ಬೆಂಗಳೂರು: ಕಾರುಗಳ ಚಿತ್ರ ಪ್ರದರ್ಶನಕ್ಕೆ ಅದ್ದೂರಿ ಚಾಲನೆ.. ಕಲಾ ಪ್ರೇಮಿಗಳೇ ಕೂಡಲೇ ಭೇಟಿ ನೀಡಿ!

'ಬಲ್ಲವನೇ ಬಲ್ಲ ಬೆಲ್ಲದ ರುಚಿಯ' ಎನ್ನುವ ರೀತಿಯಲ್ಲಿ ಚಿತ್ರಕಲೆಯ ಸವಿಯು ಸವಿದವನಿಗೇ ಗೊತ್ತು... ಅಂತಹ ಕಲಾ ಪ್ರೇಮಿಗಳು ಹಾಗೂ ಕಾರು ಉತ್ಸಾಹಿಗಳಿಗಾಗಿ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಆರ್ಟ್ ಹೌಸ್‌ ಗ್ಯಾಲರಿಯಲ್ಲಿ 'ಆಟೋಮೋಟಿವ್ ರಾಪ್ಸೋಡಿ' ವರ್ಣಚಿತ್ರ ಕಲಾ ಪ್ರದರ್ಶನ ಆಯೋಜಿಸಲಾಗಿದೆ. ನಿನ್ನೆಯಿಂದಲೇ ಚಿತ್ರ ಪ್ರದರ್ಶನ ಶುರುವಾಗಿದ್ದು, ಆಗಸ್ಟ್ 11ರವರೆಗೆ ಜರುಗಲಿದೆ. ಆಸಕ್ತರು ಬೆಳಗ್ಗೆ 10:30 ರಿಂದ ಸಂಜೆ 6 ಗಂಟೆವರೆಗೆ ಭೇಟಿ ನೀಡಬಹುದು.

ಆರ್ಟೆಲ್ಲಾದ ಸಂಸ್ಥಾಪಕಿ ಬೆಲಿಂಡಾ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ಈ ವರ್ಣಚಿತ್ರ ಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪ್ರತಿಭಾನ್ವಿತ ಆಟೋಮೋಟಿವ್ ಕಲಾವಿದೆಯಾಗಿರುವ ಬರ್ವಾನಿಯ ರಾಜಕುಮಾರಿ ವಿದಿತಾ ಅವರ ಕೈಚಳಕದ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿದಿತಾ, ತಮ್ಮ ಕುಂಚದ ಮೂಲಕ ಭಾರತದ ವಾಹನ ಇತಿಹಾಸವನ್ನು ಕಾಲ್ಪನಿಕವಾಗಿ ದಾಖಲಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ.

Bengaluru Automotive Rhapsody First Automotive Art Exhibition Starts Details

ರಾಜಕುಮಾರಿ ವಿದಿತಾರ ಚಿತ್ರಗಳು ಕಲಾತ್ಮಕ ಕೌಶಲ್ಯಕ್ಕೆ ಹೆಸರುವಾಸಿಯಾಗಿವೆ. ನೋಡುಗರಲ್ಲಿ ಆಟೋಮೋಟಿವ್ ಕ್ಷೇತ್ರದ ಮೇಲೆ ವಿಶಿಷ್ಟವಾದ ಆಸಕ್ತಿ ಬೆಳೆಸಿಕೊಳ್ಳಲು ನೆರವಾಗುತ್ತವೆ. ಅವರ ವರ್ಣಚಿತ್ರಗಳು ನೈಜ ಸೌಂದರ್ಯ ಹಾಗೂ ಆಟೋಮೋಟಿವ್ ವಿಭಾಗದ ತಾಂತ್ರಿಕ ಅದ್ಭುತಗಳನ್ನು ಎತ್ತಿ ತೋರಿಸುವುದಕ್ಕೆ ಪ್ರಸಿದ್ದಿ ಪಡೆದಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಟೆಲ್ಲಾದ ಸಂಸ್ಥಾಪಕಿ ಬೆಲಿಂಡಾ ಫೆರ್ನಾಂಡಿಸ್ ಅವರು, 'ರಾಜಕುಮಾರಿ ವಿದಿತಾರ ಚಿತ್ರಗಳು ವಿಂಟೇಜ್ ಕಾರುಗಳ ಜಗತ್ತಿಗೆ ನಮ್ಮನ್ನು ಹೆಜ್ಜೆ ಹಾಕುವಂತೆ ಮಾಡುತ್ತವೆ. ಬೆಂಗಳೂರಿನಲ್ಲಿ ಆಟೋಮೋಟಿವ್ ರಾಪ್ಸೋಡಿ (Automotive Rhapsody) ವರ್ಣಚಿತ್ರ ಪ್ರದರ್ಶನ ಆಯೋಜಿಸುತ್ತಿರುವುದು ಹೆಮ್ಮೆ ತರುತ್ತಿದೆ' ಎಂದು ಹೇಳಿದ್ದಾರೆ.

ನಿನ್ನೆ (ಆಗಸ್ಟ್ 9) ನಡೆದ ಆಟೋಮೋಟಿವ್ ರಾಪ್ಸೋಡಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮೈಸೂರು ಸಂಸದ ಹಾಗೂ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಖ್ಯಾತ ಕಲಾವಿದರಾದ ಎಸ್.ಜಿ.ವಾಸುದೇವ್, ಕಲಾ ಇತಿಹಾಸಕಾರ್ತಿ ಮತ್ತು ವಿಮರ್ಶಕಿ ಡಾ.ಪ್ರಮೀಳಾ ಲೋಚನ್ ಪಾಲ್ಗೊಂಡಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, August 10, 2024, 11:26 [IST]
English summary
Bengaluru automotive rhapsody first automotive art exhibition starts details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+