ಭಾರತದಲ್ಲಿ ಐಷಾರಾಮಿ ಪ್ರಯಾಣಕ್ಕೆ ಆಡಿ ಕ್ಯೂ8 ಫೇಸ್‌ಲಿಫ್ಟ್ ಬಿಡುಗಡೆ

ಐಷಾರಾಮಿ ಕಾರು ತಯಾರಕರಾದ ಆಡಿ ಇಂಡಿಯಾ ತನ್ನ ಕ್ಯೂ8 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಆಡಿ ಕ್ಯೂ8 ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.18 ಕೋಟಿ ಆಗಿದೆ. ಈ ಹೊಸ ಆಡಿ ಕ್ಯೂ8 ಫೇಸ್‌ಲಿಫ್ಟ್ (Audi Q8 Facelift) ಎಸ್‍ಯುವಿ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿದ ಸುಮಾರು ಒಂದು ವರ್ಷದ ನಂತರ ಭಾರತಕ್ಕೆ ಬಂದಿದೆ. ನವೀಕರಣದೊಂದಿಗೆ, ಆಡಿ ಕ್ಯೂ8 ಕೆಲವು ಟೆಕ್ ಅಪ್‌ಗ್ರೇಡ್‌ಗಳ ಜೊತೆಗೆ ಕೆಲವು ಸೂಕ್ಷ್ಮ ವಿನ್ಯಾಸ ಟ್ವೀಕ್‌ಗಳನ್ನು ಪಡೆಯುತ್ತದೆ.

ವಿದೇಶಿ ಮಾರುಕಟ್ಟೆಯಲ್ಲಿ ಆಡಿ ಕ್ಯೂ8 ಎಸ್‍ಯುವಿಯು V8 ಮತ್ತು V6 ಪವರ್‌ಟ್ರೇನ್‌ಗಳಲ್ಲಿ ನೀಡಲಾಗಿದ್ದರೂ, ಭಾರತದಲ್ಲಿ ಪೆಟ್ರೋಲ್ V6 ಎಂಜಿನ್‌ನೊಂದಿಗೆ ಮಾತ್ರ ನೀಡಲಾಗಿದೆ. ಭಾರತದಲ್ಲಿ ಈ ಆಡಿ ಕ್ಯೂ8 ಫೇಸ್‌ಲಿಫ್ಟ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಆಡಿ ಕ್ಯೂ8 ಫೇಸ್‌ಲಿಫ್ಟ್ ಎಸ್‍ಯುವಿ ಹೊಸ ವಿನ್ಯಾಸದೊಂದಿಗೆ ಹೊಸ ಸಿಂಗಲ್-ಫ್ರೇಮ್ ಗ್ರಿಲ್ ಅನ್ನು ಪಡೆಯುತ್ತದೆ.

Audi Q8 Facelift

ಈ ಎಸ್‍ಯುವಿ ಪರಿಷ್ಕೃತ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ 21-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ನವೀಕರಿಸಿದ ಟೈಲ್ ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ. ಈ ಹೊಸ ಆಡಿ ಎಸ್‍ಯುವಿಯು ಸಖಿರ್ ಗೋಲ್ಡ್, ವೈಟೊಮೊ ಬ್ಲೂ, ಮಿಥೋಸ್ ಬ್ಲಾಕ್, ಸಮುರಾಯ್ ಗ್ರೇ, ಗ್ಲೇಸಿಯರ್ ವೈಟ್, ಸ್ಯಾಟಲೈಟ್ ಸಿಲ್ವರ್, ತಮಿರಿಡ್ ಬ್ರೌನ್ ಮತ್ತು ವಿಕುನಾ ಬೀಜ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಬ್ಯವಿದೆ.

ಆಡಿ ಕ್ಯೂ8 ಎಸ್‍ಯುವಿಯು ಒಳಭಾಗದಲ್ಲಿ ಡ್ಯಾಶ್‌ಬೋರ್ಡ್ ವಿನ್ಯಾಸವು ಹಿಂದಿನ ಮಾದರಿಯನ್ನು ಹೋಲುತ್ತದೆ. ವರ್ಚುವಲ್ ಕಾಕ್‌ಪಿಟ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಡಿಸ್ ಪ್ಲೇ ಲೇನ್ ಬದಲಾವಣೆಯ ವಾರ್ನಿಂಗ್, ಇತರ ರಸ್ತೆ ಬಳಕೆದಾರರಿಗೆ ದೂರ ಮತ್ತ್ ಟ್ರಾಫಿಕ್ ಲೈಟ್ ಮಾಹಿತಿಯಂತಹ ವಿವರಗಳೊಂದಿಗೆ ನವೀಕರಿಸಿದ ಸುತ್ತಮುತ್ತಲಿನ ಪ್ರದರ್ಶನ ಕಾರ್ಯವನ್ನು ಪಡೆಯುತ್ತದೆ.

Audi Q8 Facelift

ಈ ಹೊಸ ಎಸ್‍ಯುವಿ MIB3 ಸಾಫ್ಟ್‌ವೇರ್‌ಗೆ ಅಪ್‌ಗ್ರೇಡ್‌ಗಳಿಂದ ಸೆಂಟ್ರಲ್ ಟಚ್‌ಸ್ಕ್ರೀನ್ ಸಹ ಪ್ರಯೋಜನ ಪಡೆಯುತ್ತದೆ. ಈ ಎಸ್‍ಯುವಿಯಲ್ಲಿ ಕೆಲವು ವೈಶಿಷ್ಟ್ಯಗಳು 360-ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ, ಪನೊರೊಮಿ ಸನ್‌ರೂಫ್ ಮತ್ತು ನಾಲ್ಕು-ಝೋನ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ಒಳಗೊಂಡಿವೆ. ಒಳಭಾಗದಲ್ಲಿ ಒಕಾಪಿ ಬ್ರೌನ್, ಸೈಗಾ ಬೀಜ್, ಕಪ್ಪು ಮತ್ತು ಪಾಂಡೋ ಗ್ರೇ ಎಂಬ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಆಡಿ ಕ್ಯೂ8 ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತದಲ್ಲಿ ಒಂದೆ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಈ ಹೊಸ ಎಸ್‍ಯುವಿಯಲ್ಲಿ 3.0 ಲೀಟರ್ V6 TFSI ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 345 bhp ಮತ್ತು 500 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಆಡಿ ಎಸ್‍ಯುವಿಯು 5.6 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

Audi Q8 Facelift

ಇನ್ನು ಆಡಿ ಕಂಪನಿಯು ತಿಂಗಳುಗಳ ಹಿಂದೆ ತನ್ನ ಆಡಿ ಕ್ಯೂ7 ಬೋಲ್ಡ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದರು. ಈ ವೈಯಕ್ತಿಕ ಅಭಿವ್ಯಕ್ತಿಯನ್ನು ಬಯಸುವ ಆಡಿ ಉತ್ಸಾಹಿಗಳಿಗಾಗಿ ಅತ್ಯಾಧುನಿಕ ತಂತ್ರಜ್ಞಾನ, ಆಧುನಿಕ ಡಿಸೈನ್ ಹಾಗೂ ಸಾಟಿಯಿಲ್ಲದ ಪರ್ಫಾಮೆನ್ಸ್‌ನೊಂದಿಗೆ ಬರುತ್ತದೆ. ಆಡಿ ವರ್ಚುವಲ್ ಕಾಕ್‌ಪಿಟ್ ಪ್ಲಸ್, ಆಡಿ ಸ್ಮಾರ್ಟ್ಫೋನ್ ಇಂಟರ್ಫೇಸ್, MMI ಟಚ್ ರೆಸ್ಪಾನ್ಸ್‌ನೊಂದಿಗೆ MMI ನ್ಯಾವಿಗೇಷನ್ ಪ್ಲಸ್ ಮತ್ತು 730 ವ್ಯಾಟ್‌ಗಳ ಒಟ್ಟು ಪವರ್ ಉತ್ಪಾದನೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Thursday, August 22, 2024, 12:46 [IST]
English summary
Audi q8 facelift launched in india price features
Read more on audi india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+