10 ಲಕ್ಷದೊಳಗೆ ಸಿಗುವ ಬೆಸ್ಟ್‌ 7-ಸೀಟರ್ ಕಾರುಗಳು... ಆರಾಮ ಪ್ರಯಾಣ, ಅತ್ಯುತ್ತಮ ಮೈಲೇಜ್!

ಭಾರತದಲ್ಲಿ 7 - ಸೀಟರ್ ಕಾರುಗಳಿಗೆ ಭಾರೀ ಬೇಡಿಕೆ ಇದೆ, ಆದ್ರೆ ಬೆಲೆ ವಿಷಯವಾಗಿ ಹಲವರು ಖರೀದಿಸಲು ಹಿಂದೇಟು ಹಾಕುತ್ತಾರೆ. 7 - ಆಸನಗಳೊಂದಿಗೆ ದೊಡ್ಡ ಕುಟುಂಬಗಳು ಆರಾಮವಾಗಿ ಪ್ರಯಾಣಿಸಬಹುದಾದ ಅಗ್ಗದ ಬೆಲೆಯ ಬೆಸ್ಟ್‌ 7-ಸೀಟರ್ ಕಾರುಗಳು ಕೂಡ ಇವೆ. ವಿನ್ಯಾಸ, ವೈಶಿಷ್ಟ್ಯ, ಆರಾಮ ಪ್ರಯಾಣ ಸೇರಿದಂತೆ ಹಲವು ವಿಷಯಗಳಲ್ಲಿ ಈ ಕಾರುಗಳು ಪ್ರಯಾಣಿಕರಿಗೆ ಅತ್ಯುತ್ತಮ ಅನುಭವ ನೀಡುತ್ತವೆ. ಅಂತಹ 5 ಬೆಸ್ಟ್ 7 - ಸೀಟರ್ ಕಾರುಗಳನ್ನು ಇಲ್ಲಿ ನೀಡುತ್ತಿದ್ದೇವೆ. ಈ ಕಾರುಗಳ ಬೆಲೆ ಹಾಗೂ ಮೈಲೇಜ್ ಕುರಿತ ಮಾಹಿತಿಯನ್ನು ತಿಳಿಯೋಣ ಬನ್ನಿ.

ರೆನಾಲ್ಟ್ ಟ್ರೈಬರ್: ರೆನಾಲ್ಟ್ ಟ್ರೈಬರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‌ ಆಯ್ಕೆ ನೀಡಲಾಗಿದೆ. ರೂಪಾಂತರ ಮತ್ತು ಇಂಧನ ಪ್ರಕಾರವನ್ನು ಅವಲಂಬಿಸಿ ರೆನಾಲ್ಟ್ ಟ್ರೈಬರ್ 18.2 ರಿಂದ 20 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

best-7-seater-cars-under-10-lakhs-in-india

7 - ಆಸನಗಳ ಈ 3 ಸಿಲಿಂಡರ್ ಕಾರಿನ ಬೆಲೆಯು ರೂ. 6 ಲಕ್ಷದಿಂದ ಆರಂಭವಾಗಿ ರೂ. 8.98 ಲಕ್ಷ (ಎಕ್ಸ್ ಶೋ ರೂಂ, ದೆಹಲಿ) ಬೆಲೆಯ ಶ್ರೇಣಿಯಲ್ಲಿ ಲಭ್ಯವಿದೆ. ಟ್ರೈಬರ್ 1-ಲೀಟರ್ NA, 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 72 PS ಪವರ್ ಮತ್ತು 96 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾರುತಿ ಎರ್ಟಿಗಾ: ಮಾರುತಿ ಎರ್ಟಿಗಾ ಪೆಟ್ರೋಲ್ ಮತ್ತು CNG ಎಂಜಿನ್ ಆಯ್ಕೆಯನ್ನು ಹೊಂದಿದೆ. ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದ್ದು, ರೂಪಾಂತರ ಮತ್ತು ಇಂಧನ ಪ್ರಕಾರವನ್ನು ಅವಲಂಬಿಸಿ 20.3 ರಿಂದ 20.51 kmpl ಮೈಲೇಜ್ ನೀಡುತ್ತದೆ. ಹೊಸ ಮಾರುತಿ ಎರ್ಟಿಗಾ ಬೆಲೆಯು ರೂ. 8.69 ಲಕ್ಷದಿಂದ (ಎಕ್ಸ್ ಶೋ ರೂಂ, ದೆಹಲಿ) ಆರಂಭವಾಗುತ್ತದೆ.

best-7-seater-cars-under-10-lakhs-in-india

ಮಹೀಂದ್ರಾ ಬೊಲೆರೊ ನಿಯೋ: ಮಹೀಂದ್ರಾ ಬೊಲೆರೊ ನಿಯೋ ಕಾರನ್ನು N4, N8, N10 R, N10 ಆಯ್ಕೆಯ 4 ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಎಂಟ್ರಿ ಲೆವಲ್ ಬೊಲೆರೊ ನಿಯೊ ಬೆಲೆಯು ರೂ. 9.95 ಲಕ್ಷ (ಎಕ್ಸ್‌ಶೋರೂಂ)ದಿಂದ ಪ್ರಾರಂಭವಾಗುತ್ತದೆ. ಇದರ ನಾಲ್ಕು ವೇರಿಯೆಂಟ್‌ಗಳು ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿದ್ದು, 17.2 ಕಿ.ಮೀ ಮೈಲೇಜ್ ನೀಡುತ್ತವೆ.

ಮಾರುತಿ ಇಕೋ: ಮಾರುತಿ ಇಕೋ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಇದು ಮ್ಯಾನುಯಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ವೇರಿಯೆಂಟ್ ಮತ್ತು ಇಂಧನ ಪ್ರಕಾರವನ್ನು ಅವಲಂಬಿಸಿ 19.71 kmpl ಮೈಲೇಜ್ ನೀಡುತ್ತದೆ. ಇದರ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.5.32 ಲಕ್ಷದಿಂದ ರೂ.6.58 ಲಕ್ಷಗಳಾಗಿದೆ.

best-7-seater-cars-under-10-lakhs-in-india

ಮಹೀಂದ್ರಾ ಬೊಲೆರೊ: ಇದು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಬೆಲೆಯು ರೂ. 9,89,600 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತದೆ. ಇದು 1493 ಸಿಸಿ ಎಂಜಿನ್ ಜೊತೆಗೆ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಮಾತ್ರ ಹೊಂದಿದೆ. SUV ಮೂರು ಬಣ್ಣದ ಆಯ್ಕೆಗಳೊಂದಿಗೆ ಮೂರು ವೇರಿಯೆಂಟ್‌ಗಳಲ್ಲಿ ಬರುತ್ತದೆ. ಒಂದು ಲೀಟರ್‌ಗೆ 16 ಕಿ.ಮೀ ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, August 12, 2024, 13:05 [IST]
English summary
Best 7 seater cars under 10 lakhs in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+