ಈ ನಟಿ ಖರೀದಿಸಿದ್ದು ಸಾಮಾನ್ಯ ಎಲೆಕ್ಟ್ರಿಕ್‌ ಕಾರಲ್ಲ: ಬಾಲಿವುಡ್‌ ನಟಿಯರಿಗೆ ಮಾದರಿಯಾದ ಎಲ್ಲರ ನೆಚ್ಚಿನ ದಿಯಾ!

ಸೆಲೆಬ್ರಿಟಿಗಳಿಗೆ ಕಾರು ಕ್ರೇಜ್‌ ಯಾವ ಮಟ್ಟಿಗೆ ಇರುತ್ತದೆ ಎಂದು ನಾನಿಲ್ಲಿ ವಿವರವಾಗಿ ಮಮ್ಮ ಬಳಿ ವಿವರಿಸಿ ಹೇಳಬೇಕೆಂದಿಲ್ಲ ಅಲ್ವೇ? ಸೆಲೆಬ್ರಿಟಿಗಳ ನಡುವೆ ಎಲೆಕ್ಟ್ರಿಕ್‌ ಕಾರುಗಳ ಅಬ್ಬರ ಜಾಗತಿಕ ಮಾರುಕಟ್ಟೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಬಹುತೇಕ ಕಾರು ನಿರ್ಮಾಣ ಕಂಪನಿಗಳೆಲ್ಲವೂ ತಮ್ಮದೇ ಆದ ಎಲೆಕ್ಟ್ರಿಕ್‌ ಕಾರುಗಳನ್ನು ನಿರ್ಮಿಸಿ ಮಾರುಕಟ್ಟೆಗೆ ತರುತ್ತಿದೆ. ಇನ್ನೊಂದಷ್ಟು ಕಂಪನಿಗಳು ಸದ್ಯದಲ್ಲೇ ಎಲೆಕ್ಟ್ರಿಕ್‌ ಕಾರುಗಳನ್ನು ಮಾರುಕಟ್ಟೆಗೆ ತರಲಿದೆ. ಇನ್ನು ಇದನ್ನು ಖರೀದಿ ಮಾಡುವವರ ಕುರಿತಾಗಿ ನೋಡುವುದಾದರೆ ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರೂ ಎಲೆಕ್ಟ್ರಿಕ್‌ ಕಾರನ್ನು ಖರೀದಿ ಮಾಡುತ್ತಿದ್ದಾರೆ.

ಈ ಸಾಲಿಗೆ ಇದೀಗ ನಟಿಯೊಬ್ಬರು ಸೇರಿಕೊಡಿದ್ದು, ಈ ಮೂಲಕ ತಮ್ಮ ಕೈಲಾದ ಪರಿಸರ ಪ್ರೇಮವನ್ನು ಮೆರೆಯಲು ಮುಂದಾಗಿದ್ದಾರೆ. ಈ ಮೂಲಕ ಎಲೆಕ್ಟ್ರಿಕ್‌ ವಾಹನ ಬಳಸದ ಇತರ ನಟ-ನಟಿಯರಿಗೆ ಮಾದರಿಯಾಗಿದ್ದಾರೆ. ಹೌದು, ಬಾಲಿವುಡ್‌ ನಟಿ ದಿಯಾ ಮಿರ್ಜಾ ಹೊಸ ವೊಲ್ವೋ C40 ರೀಚಾರ್ಜ್ ಎಲೆಕ್ಟ್ರಿಕ್‌ ಕಾರನ್ನು ಖರೀದಿ ಮಾಡಿದ್ದು, ಇದಕ್ಕೆ ಸಂಭಂಧಿಸಿದ ಫೊಟೋಗಳನ್ನು ತಮ್ಮ ಸೋಷಿಯಲ್‌ ಮಿಡಿಯಾ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.

Actress Dia Mirza Added New Volvo C40 Recharge Into Her Car Collection

ದಿಯಾ ಮಿರ್ಜಾ ಖರೀದಿ ಮಾಡಿರುವ ಈ ವೊಲ್ವೋ ಸಿ೪೦ ಎಲೆಕ್ಟ್ರಿಕ್ ಕಾರಿನ ಬಗ್ಗೆ ನೋಡುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಕಂಪನಿಯು ಈ ಹೊಸ ವೋಲ್ವೋ ಎಲೆಕ್ಟ್ರಿಕ್ C40 ರೀಚಾರ್ಜ್ (Volvo C40 Recharge) ಅನ್ನು 61.25 ಲಕ್ಷ ರೂ.ಗೆ (ಎಕ್ಸ್ ಶೋರೂಂ) ಬೆಲೆಗೆ ಬಿಡುಗಡೆ ಮಾಡಿದ್ದು, ಹಲವರ ನೆಚ್ಚಿನ ಕಾರು ಇದಾಗಿದೆ.

ವೊಲ್ವೊ ತನ್ನ ಹಿಂದಿನ ಮಾದರಿಯಾದ XC40 ರೀಚಾರ್ಜ್ ಅನ್ನೇ SUV-ಕೂಪ್ ಆಗಿ C40 ರೀಚಾರ್ಜ್ ಅನ್ನು ಮರು-ವಿನ್ಯಾಸಗೊಳಿಸಿದೆ. ವೋಲ್ವೋದ ಭಾರತೀಯ ಇವಿ ಮಾದರಿಗಳಲ್ಲಿ ಇದು ಎರಡನೇ EV ಆಗಿದ್ದು, ಇದರೊಂದಿಗೆ ಕಂಪನಿಯು ತನ್ನ EV ಮಾದರಿಗಳ ಬೆಳವಣಿಗೆಯನ್ನು ಮುಂದಿನ ವರ್ಷದ ವೇಳೆಗೆ ಶೇ35 ರಷ್ಟು ಹೆಚ್ಚಿಸಲು ಯೋಜನೆ ರೂಪಿಸಿಕೊಂಡಿದೆ.

Actress Dia Mirza Added New Volvo C40 Recharge Into Her Car Collection

ಮೊದಲೇ ಹೇಳಿದಂತೆ ತನ್ನ ಹಿಂದಿನ ಮಾದರಿಯಾದ XC40 ಅಂತೆಯೇ ಅದೇ ಹಿಂಭಾಗವನ್ನು ಉಳಿಸಿ, ರೂಫ್ ಅನ್ನು ಕೂಪ್-ತರಹದ ಡಿಸೈನ್ ಕೊಟ್ಟು ಹಿಂಭಾಗದ ವಿಂಡ್‌ಸ್ಕ್ರೀನ್ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಹೊಸ ಟೈಲ್‌ಗೇಟ್ ಮತ್ತು ಟೈಲ್-ಲ್ಯಾಂಪ್ ಅಸೆಂಬ್ಲಿಯನ್ನು ಪಡೆದಿದೆ. ಟೈಲ್ ಲ್ಯಾಂಪ್‌ಗಳು ಸಾಕಷ್ಟು ತೆಳ್ಳಗಿದ್ದು, ಹೊಸ ರಿವರ್ಸ್ ಲೈಟ್‌ಗಳನ್ನು ಸಹ ಪಡೆದಿದೆ.

ಒಟ್ಟಾರೆ C40 ರೀಚಾರ್ಜ್‌ನ ಹಿಂಭಾಗದ ವಿನ್ಯಾಸವು XC40 ರೀಚಾರ್ಜ್‌ಗಿಂತ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ. ಹೆಚ್ಚುವರಿಯಾಗಿ, ಇಳಿಜಾರಿನ ರೂಫ್ ಇರುವ ಕಾರಣದಿಂದಾಗಿ ವಿಂಡೋ ಲೈನ್ ಅನ್ನು ಸ್ವಲ್ಪಮಟ್ಟಿಗೆ ಮರುವಿನ್ಯಾಸಗೊಳಿಸಲಾಗಿದೆ. C40 ರೀಚಾರ್ಜ್ ವಿಶೇಷವಾಗಿ Pixel LED ಹೆಡ್‌ಲೈಟ್‌ಗಳನ್ನು ಪಡೆದಿದ್ದು, ನೀವು ಭಾರತದಲ್ಲಿನ ಯಾವುದೇ ವೋಲ್ವೋದಲ್ಲಿ ಇದನ್ನು ಕಾಣಲು ಸಾಧ್ಯವಿಲ್ಲ.

Actress Dia Mirza Added New Volvo C40 Recharge Into Her Car Collection

ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 360-ಡಿಗ್ರಿ ಕ್ಯಾಮೆರಾ, ADAS ತಂತ್ರಜ್ಞಾನ, ಸಂಪರ್ಕಿತ ಕಾರ್ ಟೆಕ್, ಡ್ರೈವರ್ ಸೈಡ್ ಮೆಮೊರಿ ಕಾರ್ಯದೊಂದಿಗೆ ಚಾಲಿತ ಮುಂಭಾಗದ ಸೀಟುಗಳು, ಹೀಟಿಂಗ್ ಮತ್ತು ಕೂಲಿಂಗ್ ಅನ್ನು ಸಹ ಪಡೆಯುತ್ತದೆ. ಹವಾಮಾನ ನಿಯಂತ್ರಣ ವ್ಯವಸ್ಥೆ, ಪ್ರೀಮಿಯಂ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಇವೆಲ್ಲವನ್ನು ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮೂಲಕ ಮಾಡಬಹುದು.

ವೋಲ್ವೋ C40 ರೀಚಾರ್ಜ್ CMA ಪ್ಲಾಟ್‌ಫಾರ್ಮ್ (ಕಾಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್) ಆಧಾರದ ಮೇಲೆ, ಭಾರತದಲ್ಲಿ C40 ರೀಚಾರ್ಜ್ ಡ್ಯುಯಲ್-ಮೋಟರ್ ಸೆಟಪ್ ಅನ್ನು ಪಡೆದಿದೆ. ಪ್ರತಿ ಆಕ್ಸಲ್‌ನಲ್ಲಿ ಒಂದು - 78kWh ಬ್ಯಾಟರಿ ಪ್ಯಾಕ್‌ನೊಂದಿಗೆ WLTP ಸೈಕಲ್‌ನಲ್ಲಿ ಒಂದೇ ಚಾರ್ಜ್‌ನಲ್ಲಿ 530km ವರೆಗೆ ರೇಂಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ವೋಲ್ವೋ 4.7 ಸೆಕೆಂಡ್‌ಗಳಲ್ಲಿ 100kph ವೇಗದಲ್ಲಿ ಚಲಿಸಬಹುದು ಎಂದು ಹೇಳಿಕೊಂಡಿದೆ, ಇದು XC40 ರೀಚಾರ್ಜ್‌ಗಿಂತ 0.2 ಸೆಕೆಂಡುಗಳಷ್ಟು ವೇಗವಾಗಿದೆ. C40 ರೀಚಾರ್ಜ್ 150kW DC ಚಾರ್ಜರ್‌ನೊಂದಿಗೆ ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 27 ನಿಮಿಷಗಳಲ್ಲಿ ಅದರ ಬ್ಯಾಟರಿಗಳನ್ನು ಶೇ 100 ರಷ್ಟು ಚಾರ್ಜ್ ಮಾಡಬಹುದು ಎಂದು ಹೇಳಿದೆ.

More from DriveSpark

Article Published On: Tuesday, July 9, 2024, 18:18 [IST]
English summary
Actress dia mirza added new volvo c40 recharge into her car collection
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+