ಡಿಸೈನ್‌ನಲ್ಲಿ ಪ್ರೀಮಿಯಂ ಕಾರಿಗಿಂತಲೂ ಬೆಸ್ಟ್... 30 ಕಿ.ಮೀ ಮೈಲೇಜ್... ರೂ.6 ಲಕ್ಷಕ್ಕೆ ಮನೆಗೆ ತನ್ನಿ..!
ಭಾರತದಲ್ಲಿ ಸೆಡಾನ್‌ಗಳಿಗಿಂತ ಎಸ್‌ಯುವಿಗಳಿಗೆ ಕ್ರೇಜ್ ಹೆಚ್ಚಾಗುತ್ತಿದ್ದು, ಎಲ್ಲಾ ವರ್ಗದ ಜನರಿಗೂ ಎಸ್‌ಯುವಿಗಳು ಈಗ ಖರೀದಿಗೆ ಲಭ್ಯವಿದೆ. ಮೊದಲು ಪೂರ್ಣ ಗಾತ್ರದ ಎಸ್‌ಯುವಿಗಳು ರೂ. 10 ಲಕ್ಷಕ್ಕಿಂತ ಹೆಚ್ಚು ಪಾವತಿಸಬೇಕಾಗಿತ್ತು. ಆದ್ರೆ ಈಗ ಕಾರು ತಯಾರಿಕಾ ಕಂಪನಿಗಳು ಮೈಕ್ರೋ ಎಸ್‌ಯುವಿಗಳ ಮೂಲಕ ಜನರ ಈ ಕನಸನ್ನು ನನಸು ಮಾಡುತ್ತಿವೆ.
ಇದೇ ಕಾರಣಕ್ಕೆ ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಕ್ರೇಜ್ ಹೆಚ್ಚುತ್ತಿದೆ. ಮೈಕ್ರೋ ಎಸ್‌ಯುವಿಗಳು ದೇಶದ ಲಕ್ಷಾಂತರ ಕುಟುಂಬಗಳಿಗೆ ಬಜೆಟ್ ಸ್ನೇಹಿ ಕಾರುಗಳಾಗುತ್ತಿವೆ. ಕಡಿಮೆ ಬೆಲೆಯ ಜೊತೆಗೆ, ಇದು ಪೂರ್ಣ ಪ್ರಮಾಣದ SUV ಯ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. 6 ಲಕ್ಷ ಬಜೆಟ್‌ನಲ್ಲಿ ಕಾಂಪ್ಯಾಕ್ಟ್ SUV ಯ ವೈಶಿಷ್ಟ್ಯಗಳನ್ನು ನೀವು ಬಯಸಿದರೆ, ನೀವು ಟಾಟಾ ಪಂಚ್ ಅನ್ನು ಮನೆಗೆ ತರಬಹುದು.

ಉತ್ತಮ ನಿರ್ಮಾಣ ಗುಣಮಟ್ಟದಿಂದಾಗಿ, ಟಾಟಾ ಪಂಚ್ ಮಿನಿ ನೆಕ್ಸಾನ್ ಆಗಿ ಜನರಲ್ಲಿ ಜನಪ್ರಿಯವಾಗಿದೆ. ಇದರ ಗಟ್ಟಿಮುಟ್ಟದ ನೋಟದೊಂದಿಗೆ, ಈ ಮೈಕ್ರೋ SUV ಉತ್ತಮ ರಸ್ತೆ ಉಪಸ್ಥಿತಿಯನ್ನು ಹೊಂದಿದೆ. ಡಿಸೈನ್, ವೈಶಿಷ್ಟ್ಯಗಳು, ಬಜೆಟ್ ಮತ್ತು ಮೈಲೇಜ್ ವಿಷಯದಲ್ಲಿ ಕಾಂಪ್ಯಾಕ್ಟ್ SUV ಗಳಿಗೆ ಟಾಟಾ ಪಂಚ್ ಬೆಲೆಗೆ ತಕ್ಕ ಮೌಲ್ಯವನ್ನು ನೀಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಬೆಲೆ, ಮೈಲೇಜ್: ಟಾಟಾ ಪಂಚ್‌ನ ಮೂಲ ಮಾದರಿಯು ರೂ. 6.00 ಲಕ್ಷ (ಎಕ್ಸ್ ಶೋ ರೂಂ) ದಿಂದ ಆರಂಭವಾಗುತ್ತದೆ. ಟಾಪ್ ಎಂಡ್ ಸ್ಪೆಕ್ ಬೆಲೆ ರೂ. 10.10 ಲಕ್ಷದವರೆಗೆ ಇದೆ. ಈ ವಾಹನವು 33 ವಿವಿಧ ವೇರಿಯೆಂಟ್‌ಗಳು ಮತ್ತು 9 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್‌ನೊಂದಿಗೆ ಟಾಟಾ ಪಂಚ್ 20 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು ಟಾಟಾ ಪಂಚ್ ಸಿಎನ್‌ಜಿ ಆವೃತ್ತಿಯಲ್ಲೂ ಲಭ್ಯವಿದ್ದು, 30 ಕಿ.ಮೀಗಿಂತ ಹೆಚ್ಚು ಮೈಲೇಜ್ ನೀಡುತ್ತದೆ. ಟಾಟಾ ಪಂಚ್ ಎಂಜಿನ್ ಆಯ್ಕೆಗಳ ಬಗ್ಗೆ ನೋಡುವುದಾದ್ರೆ 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ 3 ಸಿಲಿಂಡರ್ ರೆವೊಟ್ರಾನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ನೀವು ಈ ಕಾರನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಆಯ್ಕೆ ಮಾಡಬಹುದು. ಮೊದಲೇ ಹೇಳಿದಂತೆ ಸಿಎನ್‌ಜಿಯಲ್ಲೂ ಲಭ್ಯವಿದೆ.
ವೈಶಿಷ್ಟ್ಯಗಳು: ಹರ್ಮನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲೆದರ್ ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸಿಟಿ, ಇಕೋ ಡ್ರೈವ್ ಮೋಡ್, ಹೈಟ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ಮುಂತಾದ ಹಲವು ವೈಶಿಷ್ಟ್ಯಗಳು ಕಡಿಮೆ ಬಜೆಟ್ ಟಾಟಾ ಪಂಚ್‌ನಲ್ಲಿ ಲಭ್ಯವಿದೆ.

ಸುರಕ್ಷತೆ: ಮೊದಲಿನಿಂದಲೂ ಟಾಟಾ ಕಾರುಗಳು ಗುಣಮಟ್ಟದಲ್ಲಿ ತಮಗೆ ತಾವೆ ಸಾಟಿ ಎಂಬಂತಿವೆ. ಇನ್ನು ಪಂಚ್ ವಿಷಯಕ್ಕೆ ಬಂದರೆ ಗ್ಲೋಬಲ್ ಎನ್‌ಸಿಎಪಿ ಕ್ರಾಷ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತೆಯನ್ನು ಪಡೆದುಕೊಂಡಿದೆ. ಟಾಟಾ ಪಂಚ್‌ನಲ್ಲಿ 2 ಏರ್‌ಬ್ಯಾಗ್‌ಗಳು, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್‌ಗಳು, ಚೈಲ್ಡ್ ಲಾಕ್, ಎಬಿಎಸ್, ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ನೀಡಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications