ಬೆಸ್ಟ್ 7-ಸೀಟರ್ ಕಾರುಗಳು: ಬೆಲೆ 6 ಲಕ್ಷದಿಂದ ಪ್ರಾರಂಭ: ಎರಡು ಕುಟುಂಬ ಪ್ರಯಾಣಿಸಬಹುದು!

ನೀವು ವಿಶ್ವಾಸಾರ್ಹ ಮತ್ತು ಕೈಗೆಟುಕುವ ಬೆಲೆಯಲ್ಲಿ 7 ಸೀಟರ್ ಕಾರುಗಳನ್ನು ಹುಡುಕುತ್ತಿದ್ದರೆ, 15 ಲಕ್ಷ ರೂ.ಗಿಂತ ಕಡಿಮೆ ಹಾಗೂ ರೂ.8.69 ಲಕ್ಷ (ಎಕ್ಸ್‌ ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ಟಾಪ್-5 ಬೆಸ್ಟ್ 7 ಸೀಟರ್ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಈ ವಾಹನಗಳು ಸಾಕಷ್ಟು ಸ್ಥಳಾವಕಾಶ, ಆಧುನಿಕ ವೈಶಿಷ್ಟ್ಯಗಳು ಮತ್ತು ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತವೆ, ಇದು ಭಾರತೀಯ ಕುಟುಂಬಗಳಿಗೆ ಸೂಕ್ತ ಆಯ್ಕೆಯೆಂದು ಹೇಳಬಹುದು. ಹಾಗಾದ್ರೆ ಬನ್ನಿ ನಿಮ್ಮ ಬಜೆಟ್‌ನಲ್ಲಿ ಯಾವೆಲ್ಲಾ ಕಾರುಗಳು ಖರೀದಿಗೆ ಸಿಗಲಿವೆ ಎಂಬುದನ್ನು ಇಲ್ಲಿ ನೋಡೋಣ.

ರೆನಾಲ್ಟ್ ಟ್ರೈಬರ್: ಬಜೆಟ್ ಸ್ನೇಹಿ 7 ಸೀಟರ್ ಹೊಂದಿರುವ ರೆನಾಲ್ಟ್ ಟ್ರೈಬರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.99 ಲಕ್ಷಗಳಾಗಿದೆ. 1-ಲೀ. ನ್ಯಾಚುರಲ್ಲಿ ಆಸ್ಪಿರೇಟೆಡ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಮೈಲೇಜ್ ವಿಷಯಕ್ಕೆ ಬಂದರೆ ಈ ಕಾರು 18.2 ರಿಂದ 20 kmpl ಮೈಲೇಜ್ ನೀಡುತ್ತದೆ.

best-7-seater-cars-under-15-lakh-maruti-ertiga-toyota-rumion-renault-triber

ಮಾರುತಿ ಸುಜುಕಿ ಎರ್ಟಿಗಾ: ಮಾರುತಿ ಸುಜುಕಿ ಎರ್ಟಿಗಾ 7 ಸೀಟರ್ ಎಂಪಿವಿಯಾಗಿದ್ದು, ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.69 ಲಕ್ಷದಿಂದ ರೂ.13.3 ಲಕ್ಷಗಳಾಗಿದೆ. ಈ ಮಾರುತಿ ಎರ್ಟಿಗಾ ಕಾರು, 1.5 ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ, 5 ಸ್ವೀಡ್ ಮ್ಯಾನುವಲ್/ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ .

ಜೊತೆಗೆ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಉತ್ತಮವಾಗಿ ಮೈಲೇಜ್ ನೀಡಲಿದ್ದು, 20.51 ಕಿ.ಮೀ ರಿಂದ 26.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಆರಾಮವಾಗಿ ಈ ಕಾರಿನಲ್ಲಿ ಪ್ರಯಾಣ ಮಾಡಬಹುದಾಗಿದೆ. 7 ಜನ ಸುಖವಾಗಿ ಪ್ರಯಾಣಿಸಲು ಬೇಕಾಗುವಷ್ಟು ಸ್ಥಳಾವಕಾಶವನ್ನು ಈ ಕಾರು ನೀಡುತ್ತಿದ್ದು, ಬಜೆಟ್‌ ಫ್ರೆಂಡ್ಲಿ ಸೆವೆನ್ ಸೀಟರ್ ಕಾರಾಗಿದೆ.

best-7-seater-cars-under-15-lakh-maruti-ertiga-toyota-rumion-renault-triber

ಮಹೀಂದ್ರಾ ಎಕ್ಸ್ ಯುವಿ 700: ಮಹೀಂದ್ರಾ ಎಕ್ಸ್ ಯುವಿ 700 ಪ್ರೀಮಿಯಂ 7 ಸೀಟರ್ ಎಸ್‌ಯುವಿ ಆಗಿದ್ದು, ಪೆಟ್ರೋಲ್ (2.0 ಲೀಟರ್ ಟರ್ಬೊ) ಮತ್ತು ಡೀಸೆಲ್ (2.2 ಲೀಟರ್ ಟರ್ಬೊ) ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುವ ಪೆಟ್ರೋಲ್ ರೂಪಾಂತರವು 13.99 ಲಕ್ಷ ರೂ.ಗಳಿಂದ ಪ್ರಾರಂಭವಾದರೆ, ಡೀಸೆಲ್ ಆವೃತ್ತಿಯು 14.59 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ.

ಕಿಯಾ ಕಾರೆನ್ಸ್: 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಸೇರಿದಂತೆ ಅನೇಕ ಎಂಜಿನ್ ಆಯ್ಕೆಗಳನ್ನು ನೀಡುವ ಕಿಯಾ ಕಾರೆನ್ಸ್ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.10.52 ಲಕ್ಷಗಳಾಗಿದೆ. ರೂಪಾಂತರವನ್ನು ಅವಲಂಬಿಸಿ, ಕಾರೆನ್ಸ್ ಮಧ್ಯದಲ್ಲಿ ಬೆಂಚ್ ಹೊಂದಿರುವ 7-ಸೀಟರ್ ಆಗಿ ಅಥವಾ ಮಧ್ಯದಲ್ಲಿ ಪ್ರತ್ಯೇಕ ಕ್ಯಾಪ್ಟನ್ ಸೀಟುಗಳನ್ನು ಹೊಂದಿರುವ 6-ಸೀಟರ್ ಆಗಿ ಲಭ್ಯವಿದೆ.

best-7-seater-cars-under-15-lakh-maruti-ertiga-toyota-rumion-renault-triber

ಟೊಯೊಟಾ ರುಮಿಯಾನ್: ಟೊಯೊಟಾ ರುಮಿಯಾನ್ ಬೆಲೆಯು 10.44 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 13.73 ಲಕ್ಷ ರೂ. (ಎಕ್ಸ್‌ ಶೋರೂಂ) ಗಳವರೆಗೆ ಹೋಗುತ್ತದೆ. ಇ-ಸಿಎನ್ ಜಿ ತಂತ್ರಜ್ಞಾನದೊಂದಿಗೆ ನಿಯೋಡ್ರೈವ್ ನೊಂದಿಗೆ 1.5 ಲೀಟರ್ ಕೆ-ಸೀರಿಸ್ ಎಂಜಿನ್ ಹೊಂದಿದೆ. ಇದು ಹೆಚ್ಚಿನ ಮೈಲೇಜ್ ಮತ್ತು ಉತ್ತಮ ಪರ್ಫಾಮೆನ್ಸ್ ಒದಗಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, December 8, 2024, 10:00 [IST]
English summary
Best 7 seater cars under 15 lakh maruti ertiga toyota rumion renault triber
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+