತಿಕಡಿಮೆ ಬೆಲೆ.. 32 Km ಮೈಲೇಜ್?

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited - MSIL), ನಂಬರ್ 1 ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ನವೀಕರಿಸಿದ ಡಿಜೈರ್ (Dzire) ಸೆಡಾನ್‌ ಮಾರಾಟಕ್ಕೆ ತರಲು ದಿನಾಂಕ ನಿಗದಿಪಡಿಸಿದೆ ಎಂದು ವರದಿಯಾಗಿದೆ. ನೂತನ ಕಾರನ್ನು ಇದೇ ನವೆಂಬರ್ 4ರಂದು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ ಎಂದು ತಿಳಿದುಬಂದಿದೆ. ಈ ಸೆಡಾನ್‌ನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಜೊತೆಗೆ ಹತ್ತಾರು ಹೊಸತನಗಳಿಗೂ ಸಾಕ್ಷಿಯಾಗಿರಲಿದೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ವಿನ್ಯಾಸ (Design): ಈ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್ ಹೊರಭಾಗದಲ್ಲಿ (ಔಟ್-ಸೈಡ್) ಅತ್ಯಾಕರ್ಷಕವಾದ ವಿನ್ಯಾಸ ಒಳಗೊಂಡಿರುವ ಸಾಧ್ಯತೆಯಿದೆ. ಮುಂಭಾಗ (ಫ್ರಂಟ್) ಹೊಸದಾಗಿರುವ ಗ್ರಿಲ್, ಬಂಪರ್, ಉತ್ತಮವಾಗಿರುವ ಎಲ್ಇಡಿ ಹೆಡ್‌ಲೈಟ್‌ಗಳು, ಫಾಗ್ ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿರಲಿದೆ. ಅಲಾಯ್ ವೀಲ್‌ಗಳನ್ನು ಪಡೆದುಕೊಂಡಿರಲಿದ್ದು, ಹಿಂಭಾಗ (ರೇರ್) ಕೂಡ ಮರುವಿನ್ಯಾಸಗೊಳಿಸಲಾದ ಎಲ್ಇಡಿ ಟೈಲ್‌ಲೈಟ್ ಸೆಟಪ್ ಹೊಂದಿರುವ ನಿರೀಕ್ಷೆಯಿದೆ.

2024 New Maruti Suzuki Dzire Sedan Launch Very Soon Expected Price Mileage And Features Details

ಆಸನಗಳು & ಬಣ್ಣದ ಆಯ್ಕೆ (Seats & Color Options): ನೂತನ ಕಾರು, ಒಳಭಾಗವು ಅತ್ಯುತ್ತಮವಾದ ವಿನ್ಯಾಸ ಪಡೆದಿರಲಿದ್ದು, 5 ಆಸನ (ಸೀಟರ್) ಆಯ್ಕೆ ವ್ಯವಸ್ಥೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಆರ್ಕ್ಟಿಕ್ ವೈಟ್, ಶೆರ್ವುಡ್ ಬ್ರೌನ್, ಫೀನಿಕ್ಸ್ ರೆಡ್, ಬ್ಲೂಶ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ (ಕಲರ್) ಆಯ್ಕೆಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ಷಮತೆ (Performance): ಹೊಚ್ಚ ಹೊಸ ಡಿಜೈರ್ ಸೆಡಾನ್ ಶಕ್ತಿಯುತವಾಗಿರುವ 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಒಳಗೊಂಡಿರಲಿದ್ದು, 82 ಬಿಹೆಚ್‍ಪಿ ಅಶ್ವ ಶಕ್ತಿ ಮತ್ತು 108 ಎನ್ಎಂ ಪೀಕ್ ಟಾರ್ಕ್ ಹೊರಹಾಕಬಹುದು ಎಂದು ಎಂದು ಅಂದಾಜಿಸಲಾಗಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿರುವ ಸಾಧ್ಯತೆಯಿದ್ದು, ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯಲ್ಲಿ ಮಾರಾಟಕ್ಕೂ ಬರಬಹುದು. ಸರಿ ಸುಮಾರು 32 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಹುದು ಎನ್ನಲಾಗಿದೆ.

ವೈಶಿಷ್ಟ್ಯಗಳು (Features): ಈ ಮಾರುತಿ ಸುಜುಕಿ ಡಿಜೈರ್ ಕಾರು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೆಟ್ ಕಂಟ್ರೋಲ್, ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಸನ್‌ರೂಫ್ ಮತ್ತು ರೇರ್ ಎಸಿ ವೆಂಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features): ನೂತನ ಡಿಜೈರ್ ಸೆಡಾನ್ ಸುರಕ್ಷತೆಗೂ ಹೆಸರುವಾಸಿಯಾಗಿರಲಿದೆ. ಪ್ರಯಾಣಿಕರ ರಕ್ಷೆಣೆಗೆ 6 ಏರ್‌ಬ್ಯಾಗ್‌ಗಳು ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್‌ ಬ್ರೇಕ್‌ಫೋರ್ಸ್‌ ಡಿಸ್ಟ್ರಿಬೂಷನ್‌), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೆನ್ಸರ್ಸ್, 3-ಪಾಯಿಂಟ್ ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿರುವ ಸಾಧ್ಯತೆಯಿದೆ.

ಬೆಲೆ (Price): ಈ ಕಾರು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.6.70 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ದರವನ್ನು ಹೊಂದಿರಬಹುದು ಎನ್ನಲಾಗಿದೆ. ಡಿಜೈರ್ ಸೆಡಾನ್‌ಗೆ ಹೋಂಡಾ ಅಮೇಜ್, ಹ್ಯುಂಡೈ ಔರಾ ಹಾಗೂ ಟಾಟಾ ಟಿಗೂರ್ ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಟ್ಟಾರೆಯಾಗಿ ಮಾರುತಿ ಸುಜುಕಿ ಡಿಜೈರ್ ಸೆಡಾನ್ ಸಣ್ಣ ಕುಟುಂಬಗಳಿಗೆ ಉತ್ತಮವಾದ ಕಾರಾಗಲಿದೆ. ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡು ಮಾರಾಟಕ್ಕೆ ಬರುವುದರಿಂದ ಹಲವರ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ. ಈ ಕಾರು ಬಿಡುಗಡೆಯಾದ ಮೇಲೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 21, 2024, 13:49 [IST]
English summary
2024 new maruti suzuki dzire sedan launch very soon expected price mileage features details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+