ಮಗನ ಆನಂದ... ಅಪ್ಪನ ಕಣ್ಣೀರು... ಮನಸೋತ ಆನಂದ್ ಮಹೀಂದ್ರಾ! ವಿಡಿಯೋ ಸಖತ್ ವೈರಲ್
ಭಾರತದಲ್ಲಿ ಕಾರು ಖರೀದಿಸುವುದು ಹಲವರಿಗೆ ದೊಡ್ಡ ಕನಸಾಗಿದೆ, ಮುಂದೊಂದು ದಿನ ತಮ್ಮ ಕನಸಿನ ಕಾರು ಖರೀದಿಸಿದಾಗ ಅಂತಹ ಸಂದರ್ಭಗಳನ್ನು ಹಬ್ಬದಂತೆ ಆಚರಿಸುತ್ತಾರೆ. ಇಂತಹ ವೀಡಿಯೊಗಳನ್ನು ನಾವು ಆಗಾಗ್ಗೆ ಸೋಷಿಯಲ್ ಮೀಡಿಯಾಗಳಲ್ಲೂ ನೋಡುತ್ತಿರುತ್ತೇವೆ. ಇತ್ತೀಚೆಗೆ ಇಂತಹದ್ದೇ ವಿಡಿಯೋವೊಂದನ್ನು ನೋಡಿದ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು, ತಮ್ಮ X (ಟ್ವಿಟರ್) ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಂದೆಯೊಬ್ಬರು ಮಗ ಹೊಚ್ಚ ಹೊಸ ಕಾರನ್ನು ಖರೀದಿಸುವಾಗ ಸಂತೋಷದಿಂದ ಕಣ್ಣೀರಿಟ್ಟ ಕ್ಷಣಗಳನ್ನು ಕಾಣಬಹುದು. ಈ ವಿಡಿಯೋ ಆನಂದ್ ಮಹೀಂದ್ರಾ ಅವರ ಮೂಲಕ ಇನ್ನೂ ವೈರಲ್ ಆಗಿದೆ.
ಈ ವೀಡಿಯೊವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದರು. ಆನಂದ್ ಮಹೀಂದ್ರಾ ಈ ವಿಡಿಯೋವನ್ನು ನೋಡಿ ಹೊಸ ಶೀರ್ಷಿಕೆಯೊಂದಿಗೆ ರಿಟ್ವೀಟ್ ಮಾಡಿದ್ದಾರೆ. "ನಾವು ಕಾರುಗಳನ್ನು ತಯಾರಿಸುವ ವ್ಯವಹಾರದಲ್ಲಿ ಮಾತ್ರವಲ್ಲ, ಕನಸುಗಳನ್ನು ಈಡೇರಿಸುವ ವ್ಯವಹಾರದಲ್ಲಿಯೂ ಇದ್ದೇವೆ ಎಂದು ನಾವು ಅರಿತುಕೊಂಡಿದ್ದೇವೆ. ಇದು ನಮ್ಮ ತಂಡವನ್ನು ಇನ್ನಷ್ಟು ಶ್ರಮಿಸಲು ಪ್ರೇರೇಪಿಸುತ್ತದೆ! ಎಂದಿದ್ದಾರೆ.

ಈ ವೀಡಿಯೊ ಉತ್ತರ ಭಾರತದಲ್ಲಿ ಎಲ್ಲೋ ಚಿತ್ರಿಸಲಾಗಿದೆ. ಕುಟುಂಬವು ತಮ್ಮ ಹೊಸ ಮಹೀಂದ್ರಾ ಎಕ್ಸ್‌ಯುವಿ 700 ಕಾರಿನ ಡೆಲಿವರಿಯನ್ನು ತೆಗೆದುಕೊಳ್ಳಲು ಮಹೀಂದ್ರಾ ಡೀಲರ್ ಶಿಪ್‌ಗೆ ಬಂದಿದ್ದರು. ಇಡೀ ಕುಟುಂಬದ ಮುಂದೆ ಕಾರನ್ನು ಅನಾವರಣಗೊಳಿಸಿದಾಗ ನಗು ಮುಖದ ಅವರ ತಂದೆಯ ಕೆನ್ನೆಗಳಿಂದ ಕಣ್ಣೀರು ಉರುಳುತ್ತಿರುವ ದೃಶ್ಯಗಳು ಎಂಥವರ ಮನವನ್ನು ಕರಗಿಸುವಂತಿದೆ.
ಮಹೀಂದ್ರಾ ಎಕ್ಸ್‌ಯುವಿ 700 ವಿಶೇಷತೆಗಳು: ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.13.99 ಲಕ್ಷದಿಂದ ಪ್ರಾರಂಭವಾಗಿ ರೂ.26.04 ಲಕ್ಷಗಳವೆರೆಗೆ ಇದೆ. ತನ್ನ ವಿಭಾಗದಲ್ಲಿ ಲೆವೆಲ್ 2 ADAS ವೈಶಿಷ್ಟ್ಯಗಳನ್ನು ನೀಡಿದ ಮೊದಲ ಎಸ್‌ಯುವಿಗಳಲ್ಲಿ ಒಂದಾಗಿದೆ. ಅಲ್ಲದೇ ಎಕ್ಸ್‌ಯುವಿ 700 ತನ್ನ ವಿಭಾಗದಲ್ಲಿ AWD ಟಾಪ್-ಎಂಡ್ ವೇರಿಯೆಂಟ್ ಆಯ್ಕೆಯಾಗಿ ಪಡೆದಿರುವ ಏಕೈಕ ಎಸ್‌ಯುವಿಯಾಗಿದೆ.

ಈ ಎಸ್‌ಯುವಿ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮೆಮೊರಿ ಫಂಕ್ಷನ್ ನೊಂದಿಗೆ ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‌ನಂತಹ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಇವಿಷ್ಟೇ ಅಲ್ಲದೇ ವೆಂಟಿಲೇಟೆಡ್ ಸೀಟ್‌ಗಳು ಮತ್ತು ಆಟೋ-ಡಿಮ್ಮಿಂಗ್ ಐಆರ್‌ವಿಎಂನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಎಂಜಿನ್ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಆವೃತ್ತಿಯು 2.0-ಲೀಟರ್ ಎಂಸ್ಟಾಲಿಯನ್ ಟರ್ಬೋಚಾರ್ಜ್ಡ್ ಎಂಜಿನ್ ಹಾಗೂ ಡೀಸೆಲ್ ಆವೃತ್ತಿಯು 2.2-ಲೀಟರ್ ಎಂಹಾಕ್ ಟರ್ಬೋಚಾರ್ಜ್ಡ್ ಎಂಜಿನ್ ಹೊಂದಿದೆ.
ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೆರಿಯೆಂಟ್‌ಗಳು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತವೆ. ಈ ವರ್ಷ ಮಹೀಂದ್ರಾದಿಂದ ಅತಿದೊಡ್ಡ ಬಿಡುಗಡೆ ಥಾರ್ ರೊಕ್ಸ್ ಥಾರ್ 5-ಡೋರ್ ಆಗಿದೆ. ಎಸ್‌ಯುವಿಯ ಬುಕಿಂಗ್ ಅಧಿಕೃತವಾಗಿ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದ್ದು, ಈ ತಿಂಗಳ ಅಂತ್ಯದ ವೇಳೆಗೆ ವಿತರಣೆ ಪ್ರಾರಂಭವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications