Maruti Suzuki: 2025ಕ್ಕೆ ಬೈಕ್‌ನಂತೆ 35+ Km ಮೈಲೇಜ್ ನೀಡುವ ಹೊಸ ಮಾರುತಿ ಕಾರು ಬಿಡುಗಡೆ.. 5-ಸೀಟರ್, ಯಾವುದು?

ಮಾರುತಿ ಸುಜುಕಿ ಇಂಡಿಯಾ (Maruti Suzuki India) ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಕಂಪನಿಯು ನೆಕ್ಸಾ (NEXA) ಡೀಲರ್‌ಶಿಪ್‌ ಮೂಲಕ ಮಾರಲ್ಪಡುವ ಫ್ರಾಂಕ್ಸ್ (FRONX) ಜನಪ್ರಿಯ ಎಸ್‌ಯುವಿಯಾಗಿ ಮನೆ ಮಾತಾಗಿದೆ. 2023ರ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಈ ಕಾರನ್ನು ಗ್ರಾಹಕರು ಮೆಚ್ಚುಕೊಂಡಿದ್ದು, 17.3 ತಿಂಗಳಲ್ಲಿ 2 ಲಕ್ಷ ಯುನಿಟ್ ಮಾರಾಟ ಮಾಡಲಾಗಿದೆ.

ಸದ್ಯ, ಮಾರುತಿ ಸುಜುಕಿಯು ಇದೇ ಫ್ರಾಂಕ್ಸ್ ಎಸ್‌ಯುವಿಯನ್ನು 2025ರ ವೇಳೆಗೆ ನವೀಕರಿಸಿದ ರೂಪದಲ್ಲಿ ಮಾರಾಟಕ್ಕೆ ತರಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಮುಂಬರಲಿರುವ ಹೊಸ ಕಾರು, 35 ಕಿಲೋಮೀಟರ್‌ಗೂ ಹೆಚ್ಚಿನ ಮೈಲೇಜ್ ನೀಡಬಲ್ಲ ಸ್ಟ್ರಾಂಗ್ ಹೈಬ್ರಿಡ್ (ಪೆಟೋಲ್ + ಎಲೆಕ್ಟ್ರಿಕ್) ಎಂಜಿನ್‌ನ್ನು ಪಡೆದುಕೊಂಡಿರಲಿದೆ ಎಂದು ತಿಳಿದಿಬಂದಿದೆ.

35 Plus Km Mileage Maruti Suzuki Fronx Strong Hybrid Car Launch In 2025 Report

ಇದರೊಟ್ಟಿಗೆ ನವೀಕರಣಗೊಳ್ಳಲಿರುವ ಫ್ರಾಂಕ್ಸ್ ಎಸ್‌ಯುವಿ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿಯೂ ಒಂದಷ್ಟು ಬದಲಾವಣೆಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಹೈಬ್ರಿಡ್ ಪವರ್‌ಟ್ರೇನ್ ವಿಭಾಗದಲ್ಲಿರುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಕಾರನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿರುವುದರಿಂದ ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಫ್ರಾಂಕ್ಸ್ ಎಸ್‌ಯುವಿಯೂ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ದೇಶೀಯವಾಗಿ ಖರೀದಿಗೆ ಸಿಗುವ ಹೊಚ್ಚ ಹೊಸ ಮಾರುತಿ ಫ್ರಾಂಕ್ಸ್ ಕಾರು ಕನಿಷ್ಠ ರೂ.7.51 ಲಕ್ಷ ಮತ್ತು ಗರಿಷ್ಠ ರೂ.13.04 ಲಕ್ಷದವರೆಗೆ ಎಕ್ಸ್ ಶೋರೂಂ (ಬೆಂಗಳೂರು) ದರವನ್ನು ಒಳಗೊಂಡಿದೆ. ಸಿಗ್ಮಾ, ಡೆಲ್ಟಾ ಪ್ಲಸ್, ಮತ್ತು ಝೀಟಾ ಸೇರಿದಂತೆ ವಿವಿಧ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿದೆ.

35 Plus Km Mileage Maruti Suzuki Fronx Strong Hybrid Car Launch In 2025 Report

ಈ ಎಸ್‌ಯುವಿ 1-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 20.1 ರಿಂದ 28.51 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.

ನೂತನ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು, ನೆಕ್ಸಾ ಬ್ಲೂ, ಅರ್ಥನ್ ಬ್ರೌನ್, ಆರ್ಕ್ಟಿಕ್ ವೈಟ್, ಒಪ್ಯುಲೆಂಟ್ ರೆಡ್, ಗ್ರ್ಯಾಂಡ್ಯೂರ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಕ್ಲೇಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಇನ್ನು, ನವೀಕರಣದೊಂದಿಗೆ ಮಾರಾಟಕ್ಕೆ ಬರಲಿರುವ ಫ್ರಾಂಕ್ಸ್ ಎಸ್‌ಯುವಿ ಕುರಿತಂತೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ದೊರೆತ್ತಿಲ್ಲ. ಆದರೂ ಮುಂದಿನ ವರ್ಷ ಮಾರಾಟಕ್ಕೆ ಬರಲಿದೆ ಎಂದು ವಿವಿಧ ಮಾಧ್ಯಮಗಳು ಕೂಡ ವರದಿ ಮಾಡಿವೆ. ಒಂದೊಮ್ಮೆ ಈ ಕಾರು ಮಾರಾಟಕ್ಕೆ ಬಂದರೆ, ಸಾಮಾನ್ಯ ಗ್ರಾಹಕರಿಗೆ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, October 26, 2024, 20:40 [IST]
English summary
35 plus km mileage maruti suzuki fronx strong hybrid car launch in 2025 report
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+