ಬೆಂಗಳೂರು-ತಿರುಪತಿ KSRTC ಪ್ಯಾಕೇಜ್: ಐರಾವತ ಪ್ರಯಾಣ, ಕೇವಲ 2000 ರೂ.ಗೆ ವಸತಿ, ಆಹಾರ!
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಾರತಮಾತ್ರವಲ್ಲ ಇಡೀ ವಿಶ್ವದ ಹಲವೆಡೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ. ನಮ್ಮ ಕರ್ನಾಟಕದಿಂದಲೂ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಮೊದಲ ಬಾರಿಗೆ ಭೇಟಿ ನೀಡುವ ಭಕ್ತರಿಗೆ ಸಾರಿಗೆ ವ್ಯವಸ್ಥೆಯ ಬಗ್ಗೆ ಗೊಂದಲವಿರುತ್ತದೆ. ಅಂಥವರು ಚಿಂತಿಸುವ ಅಗತ್ಯವಿಲ್ಲ, ಅಗ್ಗದ ಬೆಲೆಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಲಭ್ಯವಿದೆ.
ನಮ್ಮ ಕರ್ನಾಟಕದ ಹಲವು ಭಾಗಗಳಿಂದ ತಿರುಪತಿಗೆ ರೈಲು ಹಾಗೂ ಬಸ್ ಸೇವೆಗಳು ಲಭ್ಯವಿದೆ. ಆದ್ರೆ ಇಲ್ಲಿ ಕೆಎಸ್‌ಆರ್‌ಟಿಸಿ ಮೂಲಕ ಪ್ಯಾಕೇಜ್ ಬಯಸುವವರಿಗಾಗಿ ಮಾಹಿತಿ ನೀಡಲಾಗಿದೆ. ಯಾವೆಲ್ಲಾ ದಿನಗಳಲ್ಲಿ ತಿರುಪತಿಗೆ ಪ್ಯಾಕೇಜ್ ಬಸ್ ಸೇವೆ ಇರಲಿದೆ, ಅದರ ಬೆಲೆ ಹಾಗೂ ಮತ್ತಿತರ ಮಾಹಿತಿಯನ್ನು ಇಲ್ಲಿ ನೋಡೋಣ.

ತಿರುಪತಿಗೆ ಹೊರಡಲು ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ನಿತ್ಯ ಬಸ್ ಸೇವೆಯನ್ನು ಒದಗಿಸುತ್ತಿದೆ. ರಸ್ತೆ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಉತ್ತಮ ಪ್ರಯಾಣ ಅನುಭವ ಒದಗಿಸುವ ಬಸ್ ಆಗಿ ಜನಪ್ರಿಯತೆ ಪಡೆದಿರುವ ಐರಾವತ ಕ್ಲಬ್ ಕ್ಲಾಸ್ ಬಸ್ ಅನ್ನು ಈ ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ಈ ಬಸ್ನಲ್ಲಿ ನೀವು ತಿರುಮಲ, ತಿರುಚನೂರು ಶ್ರೀ ಪದ್ಮಾವತಿ ದೇವಸ್ಥಾನಕ್ಕೆ ಭೇಟಿ ನೀಡಬಹುದು.
ವಾರದಲ್ಲಿ ಎರಡು ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಪ್ಯಾಕೇಜ್ ದರ ಒಂದೇ ಆಗಿರುತ್ತದೆ. ವಾರದ ಮೊದಲ ನಾಲ್ಕುದಿನ (ಸೋಮವಾರದಿಂದ ಗುರುವಾರ) ಒಬ್ಬರು ವಯಸ್ಕರಿಗೆ ರೂ. 2,000 ಟಿಕೆಟ್ ದರವಿದ್ದು, 6 ರಿಂದ 12 ವರ್ಷದ ಮಕ್ಕಳಿಗೆ 1,700ರೂ. ಪ್ಯಾಕೇಜ್ ದರವನ್ನು ನಿಗದಿಪಡಿಸಲಾಗಿದೆ. ಉಳಿದೆರಡು ದಿನಗಳಲ್ಲಿ (ಶುಕ್ರವಾರ-ಶನಿವಾರ) ವಯಸ್ಕರಿಗೆ 2,500ರೂ. ಹಾಗೂ 6 ರಿಂದ 12 ವರ್ಷದ ಮಕ್ಕಳಿಗೆ 2,000ರೂ. ಟಿಕೆಟ್ ಬೆಲೆ ಇರಲಿದೆ.

ಬುಕ್ ಮಾಡುವುದು ಹೇಗೆ?: Karnataka State Road Transport Corporation ಇದು KSRTC ಯ ಅಧಿಕೃತ ವೆಬ್‌ಸೈಟ್ ಆಗಿದ್ದು, ಇದರಲ್ಲಿ ನಿಮ್ಮ ಪ್ರಯಾಣ ಕುರಿತ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಹಾಗೆಯೇ ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿಕೊಳ್ಳಬಹುದು. ಟಿಟಿಡಿ ಪ್ರಕಾರ, 7 ದಿನಗಳ ಮುಂಚಿತವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಆದ್ದರಿಂದ, ಹೊರಡುವ ದಿನಾಂಕದ 7 ದಿನಗಳ ಒಳಗೆ ಪ್ಯಾಕೇಜ್ ಅನ್ನು ರದ್ದುಗೊಳಿಸಿದರೆ ಯಾವುದೇ ಮರುಪಾವತಿ ಇರುವುದಿಲ್ಲ.
ಪ್ಯಾಕೇಜ್ ಸೇವೆಯ ಪ್ರಕಾರ ಪ್ರತಿದಿನ ರಾತ್ರಿ ಬಸ್ 10 ಘಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ರಾತ್ರಿ 8 ಘಂಟೆಗೆ ಹಿಂತಿರುಗುತ್ತದೆ. ಈ ಅವಧಿಯಲ್ಲಿ ಮೊದಲೇ ಹೇಳಿದಂತೆ ಈ ಪ್ಯಾಕೇಜ್‌ನಲ್ಲಿ ನೀವು ತಿರುಮಲ, ತಿರುಚನೂರು ಶ್ರೀ ಪದ್ಮಾವತಿ ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ಪ್ರಯಾಣ ಹಾಗೂ ದರ್ಶನದ ವೇಳೆ ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರಾಗಿರುತ್ತೀರಿ.

ಪ್ಯಾಕೇಜ್ ಸೌಲಭ್ಯಗಳು: ನೀವು ತಿರುಪತಿ ತಲುಪಿದ ಬಳಿಕ ಸ್ನಾನ ಮಾಡಲು ಹೋಟೆಲ್ ಸೌಲಭ್ಯವಿರಲಿದೆ. ಬಳಿಕ ನೇರವಾಗಿ ತಿರುಮಲ ತಲುಪುವ ಮುನ್ನ ತಿರುಪತಿ-ತಿರುಮಲ ನಡುವಿನ ಉಪಹಾರವಿರಲಿದೆ. ನಂತರ ತಿಮ್ಮಪ್ಪನ ಶೀಘ್ರ ದರ್ಶನದ ಟಿಕೆಟ್, ತಿರುಪತಿಯಲ್ಲಿ ಪ್ರವಾಸಿ ಮಾರ್ಗದ ಸೇವೆಗಳು ಇರಲಿವೆ. ಇದೆಲ್ಲದರ ನಂತರ ಬೆಂಗಳೂರಿಗೆ ಕರೆತರಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications