2024 ರಲ್ಲಿ ಜನ ಮುಗಿಬಿದ್ದು ಖರೀದಿಸಿದ ಕಾರುಗಳಿವು! ಈ 4 ಎಸ್‌ಯುವಿಗಳಿಗೆ ಮನಸೋತರು!
ಹ್ಯಾಚ್‌ಬ್ಯಾಕ್‌ಗಳು (Hatchback) ಇಲ್ಲಿಯವರೆಗೆ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ದೃಢವಾದ ಸ್ಥಾನವನ್ನು ಹೊಂದಿದ್ದವು, ಆದರೆ 2024 ರಲ್ಲಿ ಎಸ್‌ಯುವಿಗಳ (SUV) ಪ್ರಭಾವ ಹೆಚ್ಚಿದಂತಿದೆ. ಅದರಲ್ಲೂ ಹ್ಯಾಚ್‌ಬ್ಯಾಕ್ ಮಾರಾಟವನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿವೆ. ಭಾರತೀಯ ಗ್ರಾಹಕರ ಪ್ರಾಧಾನ್ಯತೆಗಳಲ್ಲಿ ಈ ಬದಲಾವಣೆ ಎಸ್‌ಯುವಿಗಳ ಮುಂದುವರೆದ ಪ್ರಭಾವವನ್ನು ತೋರಿಸುತ್ತಿದೆ. ಎಸ್‌ಯುವಿ ವಿಭಾಗವು ಹ್ಯಾಚ್‌ಬ್ಯಾಕ್ ಸ್ಥಾನವನ್ನು ಇದೀಗ ಆಕ್ರಮಿಸಿದೆ. 2024 ರಲ್ಲಿ ಭಾರತದಲ್ಲಿ ಗ್ರಾಹಕರು ಹೆಚ್ಚು ಇಷ್ಟಪಟ್ಟು ಖರೀದಿಸಿರುವ ಜನಪ್ರಿಯ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
ಮಾರುತಿ ಬ್ರೆಝಾ: ಹೊಸ ಸಬ್ - ಕಾಂಪ್ಯಾಕ್ಟ್ ಎಸ್‌ಯುವಿಗಳಂತೆ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿರದಿದ್ದರೂ, ಮಾರುತಿ ಬ್ರೆಝಾ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇದರ ಯಶಸ್ಸಿನ ಹಿಂದಿನ ಕಾರಣವೇನೆಂದರೆ, ಬ್ರೆಝಾ ಉತ್ತಮ ಮೈಲೇಜ್ ಕೊಡುತ್ತದೆ. ಇದು ಅದರ ಮಾರಾಟದ ಸಾಧನೆಗೆ ಹಾಗೂ ಸ್ಥಳಾವಕಾಶಕ್ಕೆ ಮಹತ್ವಪೂರ್ಣವಾಗಿದೆ. ಮಾರುತಿ ಮಾರಾಟ ಜಾಲ ಹಾಗೂ ಬ್ರೆಝಾ ಹೊಸ ವಿನ್ಯಾಸವು ಹೊಸ ಸ್ಪರ್ಧೆಯ ನಡುವೆಯೂ ತಾಜಾ ಕಾಣಿಕೆಗೆ ಸಹಾಯಕವಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ: ಮಹೀಂದ್ರಾ ಸ್ಕಾರ್ಪಿಯೋ ಹಳವು ವರ್ಷಗಳಿಂದ ಪ್ರಖ್ಯಾತಿಯಲ್ಲಿರೋ ಎಸ್‌ಯುವಿ ಆಗಿದ್ದು, ಅದರ ಹೊಸ ಆವೃತ್ತಿಯಾದ ಸ್ಕಾರ್ಪಿಯೋ - ಎನ್ ತನ್ನ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಹೊಸ ಸ್ಕಾರ್ಪಿಯೋ ಎನ್ ಎಸ್‌ಯುವಿಯು ಅದ್ಭುತ ವಿನ್ಯಾಸ ಹಾಗೂ ಚಾಲನಾ ಅನುಭವವನ್ನು ಹೊಂದುವ ಮೂಲಕ ಗ್ರಾಹಕರ ಮನಗೆದ್ದಿದೆ.
ಹೊಸ ಮಹೀಂದ್ರಾ ಸ್ಕಾರ್ಪಿಯೋ - ಎನ್ ವೈಶಿಷ್ಟ್ಯಗಳಿಂದ ತುಂಬಿದ ಆಕರ್ಷಕ ಎಸ್‌ಯುವಿ ಇದಾಗಿದ್ದು, ಇತರ ಎಸ್‌ಯುವಿಗಳಿಗೆ ತೀವ್ರ ಪೈಪೋಟಿ ನೀಡುತ್ತದೆ. ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಒದಗಿಸುತ್ತಿರುವುದು ಗ್ರಾಹಕರಗೆ ಬೆಸ್ಟ್ ಆಯ್ಕೆ ಎನಿಸಿಕೊಂಡಿದೆ. ಸದ್ಯ ಆರಾಮ ಪ್ರಯಾಣ ಅನುಭವದ ಜೊತೆಗೆ ವೈಶಿಷ್ಟ್ಯಗಳಿಂದ ಪ್ಯಾಕ್ ಮಾಡಿದ ಎಸ್‌ಯುವಿ ಎಂದರೆ ತಪ್ಪಾಗುವುದಿಲ್ಲ.

ಟಾಟಾ ಪಂಚ್: ಟಾಟಾ ಪಂಚ್ ಪ್ರಸ್ತುತ ಭಾರತದಲ್ಲಿ ಜನಪ್ರಿಯ ಕಾರಾಗಳುಗಳಲ್ಲಿ ಒಂದಾಗಿದ್ದು, 2024 ರಲ್ಲಿ ತನ್ನ ಯಶಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಇವಿ ಆವೃತ್ತಿಯ ಪರಿಷ್ಕರಣೆಗಳು ಹಾಗೂ ನವೀಕರಣಗಳೊಂದಿಗೆ, ಪಂಚ್ ಕಾರು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ. ಡೀಸೆಲ್ ಆವೃತ್ತಿಯ ಕೊರತೆಯಿದ್ದರೂ, ತನ್ನ ವಿನ್ಯಾಸ, ವೈಶಿಷ್ಟ್ಯಗಳು ಹಾಗೂ ಗಟ್ಟಿತನದ ಜೊತೆಗೆ ಇದರ ಕಡಿಮೆ ಬೆಲೆಯು ಪಂಚ್ ಯಶಸ್ಸಿಗೆ ಕಾರಣವಾಗಿದೆ.
ಹ್ಯುಂಡೈ ಕ್ರೆಟಾ: ಹ್ಯುಂಡೈ ಕ್ರೆಟಾ ರೂ. 10 ಲಕ್ಷದೊಳಗೆ ಸಿಗದ ಕಾರಾಗಿದ್ದರೂ, 2024 ರಲ್ಲಿ ಇದು ಭಾರತದಲ್ಲಿ ಮಾರಾಟವಾಗುವ ಟಾಪ್ 3 ಕಾರುಗಳಲ್ಲೊಂದಾಗಿದೆ. ಕ್ರೆಟಾ ಈ ವರ್ಷದ ಆರಂಭದಲ್ಲಿ ನವೀಕರಣವನ್ನು ಹೊಂದಿದ್ದು, ಫೇಸ್‌ಲಿಫ್ಟ್ ಮಾಡಲ್‌ನೊಂದಿಗೆ ತನ್ನ ಮಾರಾಟವನ್ನು ಹೆಚ್ಚಿಸಿದೆ. ಹೊಸ ವಿನ್ಯಾಸ ವೈಶಿಷ್ಟ್ಯಗಳೊಂದಿಗೆ ಧೂಳೆಬ್ಬಿಸಿದೆ.

ಹ್ಯುಂಡೈ ಕ್ರೆಟಾ ಎರಡು ಪೆಟ್ರೋಲ್ ಆಯ್ಕೆಗಳು ಹಾಗೂ ಡೀಸೆಲ್ ಆವೃತ್ತಿಯನ್ನು ಹೊಂದಿದೆ. ಜೊತೆಗೆ ಇಂಟೀರಯರ್ ಅನ್ನು ಹೊಸದಾಗಿ ನವೀಕರಿಸಲಾಗಿದೆ. ಹ್ಯುಂಡೈ ಕ್ರೆಟಾದ ಹೊಸ ಆವೃತ್ತಿಯನ್ನು ತರಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗಿದೆ. ಹಾಗೆಯೇ ಮುಂದಿನ ಎಲೆಕ್ಟ್ರಿಕ್ ಆವೃತ್ತಿಯು ಕ್ರೆಟಾ ಮಾರಾಟವನ್ನು ಮತ್ತಷ್ಟು ಉತ್ತೇಜಿಸುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications