ರಾಜಕುಮಾರಿ ವಿದಿತಾ ಕೈಚಳಕ ನೋಡಬೇಕೇ.. ಒಂದು ದಿನವಷ್ಟೇ ಬಾಕಿ, ಬೆಂಗಳೂರಿನ ಆರ್ಟ್ ಹೌಸ್ ಗ್ಯಾಲರಿಗೆ ಭೇಟಿ ನೀಡಿ!
ಚಿತ್ರಕಲಾ ಪ್ರೇಮಿಗಳು ಮತ್ತು ಕಾರು ಉತ್ಸಾಹಿಗಳಿಗಾಗಿ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಆರ್ಟ್ ಹೌಸ್ ಗ್ಯಾಲರಿಯಲ್ಲಿ ಮೂರು ದಿನಗಳ ಆಟೋಮೋಟಿವ್ ರಾಪ್ಸೋಡಿ (Automotive Rhapsody) ವರ್ಣಚಿತ್ರ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ನಿನ್ನೆಯಿಂದ (ಆಗಸ್ಟ್ 9) ಚಿತ್ರ ಪ್ರದರ್ಶನ ಪ್ರಾರಂಭವಾಗಿದ್ದು, ನಾಳೆವರೆಗೆ (ಆಗಸ್ಟ್ 11) ನಡೆಯಲಿದೆ. ಆಸಕ್ತರು ಕಲಾ ರಸಿಕರು ಬೆಳಗ್ಗೆ 10:30 ರಿಂದ ಸಂಜೆ 6 ಗಂಟೆವರೆಗೆ ಭೇಟಿ ನೀಡಬಹುದು.
ಆರ್ಟೆಲ್ಲಾದ ಸಂಸ್ಥಾಪಕಿ ಬೆಲಿಂಡಾ ಫೆರ್ನಾಂಡಿಸ್ ಅವರ ನೇತೃತ್ವದಲ್ಲಿ ಈ ವರ್ಣಚಿತ್ರ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರತಿಭಾನ್ವಿತ ಆಟೋಮೋಟಿವ್ ಕಲಾವಿದೆಯಾಗಿರುವ ಬರ್ವಾನಿಯ ರಾಜಕುಮಾರಿ ವಿದಿತಾ ಅವರ ಕೈಚಳಕದ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಿದಿತಾ, ತಮ್ಮ ಕುಂಚದ ಮೂಲಕ ಭಾರತದ ವಾಹನ ಇತಿಹಾಸವನ್ನು ಕಾಲ್ಪನಿಕವಾಗಿ ದಾಖಲಿಸುವ ಮೂಲಕ ಹೆಚ್ಚು ಪ್ರಸಿದ್ಧರಾಗಿದ್ದಾರೆ.

ರಾಜಕುಮಾರಿ ವಿದಿತಾರ ಬಿಡಿಸಿರುವ ಚಿತ್ರಗಳು ಕಲಾತ್ಮಕ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದು, ನೋಡುಗರಲ್ಲಿ ಆಟೋಮೋಟಿವ್ ಕ್ಷೇತ್ರದ ಮೇಲೆ ವಿಶಿಷ್ಟವಾದ ಆಸಕ್ತಿ ಬೆಳೆಸಿಕೊಳ್ಳಲು ನೆರವಾಗುತ್ತವೆ. ಅವರ ವರ್ಣಚಿತ್ರಗಳು ನೈಜ ಸೌಂದರ್ಯ ಹಾಗೂ ಆಟೋಮೋಟಿವ್ ವಿಭಾಗದ ತಾಂತ್ರಿಕ ಅದ್ಭುತಗಳನ್ನು ಎತ್ತಿ ತೋರಿಸುವುದಕ್ಕೆ ಪ್ರಸಿದ್ದಿ ಪಡೆದಿವೆ.
ನಿನ್ನೆ (ಆಗಸ್ಟ್ 9) ನಡೆದ ಆಟೋಮೋಟಿವ್ ರಾಪ್ಸೋಡಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮೈಸೂರು ಸಂಸದ ಹಾಗೂ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಾಲ್ಗೊಂಡಿದ್ದರು. ಗೌರವ ಅತಿಥಿಗಳಾಗಿ ಖ್ಯಾತ ಕಲಾವಿದರಾದ ಎಸ್.ಜಿ.ವಾಸುದೇವ್, ಕಲಾ ಇತಿಹಾಸಕಾರ್ತಿ ಮತ್ತು ವಿಮರ್ಶಕಿ ಡಾ.ಪ್ರಮೀಳಾ ಲೋಚನ್ ಭಾಗವಹಿಸಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜಕುಮಾರಿ ವಿದಿತಾ ಅವರ ವರ್ಣಚಿತ್ರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಅವರು, ವರ್ಣಚಿತ್ರ ಕಲಾ ಪ್ರದರ್ಶನದ ನಡೆಸುತ್ತಿರುವ ಆಯೋಜಕರ ಕೆಲಸ ನಿಜಕ್ಕೂ ಶ್ಲಾಘನೀಯ. ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಸಂರಕ್ಷಿಸಲು ಇನ್ನೂ ಅನೇಕ ಪ್ರಯತ್ನಗಳು ಅಗತ್ಯವಾಗಿವೆ' ಎಂದು ಹೇಳಿದ್ದರು.
ಆಟೋಮೋಟಿವ್ ರಾಪ್ಸೋಡಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಟೆಲ್ಲಾದ ಸಂಸ್ಥಾಪಕಿ ಬೆಲಿಂಡಾ ಫೆರ್ನಾಂಡಿಸ್ ಅವರು, 'ರಾಜಕುಮಾರಿ ವಿದಿತಾರ ಚಿತ್ರಗಳು ವಿಂಟೇಜ್ ಕಾರುಗಳ ಜಗತ್ತಿಗೆ ನಮ್ಮನ್ನು ಹೆಜ್ಜೆ ಹಾಕುವಂತೆ ಮಾಡುತ್ತವೆ. ಬೆಂಗಳೂರಿನಲ್ಲಿ ಆಟೋಮೋಟಿವ್ ರಾಪ್ಸೋಡಿ ವರ್ಣಚಿತ್ರ ಪ್ರದರ್ಶನ ಆಯೋಜಿಸುತ್ತಿರುವುದು ಹೆಮ್ಮೆ ತರುತ್ತಿದೆ' ಎಂದು ತಿಳಿಸಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications