7.22 ಲಕ್ಷಕ್ಕೆ ಬೆಸ್ಟ್ 7-ಸೀಟರ್: 20 ಕಿ.ಮೀ ಮೈಲೇಜ್... ಗರಿಷ್ಟ ಸುರಕ್ಷತೆಯ ಕಾರು
ಭಾರತದಲ್ಲಿ ಬೆಸ್ಟ್ ಬಜೆಟ್ 7-ಸೀಟರ್ ಕಾರು ಎಂದಾಕ್ಷಣ ನಮಗೆ ಮೊದಲು ನೆನಪಾಗುವುದು ಮಾರುತಿ ಎರ್ಟಿಗಾ, ಆದರೆ ಎರ್ಟಿಗಾಗೆ ಸವಾಲು ಹಾಕುವ ಕೆಲವು ಕಾರಗಳು ಕೂಡ ಇವೆ. ಇದರಲ್ಲಿ ರೆನಾಲ್ಟ್‌ನ ಟ್ರೈಬರ್ ಒಂದಾಗಿದ್ದು, 7-ಆಸನಗಳೊಂದಿಗೆ ಆರಾಮದಾಯಕ ಪ್ರಯಾಣ ಅನುಭವ ನೀಡುವಲ್ಲಿ ಮೆಚ್ಚುಗೆ ಪಡೆದಿದೆ. ರೆನಾಲ್ಟ್ ಕಂಪನಿ ಮಾರಾಟಗೊಳಿಸುವ ಈ ಟ್ರೈಬರ್ (Triber) ಕಾರು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಲ್ಲಿ ಈ ಕಾರಿನ ಸುರಕ್ಷತೆ, ಮೈಲೇಜ್, ಫೀಚರ್ಸ್, ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ತಿಳಿಯೋಣ.
ಸುರಕ್ಷತೆ: 2024ರ ಟ್ರೈಬರ್ ಕಾರು 4-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಬರುತ್ತದೆ. ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಸ್ಟಾರ್ಟ್ ಅಸಿಸ್ಟ್ (HSA), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಇವಿಷ್ಟೇ ಅಲ್ಲದೇ ನಾಲ್ಕು ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ವ್ಯೂ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಸಹ ಹೊಂದಿದೆ.

ವೈಶಿಷ್ಟ್ಯಗಳು: ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮೊಬೈಲ್ ಫೋನ್ ಸಂಪರ್ಕ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಸ್ಟೀರಿಂಗ್-ಮೌಂಟೆಡ್ ಆಡಿಯೋ ಕಂಟ್ರೋಲ್, ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಎರಡನೇ ಮತ್ತು ಮೂರನೇ ಸಾಲುಗಳಿಗೆ AC ವೆಂಟ್‌ಗಳು, ಸೆಂಟರ್ ಕನ್ಸೋಲ್‌ನಲ್ಲಿ ಕೂಲ್ಡ್ ಸ್ಟೋರೇಜ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸಾಮಾನ್ಯ ಕೀ ಬದಲಿಗೆ ಉನ್ನತ ರೂಪಾಂತರಗಳಲ್ಲಿ ಸ್ಮಾರ್ಟ್ ಕಾರ್ಡ್ ಪ್ರವೇಶದ ಕೀ ಲಭ್ಯವಿದೆ.
ಎಂಜಿನ್: ಹೊಸ ಟ್ರೈಬರ್ 1-ಲೀ. ನ್ಯಾಚುರಲ್ಲಿ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಗರಿಷ್ಠ 72 ಬಿಎಚ್‌ಪಿ ಪವರ್ ಮತ್ತು 96 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಮೈಲೇಜ್ ವಿಷಯಕ್ಕೆ ಬಂದರೆ ಈ ಕಾರು 18.2 ರಿಂದ 20 kmpl ಮೈಲೇಜ್ ನೀಡುತ್ತದೆ.

ಆನ್‌ರೋಡ್ ಬೆಲೆ: 2024ರ ಹೊಸ ರೆನಾಲ್ಟ್ ಟ್ರೈಬರ್ RXE, RXL, RXT, RXZ ಎಂಬ ನಾಲ್ಕು ರೂಪಾಂತರಗಳಲ್ಲಿ ತರಲಾಗಿದೆ. ಬೆಂಗಳೂರಿನಲ್ಲಿ ರೆನಾಲ್ಟ್ ಟ್ರೈಬರ್ ಬೇಸ್ ಮಾಡೆಲ್ (ಆರಂಭಿಕ ಆವೃತ್ತಿ) RXE ರೂ.7.22 ಲಕ್ಷ, RXL ರೂ.8.17 ಲಕ್ಷ, ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಳ್ಳುವ RXT ರೂ.9.13 ಲಕ್ಷ, RXZ ರೂ.9.87 ಲಕ್ಷ ಆನ್‌ರೋಡ್ ಬೆಲೆಯನ್ನು ಹೊಂದಿವೆ.
ಉಳಿದಂತೆ RXZ ಡುಯಲ್ ಜೋನ್ ರೂ.10.14 ಲಕ್ಷ ಹಾಗೂ ಟಾಪ್ ಎಂಡ್ ಮಾಡೆಲ್ (ಗರಿಷ್ಠ ಆವೃತ್ತಿ) RXZ ಈಜಿ-ಆರ್ ಎಎಂಟಿ ಡುಯಲ್ ಟೋನ್ ರೂ.10.76 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ನೀವು ಈ ಕಾರನ್ನು ರೂ.72,000 ಡೌನ್ ಪೇಮೆಂಟ್ ಪಾವತಿಸಿ ಖರೀದಿಸಿದರೆ, ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ಮಾಸಿಕ ರೂ.13,738 ಇಎಂಐ ಕಟ್ಟಬೇಕಾಗುತ್ತದೆ.

ರೆನಾಲ್ಟ್ ಟ್ರೈಬರ್ ಐಸ್ ಕೂಲ್ ವೈಟ್, ಸೀಡರ್ ಬ್ರೌನ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ಲಭ್ಯವಿದೆ. ಇದರಲ್ಲಿ 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ಕಾರಿಗೆ ಮಹೀಂದ್ರಾ ಬೊಲೆರೊ ಪ್ರಬಲ ಎದುರಾಳಿಯಾಗಿದೆ. ಕಾರು ಖರೀದಿಸಲು ನೋಡುತ್ತಿದ್ದವರು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಶೋರೂಂಗೆ ಭೇಟಿ ನೀಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








