ಅಭಿಷೇಕ್ ಬಚ್ಚನ್ ಟೊಯೊಟಾ ವೆಲ್‌ಫೈರ್ ಕಾರು ತೆಗೆದುಕೊಂಡ್ರಾ?, ಇದು ರಸ್ತೆ ಮೇಲಿನ ಅರಮನೆ!.. '5050' ಸೀಕ್ರೆಟ್ ಏನು?
ಬಾಲಿವುಡ್ ಸೆಲೆಬ್ರಿಟಿಗಳು ಹೊಚ್ಚ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ಖ್ಯಾತ ನಟ ಅಭಿಷೇಕ್ ಬಚ್ಚನ್ (Abhishek Bachchan) ಸಹ ದುಬಾರಿ ಬೆಲೆಯ ಟೊಯೊಟಾ ವೆಲ್‌ಫೈರ್ (Toyota Vellfire) ಎಂಪಿವಿ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಈ ಕಾರನ್ನು ಅವರು ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಪತ್ನಿ ಐಶ್ವರ್ಯ ರೈ ಅವರೊಂದಿಗಿನ ವಿಚ್ಛೇದನದ ಗಾಸಿಪ್ ಬಳಿಕ, ಅಭಿಷೇಕ್ ಬಚ್ಚನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ನಡೆದ ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭಕ್ಕೆ ನಟಿ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯರೊಂದಿಗೆ ಬಂದಿದ್ದರು. ಅಭಿಷೇಕ್ ಬಚ್ಚನ್ ತಮ್ಮ ತಂದೆ-ತಾಯಿಯೊಂದಿಗೆ ಪ್ರತ್ಯೇಕವಾಗಿ ಆಗಮಿಸಿದ್ದರು. ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು.

ಆದಾಗ್ಯೂ ನಟ ಅಭಿಷೇಕ್ ಬಚ್ಚನ್ ತೆಗೆದುಕೊಂಡಿರುವ ಎನ್ನಲಾಗಿರುವ ನೂತನ ಟೊಯೊಟಾ ವೆಲ್‌ಫೈರ್ ಕಾರಿನ ಸಂಖ್ಯೆ '5050' ಆಗಿದೆ. ಇದು ಐಶ್ವರ್ಯ ರೈ ಅವರ ನೆಚ್ಚಿನ ಕಾರಿನ ಸಂಖ್ಯೆ ಎಂದು ಹೇಳಲಾಗಿದ್ದು, ದಂಪತಿ ನಡುವೆ ವಿರಸ ದೂರದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ದಾಂಪತ್ಯ ಜೀವನಕ್ಕೆ ಕಾಲಿಟ್ಟು 17 ವರ್ಷಗಳು ಕಳೆದಿವೆ.
ಅಭಿಷೇಕ್ ಬಚ್ಚನ್ ಕೊಂಡುಕೊಂಡಿದ್ದಾರೆ ಎನ್ನುತ್ತಿರುವ ಟೊಯೊಟಾ ವೆಲ್‌ಫೈರ್ ಕಾರಿನ ನಿಖರವಾದ ರೂಪಾಂತರದ ಬಗ್ಗೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಹೊಸ 'ವೆಲ್‌ಫೈರ್' ಒಂದು ಎಂಪಿವಿಯಾಗಿದೆ. ರೂ.1.22 ಕೋಟಿಯಿಂದ ರೂ.1.32 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಹೈ ಮತ್ತು ವಿಐಪಿ ಎಕ್ಸಿಕ್ಯುಟಿವ್ ಲೌಂಜ್ ಎಂಬ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗುತ್ತದೆ.

ಈ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದ್ದು, 193 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 240 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಪಡೆದಿದೆ. ಜೊತೆಗೆ ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಎಡಬ್ಲ್ಯೂಡಿ (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 170 ಕೆಎಂಪಿಹೆಚ್ ಟಾಪ್ ಸ್ಪೀಡ್ ಇದೆ.
ಹೊಸ ಟೊಯೊಟಾ ವೆಲ್‌ಫೈರ್ ಎಂಪಿವಿಯಲ್ಲಿ 7 ಜನರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಆರಾಮದಾಯಕವಾಗಿ ಪ್ರಯಾಣಿಯಬಹುದು. ಆಂಬಿಯೆಂಟ್ ಲೈಟಿಂಗ್, ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 8-ವೇ ಚಾಲಿತ ಡ್ರೈವರ್ ಸೀಟ್, 15-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್, ಹೆಡ್ಸ್-ಅಪ್ ಡಿಸ್ಪ್ಲೇ, ಡುಯಲ್-ಪ್ಯಾನಲ್ ಸನ್‌ರೂಫ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. 6 ಏರ್‌ಬ್ಯಾಗ್, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಲೇನ್-ಕೀಪ್ ಅಸಿಸ್ಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ಆಲ್-ವೀಲ್ ಡಿಸ್ಕ್ ಬ್ರೇಕ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಟೊಯೊಟಾ ವೆಲ್‌ಫೈರ್ ಎಂಪಿವಿಗೆ ಮರ್ಸಿಡಿಸ್-ಬೆಂಜ್ ವಿ-ಕ್ಲಾಸ್ (Mercedes-Benz V-Class) ಪ್ರಬಲ ಪ್ರತಿಸ್ಪರ್ಧಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








