ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು: ಗರಿಷ್ಟ ಸುರಕ್ಷತೆ, 6 ಏರ್‌ಬ್ಯಾಗ್, ಸನ್‌ರೂಫ್

ಟಾಟಾ ಮೋಟಾರ್ಸ್ ಎಂಟ್ರಿ ಲೆವಲ್ ವಿಭಾಗದಲ್ಲಿ ಭಾರೀ ಹೆಸರು ಮಾಡಿರುವ ಪಂಚ್ ಕಾರು ಸದ್ಯ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಸದ್ದು ಮಾಡುತ್ತಿದೆ. ಟಾಟಾದ ಎಲ್ಲಾ ಕಾರುಗಳಂತಯೇ ಗರಿಷ್ಟ ಸುರಕ್ಷತೆಯೊಂದಿಗೆ ಪಂಚ್ ಎಲೆಕ್ಟ್ರಿಕ್ ಕಾರು ಕೂಡ ಸುರಕ್ಷತೆಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದರ ಬೆಲೆಯು 10.99 ಲಕ್ಷ (ex-showroom) ರೂ.ನಿಂದ ಆರಂಭವಾಗುತ್ತದೆ. ಇನ್ನು ಇದರಲ್ಲಿ ಟಾಪ್‌ ಎಂಡ್ ಆವೃತ್ತಿಯಾದ ಟಾಟಾ ಪಂಚ್ ಅಡ್ವೆಂಚರ್ 12.49 ಲಕ್ಷ (ex-showroom) ರೂ. ಬೆಲೆಯಿದೆ. ಹೊಸ ಟಾಟಾ ಪಂಚ್ ಇವಿ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.

ಡಿಸೈನ್‌ ವಿಷಯಕ್ಕೆ ಬಂದರೆ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ಸಂಪೂರ್ಣ ಎಲ್‌ಇಡಿ ಲೈಟಿಂಗ್ ಸೆಟ್‌ ಅಪ್‌ ಅನ್ನು ಕಾಣಬಹುದಾಗಿದೆ. ಇದು ಮಾತ್ರವಲ್ಲದೇ ಕಾರಿನ ಗ್ರಿಲ್ ನಲ್ಲಿಯೇ ನಿಮಗೆ ಚಾರ್ಜಿಂಗ್ ಸಾಕೆಟ್‌ ಸಹ ನೀಡಿದ್ದು, ಇದು ಈ ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಆಕರ್ಷಕ ಲುಕ್ ನಿಡುತ್ತದೆ.

2024-tata-punch-ev-price-range-features-details

ಈ ಕಾರು ಮುಂಭಾಗದಲ್ಲಿನ ಗ್ರಿಲ್ ಸಂಪೂರ್ಣ ಮುಚ್ಚಿದ್ದು ಇದರಲ್ಲಿಯೇ 360 ಡಿಗ್ರೀ ಕ್ಯಾಮೆರಾವನ್ನು ಇರಿಸಲಾಗಿದೆ. ಉಳಿದಂತೆ ಥೇಟ್‌ ಟಾಟಾ ಪಂಚ್ ಇಂಧನ ಚಾಲಿತ ಕಾರಿನಂತೆಯೇ ಕಾಣುತ್ತದೆ. ಇದರ ಗಾತ್ರ ಮತ್ತು ಇತರ ಬಹುತೇಕ ಡಿಸೈನ್‌ ವಿನ್ಯಾಸಗಳು ಆ ಕಾರಿನಂತೆಯೇ ಇದ್ದು, ಪೆಟ್ರೋಲ್‌ ಬದಲಾಗಿ ಇದು ಎಲೆಕ್ಟ್ರಿಕ್‌ನಲ್ಲಿದೆ.

ಇಂಟೀರಿಯರ್ ವಿಷಯಕ್ಕೆ ಬಂದರೆ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ನವೀಕರಿಸಿದ ಸೆಂಟರ್ ಕನ್ಸೋಲ್ ಈಗ ಟಚ್ ಸೆನ್ಸಿಟಿವ್ ಎಸಿ ಕಂಟ್ರೋಲ್ ಪ್ಯಾನೆಲ್ ಅನ್ನು ಸಂಯೋಜಿಸಿದೆ. ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ನೀಡಲಾಗಿದೆ. ಈ ಯುನಿಟ್ Apple CarPlay ಮತ್ತು Android Auto ಎರಡಕ್ಕೂ ಕನೆಕ್ಟ್ ಆಗುತ್ತದೆ. ಹೆಚ್ಚುವರಿಯಾಗಿ ಟಾಟಾ ಪಂಚ್ ಇವಿ ಹೊಸ ಟು-ಸ್ಪೋಕ್ ಸ್ಟೀರಿಂಗ್ ವೀಲ್‌ನಲ್ಲಿ ಟಾಟಾ ಲೋಗೋವನ್ನು ನೀಡಲಾಗಿದೆ.

2024-tata-punch-ev-price-range-features-details

ಏರ್ ಪ್ಯೂರಿಫೈಯರ್ ಜೊತೆಗೆ ಆಟೋ ಫೋಲ್ಡ್ ORVM ಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಹೊಸ ಡ್ಯುಯಲ್-ಟೋನ್ ಅಪ್ಹೋಲ್ಸ್ಟರಿ, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು AQI ಡಿಸ್ಪ್ಲೇ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಲೆಥೆರೆಟ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್ ಮತ್ತು ಸನ್‌ರೂಫ್ ನೀಡಲಾಗಿದೆ.

ಸುರಕ್ಷತೆ: ಟಾಟಾ ಪಂಚ್ ಇವಿ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಲ್‌ ಹೋಲ್ಡ್‌ ಕಂಟ್ರೋಲ್‌, ಎಬಿಎಸ್ ಮತ್ತು ಇಬಿಡಿ, ಡಿಸ್ಕ್‌ ಬ್ರೇಕ್‌ಗಳು, ಹಿಲ್‌ ಡಿಸೆಂಟ್‌ ಕಂಟ್ರೋಲ್‌ ಮತ್ತು ಬ್ಲೈಂಡ್‌ ಸ್ಪಾಟ್‌ ವ್ಯೂವ್‌ ಮಿರರ್‌ಗಳು ಲಭ್ಯವಿದೆ. ಬ್ಯಾಟರಿ ಮತ್ತು ರೇಂಜ್ ಬಗ್ಗೆ ಹೇಳುವುದಾದ್ರೆ, ಟಾಟಾ ಮೋಟಾರ್ಸ್ ಈ ಕಾರಿನಲ್ಲಿ ಎರಡು ವೇರಿಯಂಟ್‌ಗಳನ್ನು ಪರಿಚಯಿಸಿದೆ.

2024-tata-punch-ev-price-range-features-details

ಒಂದು ಟಾಟಾ ಪಂಚ್‌ ಇವಿ ಮತ್ತು ಇನ್ನೊಂದು ಟಾಟಾ ಪಂಚ್‌ ಇವಿ ಲಾಂಗ್‌ ರೇಂಜ್. ಟಾಟಾ ಪಂಚ್ ಇವಿ ವೇರಿಯಂಟ್‌ನಲ್ಲಿ 25kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 315km ರೇಂಜ್‌ ನೀಡುವುದರ ಜೊತೆಗೆ 80.46bhp ಪವರ್ ಹಾಗೂ 114Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಾಟಾ ಪಂಚ್ ಇವಿಯ ಮತ್ತೊಂದು ವೇರಿಯಂಟ್ ಆದ ಲಾಂಗ್‌ ರೇಂಜ್ ನಲ್ಲಿ 35kWh ಬ್ಯಾಟರಿ ಪ್ಯಾಕ್‌ ದೊರಕುತ್ತದೆ. ಈ ಬ್ಯಾಟರಿ ಸಹಾಯದಿಂದ ಕಾರು 421km ರೇಂಜ್ ನೀಡುವುದರ ಜೊತೆಗೆ 120.7bhp ಪವರ್ ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

Article Published On: Saturday, July 13, 2024, 16:00 [IST]
English summary
2024 tata punch ev price range features details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+