ಐಷಾರಾಮಿ ಕಾರಿನ ಈ ಬೋಲ್ಡ್‌ ಎಡಿಷನ್‌ಗೆ ಜನ ಕ್ಲೀನ್‌ಬೌಲ್ಡ್‌: ಅಂತದ್ದೇನಿದೆ ಗೊತ್ತಾ ಈ ಕಾರಿನಲ್ಲಿ!

ಐಷಾರಾಮಿ ಕಾರು ನಿರ್ಮಾಣ ಕಂಪನಿ ಆಡಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತದಲ್ಲಿ ಹಲವಾರು ಲಕ್ಷುರಿ ಸ್ಪೋರ್ಟ್ಸ್‌ ಕಾರುಗಳನ್ನು ಸಹ ಆಡಿ ಮಾರಾಟ ಮಾಡುತ್ತಿದೆ. ಇದೀಗ ಕಂಪನಿ ತನ್ನ ಪ್ರಸಿದ್ದ Q3 ಮತ್ತು Q3 ಸ್ಪೋರ್ಟ್ಸ್ ಬ್ಯಾಕ್‌ ಕಾರು ಮಾದರಿಯ ಬೋಲ್ಡ್‌ ಎಡಿಷನ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.

ಈ ಮೂಲಕ ಮತ್ತೆ ಈ ಕಾರು ಸದ್ದು ಮಾಡುತ್ತಿದೆ. ಆಡಿ ಕಾರುಗಳ ಲೈನ್‌ಅಪ್‌ನಲ್ಲಿ ಆಡಿ (Audi) Q3 ಆರಂಭಿಕ ಮಟ್ಟದ ಎಸ್‌ಯುವಿ. ಇದರಲ್ಲಿ Q3 ಸ್ಪೋರ್ಟ್ಸ್ ಬ್ಯಾಕ್ ಅನ್ನುವುದು ಇದರ ಮತ್ತೊಂದು ಆವೃತ್ತಿ. ಈ ಆವೃತ್ತಿ ಸಾಧಾರಣ Q3 ಕಾರಿಗಿಂತ ಕೊಂಚ ಹೆಚ್ಚು ಪರ್ಫಾಮೆನ್ಸ್‌ ನೀಡುತ್ತದೆ. ಸ್ಟೈಲಿಶ್‌ ಲುಕ್‌ ಸಹ ಈ ಕಾರುಗಳು ಹೊಂದಿವೆ.

Audi Launched Bold Edition For Its Q3 And Q3 Sportsback In India

ಇನ್ನು ಈ ಕಾರಿನ ಬೋಲ್ಡ್‌ ಎಡಿಷನ್‌ ಬಗ್ಗೆ ನೋಡುವುದಾದರೆ ಇದರಲ್ಲಿ ಹೆಚ್ಚು ಬದಲಾವಣೆಗಳೇನು ಇಲ್ಲ ಎಂದು ತಿಳಿದು ಬಂದಿದೆ. ಆದರೆ ಇದರ ಹೊರಭಾಗದಲ್ಲಿ ಬ್ಲಾಕ್ಡ್‌ಔಟ್‌ ಆಗಿರುವ ಡೀಟೇಲಿಂಗ್‌ ಅನ್ನು ನೋಡಬಹುದಾಗಿದೆ. ಫೀಚರ್‌ಗಳ ವಿಷಯಕ್ಕೆ ಬಂದರೆ ಸ್ಟಾಂಡರ್ಡ್‌ ಮಾಡೆಲ್‌ಗಳಲ್ಲಿ ಇರುವ ಅದೇ ಫೀಚರ್‌ಗಳು ಇದಕ್ಕೂ ಸಿಗಲಿದೆ ಎಂದು ತಿಳಿದು ಬಂದಿದೆ.

ಈ ಕಾರಿನ ಬೆಲೆಗಳನ್ನು ನೋಡುವುದಾದರೆ ಈ Q3 ಮತ್ತು Q3 ಸ್ಪೋರ್ಟ್ಸ್ ಬ್ಯಾಕ್ ಬೋಲ್ಡ್‌ ಎಡಿಷನ್‌ ಕಾರುಗಳು ಕ್ರಮವಾಗಿ 54.65 ಲಕ್ಷ ಮತ್ತು Rs 55.71 ಲಕ್ಷ ರೂಗಳಿಗೆ ಲಾಂಚ್‌ ಆಗಿದ್ದು, ಈ ಕಾರು ಕೊಳ್ಳುವವರು ಕೂಡಲೇ ಡೀಲರ್‌ಶಿಪ್‌ಗೆ ಧಾವಿಸಬಹುದಾಗಿದೆ. ಈ ಬೋಲ್ಡ್‌ ಎಡಿಷನ್‌ಗಳು ಟೆಕ್ನಾಲಜಿ ಟಾಪ್‌ ಟ್ರಿಮ್‌ಗಳಿಗಿಂತ ಸುಮಾರು 1.5 ಲಕ್ಷ ಜಾಸ್ತಿ ಬೆಲೆಬಾಳುತ್ತವೆ.

Audi Launched Bold Edition For Its Q3 And Q3 Sportsback In India

ಇನ್ನು ಆಡಿ Q3 ಸ್ಪೋರ್ಟ್ಸ್ ಬ್ಯಾಕ್‌ ಬಗ್ಗೆ ನೋಡುವುದಾದರೆ, ಆಡಿ Q3 ಸ್ಪೋರ್ಟ್‌ಬ್ಯಾಕ್ ಅನ್ನು ಇಳಿಜಾರು ರೂಫ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದರ ರೂಫ್ ಮೇಲೆ Q3 ಸ್ಪೋರ್ಟ್‌ಬ್ಯಾಕ್‌ಗೆ ಕೂಪ್ ನೋಟವನ್ನು ನೀಡುತ್ತದೆ. ಇದಲ್ಲದೆ, ಕಾರಿನ ಇತರ ಬಾಡಿ ಪ್ಯಾನೆಲ್‌ಗಳನ್ನು ಸಹ ಹೆಚ್ಚು ರಚನಾತ್ಮಕ ನೋಟವನ್ನು ನೀಡುತ್ತದೆ. ಆದ್ದರಿಂದ, ಇದು ಸಾಮಾನ್ಯ Audi Q3 ಗಿಂತ ಹೆಚ್ಚು ಆಕರ್ಷಕವಾಗಿ ಮತ್ತು ಒರಟಾಗಿ ಕಾಣುತ್ತದೆ.

ಆಡಿ Q3 ಸ್ಪೋರ್ಟ್‌ಬ್ಯಾಕ್ ಒಟ್ಟು ಐದು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಟರ್ಬೊ ಬ್ಲೂ, ಗ್ಲೇಸಿಯರ್ ವೈಟ್, ಕ್ರೋನೋಸ್ ಗ್ರೇ, ಮೈಥೋಸ್ ಬ್ಲ್ಯಾಕ್ ಮತ್ತು ನವರ ಬ್ಲೂ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಆಡಿ ಒಳಾಂಗಣಕ್ಕೆ ಎರಡು ಬಣ್ಣದ ಆಯ್ಕೆಗಳನ್ನು ಸಹ ನೀಡಲಾಗಿದೆ.ಬ್ರೌನ್ ಮತ್ತು ಬೇಚ್ ಬಣ್ಣಗಳಲ್ಲಿ ನೋಡಬಹದು. ಈ ಕಾರಿನ ವಿಶೇಷತೆಗಳನ್ನು ನೋಡುವುದಾದರೆ, Q3 ಸ್ಪೋರ್ಟ್‌ಬ್ಯಾಕ್ ಐಷಾರಾಮಿ ಕಾರಿನಲ್ಲಿ ಆಡಿ ವಿವಿಧ ಆಕರ್ಷಕ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.

ಆಡಿ Q3 ಸ್ಪೋರ್ಟ್‌ಬ್ಯಾಕ್ ಒಳಾಂಗಣವು ಸಾಮಾನ್ಯ Audi Q3 ನಂತೆಯೇ ಇರುತ್ತದೆ. ಹೆಚ್ಚು ವ್ಯತ್ಯಾಸ ಇರುವುದಿಲ್ಲ. ಈ ಕಾರಿನಲ್ಲಿ 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಬಳಸಲಾಗಿದೆ. ಈ ಮೋಟಾರ್ 190 HP ಪವರ್ ಮತ್ತು 320 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಕ್ವಾಟ್ರೋ ಆಲ್ ವೀಲ್ ಡ್ರೈವ್ ಸಿಸ್ಟಂ ನೀಡಲಾಗಿದೆ. ಈ ಕಾರು ಕೇವಲ 7.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, May 11, 2024, 17:30 [IST]
English summary
Audi launched bold edition for its q3 and q3 sportsback in india
Read more on ಆಡಿ audi india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+