Alto: ಸಿಹಿಸುದ್ದಿ.. ಭಾರೀ ಕಡಿಮೆ ಬೆಲೆಗೆ ಹೊಸ ರೂಪದಲ್ಲಿ 'ಆಲ್ಟೊ' ಕಾರು ಬರುವುದು ಪಕ್ಕಾ, 30 Km ಮೈಲೇಜ್?

'ಮಾರುತಿ ಸುಜುಕಿ' ಮಾತೃ ಸಂಸ್ಥೆ ಸುಜುಕಿ (Suzuki) ಜಪಾನ್ ಮಾರುಕಟ್ಟೆಯಲ್ಲಿ ಮಾರಾಟಗೊಳಿಸುವ ಆಲ್ಟೊ (Alto) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟುಪಟ್ಟು ಖರೀದಿ ಮಾಡುತ್ತಿದ್ದಾರೆ. 2021ರಲ್ಲಿ 9ನೇ ತಲೆಮಾರಿನ ಆಲ್ಟೊ ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಸದ್ಯ, ಈ ಕಾರು ಉತ್ತಮವಾಗಿ ಮಾರಾಟವಾಗುತ್ತಿದೆ. 2026ರಲ್ಲಿ 10ನೇ ತಲೆಮಾರಿನ ಆಲ್ಟೊ ಹ್ಯಾಚ್‌ಬ್ಯಾಕ್‌ನ್ನು ಪರಿಚಯಿಸಲು 'ಸುಜುಕಿ' ಕಂಪನಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಆ ಬಳಿಕ ಭಾರತದಲ್ಲಿಯೂ ನೂತನ ಆಲ್ಟೊ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.

ಈ ಸುಜುಕಿ ಆಲ್ಟೊ ಕಾರು ದಶಕಗಳಿಂದ ಖ್ಯಾತಿಗಳಿಸಿದ್ದು, 1979ರಲ್ಲಿ ಜಪಾನ್‌ನಲ್ಲಿ ಮಾರಾಟಕ್ಕೆ ತರಲಾಗಿತ್ತು. ನಂತರ 2000ರಲ್ಲಿ ಮಾರುತಿ ಸುಜುಕಿ ನೂತನ ಆಲ್ಟೊ ಹ್ಯಾಚ್‌ಬ್ಯಾಕ್‌ನ್ನು ಭಾರತದ ಮಾರುಕಟ್ಟೆಯಲ್ಲಿಯೂ ಪರಿಚಯಿಸಿತ್ತು. ಇದು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ವರ್ಗದ ಜನರನ್ನು ಸೆಳೆಯಲು ಯಶಸ್ವಿ ಸಹ ಆಗಿದೆ.

30 Km Mileage New Generation Suzuki Alto Launch In 2026 Details

ಜಪಾನ್‌ ಮಾರುಕಟ್ಟೆಯಲ್ಲಿ ಮಾರಾಟಗಳಿಸುತ್ತಿರುವ ಆಲ್ಟೊ 680 ರಿಂದ 760 ಕೆಜಿ ತೂಕವಿದೆ. 10ನೇ ತಲೆಮಾರಿನ ಆಲ್ಟೊ ಕಾರನ್ನು ಉನ್ನತ ತಂತ್ರಜ್ಞಾನ ಬಳಸಿ, ಸಿದ್ಧಪಡಿಸಲು ಉದ್ದೇಶಿಸಲಾಗಿದ್ದು, 100 ಕೆಜಿ ಹಗುರವಾಗಿರಲಿದೆ ಎಂದು ತಿಳಿದುಬಂದಿದೆ. ಈ ಕಾರು ಸರಿ ಸುಮಾರು 580 ರಿಂದ 660 ಕೆಜಿ ತೂಕವಿರಲಿದೆ ಎಂದು ತಿಳಿದುಬಂದಿದೆ.

ಮುಂಬರುವ ಸುಜುಕಿ ಆಲ್ಟೊ ಕಾರು, ಶಕ್ತಿಯುತವಾಗಿರುವ 48ವಿ ಮೈಲ್ಡ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಬರೋಬ್ಬರಿ 30 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಜಪಾನ್‌ನಲ್ಲಿ ಖರೀದಿಗೆ ಲಭ್ಯವಿರುವ ಆಲ್ಟೊ ಹ್ಯಾಚ್‌ಬ್ಯಾಕ್‌ನ ಪೆಟ್ರೋಲ್ ಚಾಲಿತ ರೂಪಾಂತರ (ವೇರಿಯೆಂಟ್) 25.2 ಕೆಎಂಪಿಎಲ್‌ ಮತ್ತು ಮೈಲ್ಡ್ ಹೈಬ್ರಿಡ್ ರೂಪಾಂತರ 27.7 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

30 Km Mileage New Generation Suzuki Alto Launch In 2026 Details

ಜಪಾನ್‌ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯುವ 'ಸುಜುಕಿ ಆಲ್ಟೊ' ಕಾರಿನ ಪೆಟ್ರೋಲ್ ರೂಪಾಂತರ, 1,068,000 ಯೆನ್ (ರೂ. 5.83 ಲಕ್ಷ) ಹಾಗೂ ಮೈಲ್ಡ್ ಹೈಬ್ರಿಡ್ ರೂಪಾಂತರ 1,218,800 ಯೆನ್ (ರೂ.6.65 ಲಕ್ಷ) ದರವನ್ನು ಹೊಂದಿದೆ. ಮುಂಬರಲಿರುವ ಹೊಸ ಆಲ್ಟೊ 1 ಮಿಲಿಯನ್ ಯೆನ್ (ರೂ.5.46 ಲಕ್ಷ) ಬೆಲೆಯಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.

ಮಾರುತಿ ಸುಜುಕಿ ಆಲ್ಟೊ ಕೆ10 ವಿಶೇಷತೆಗಳೇನು: ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೊಚ್ಚ ಹೊಸ ಆಲ್ಟೊ ಕೆ10 ಹ್ಯಾಚ್‌ಬ್ಯಾಕ್ ರೂ.3.99 ಲಕ್ಷದಿಂದ ರೂ.5.96 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 24.39 ರಿಂದ 33.85 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

30 Km Mileage New Generation Suzuki Alto Launch In 2026 Details

ಈ ಕಾರು ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ವಿಎಕ್ಸ್ಐ ಪ್ಲಸ್ ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್ ಮತ್ತು ಮೆಟಾಲಿಕ್ ಗ್ರಾನೈಟ್ ಗ್ರೇ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದರಲ್ಲಿ 4 ಮಂದಿ ಆರಾಮದಾಯಕವಾಗಿ ಪ್ರಯಾಣಿಬಹುದು. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಒಟ್ಟಾರೆಯಾಗಿ 2026ರಲ್ಲಿ ಜಪಾನ್ ಮಾರುಕಟ್ಟೆಯಲ್ಲಿ 10ನೇ ತಲೆಮಾರಿನ ಸುಜುಕಿ ಆಲ್ಟೊ ಹ್ಯಾಚ್‌ಬ್ಯಾಕ್‌ನ್ನು ಪರಿಚಯಿಸುವ ನಿರೀಕ್ಷೆಯಿದೆ. ಆ ನಂತರದ ವರ್ಷಗಳಲ್ಲಿ ಈ ಕಾರು ದೇಶೀಯವಾಗಿಯೂ ಮಾರಾಟಕ್ಕೆ ಬರಬಹುದು. ಇದು ಅತಿಕಡಿಮೆ ಬೆಲೆ ಹಾಗೂ ಆಕರ್ಷಕ ವೈಶಿಷ್ಟ್ಯದೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿರುವುದರಿಂದ ಹಲವು ಸಣ್ಣ ಕುಟುಂಬಗಳ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 25, 2024, 8:00 [IST]
English summary
30 km mileage new generation suzuki alto launch in 2026 details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+