BMW 7 Series Protection: ಬಂದೂಕಿನ ಗುಂಡಿಗೂ ಜಗ್ಗುವುದಿಲ್ಲ ಬಿಎಂಡಬ್ಲ್ಯೂ 7 ಸೀರಿಸ್ ಕಾರು

ವಿಶ್ವದ ಐಷಾರಾಮಿ ಕಾರು ತಯಾರಕ ಕಂಪನಿಯಾಗಿ ಬಿಎಂಡಬ್ಲ್ಯೂ (BMW) ಹೆಸರು ಮಾಡಿದೆ. ಕಂಪನಿಯು ತನ್ನ ಪ್ರಖ್ಯಾತ '7 ಸೀರಿಸ್' ಕಾರನ್ನು ಸುರಕ್ಷತೆಯ ದೃಷ್ಟಿಯಿಂದ ಈಗಿನ ಕಾಲಘಟಕ್ಕೆ ಸರಿಹೊಂದುವಂತೆ ಅಭಿವೃದ್ಧಿಪಡಿಸಿದೆ. ಈ ಮೂಲಕ ಹೆಚ್ಚಿನ ಸೌಕರ್ಯಗಳೊಂದಿಗೆ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದು ಭರ್ಜರಿ ಕಾರಾಗಿ ಹೊರಹೊಮ್ಮಿದೆ.

ವಿಶೇಷವಾಗಿ ಬಿಎಂಡಬ್ಲ್ಯೂ 7 ಸೀರಿಸ್ ಸೆಡಾನ್ ಸುರಕ್ಷತೆಗಾಗಿ ವಿಆರ್9 ಪ್ರೊಟೆಕ್ಷನ್ (VR9 Protection) ದರ್ಜೆಯ ಮಾನದಂಡವನ್ನು ಹೊಂದಿದೆ. ಈ ಕಾರನ್ನು ಬಂದೂಕಿನ ಗುಂಡು ಮತ್ತು ಸ್ಪೋಟಕದ ತೀವ್ರತೆಯನ್ನು ಮೆಟ್ಟಿ ನಿಲ್ಲುವಂತೆ ವಿನ್ಯಾಸಗೊಳಿಸಲಾಗಿದೆ. ಕಾರಿನ ರಕ್ಷಣೆಗಾಗಿ ಉಕ್ಕಿನ ಮಿಶ್ರಲೋಹ (Steel Alloys)ವನ್ನು ಬಳಕೆ ಮಾಡಲಾಗಿದ್ದು, ಗಟ್ಟಿಮುಟ್ಟದ ಬಾಗಿಲುಗಳು (Doors), ಅತ್ಯಾಧುನಿಕ ಗಾಜು (Glass)ಗಳನ್ನು ಪಡೆದಿದ್ದು, ಸಂಭಾವ್ಯ ಅಪಾಯವನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿದೆ.

BMW 7 Series Protection: Luxury car have New Era of Security

ಹೊಸ ಬಿಎಂಡಬ್ಲ್ಯೂ 7 ಸೀರಿಸ್ ಕಾರಿನಲ್ಲಿ ಪ್ರಯಾಣಿಕರ ಸೌಕರ್ಯ ಹಾಗೂ ಕಾರ್ಯಕ್ಷಮತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆಯೇ ಸುರಕ್ಷತೆಯಲ್ಲಿಯೂ ಅತ್ಯುತ್ತಮವಾಗಿರುವಂತೆ ಸಿದ್ಧಪಡಿಸಲಾಗಿದೆ. ಸೆಲ್ಫ್ ಸೀಲಿಂಗ್ ಫ್ಯುಯೆಲ್ ಟ್ಯಾಂಕ್ (Self - Sealing Fuel Tank)ನಿಂದ ರೂಫ್ (ಮೇಲ್ಚಾವಣೆ)ವರೆಗೂ ಈ ಕಾರಿನ ಪ್ರತಿಯೊಂದು ಭಾಗವನ್ನು ಶತ್ರುಗಳ ದಾಳಿಯಿಂದ ರಕ್ಷಣೆ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಈ ಕಾರಿನ ಸುರಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.

ಬಿಎಂಡಬ್ಲ್ಯೂ 7 ಸೀರಿಸ್ ಕಾರಿನ ವಿಶೇಷತೆ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಈ ಕಾರಿನ ಒಳಭಾಗ (ಕ್ಯಾಬಿನ್) ಹೆಚ್ಚು ವಿಶಾಲವಾಗಿದ್ದು, ಆರಾಮದಾಯಕವಾಗಿ ಪ್ರಯಾಣಿಬಹುದಾಗಿದೆ. ಇದು 4.4 - ಲೀಟರ್ ಟ್ವಿನ್ ಟರ್ಬೊವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, 530 ಹೆಚ್‌ಪಿ ಪವರ್, 750 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ.

BMW 7 Series Protection: Luxury car have New Era of Security

ಈ ಕಾರು, 8-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದ್ದು, 4WD (ಫೋರ್ ವೀಲ್ಸ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಕೇವಲ 6.6 ಸೆಕೆಂಡುಗಳಲ್ಲಿ 0 - 100 ಕೆಪಿಹೆಚ್ ವೇಗವನ್ನು ಹೊಂದಲಿದೆ. ಜೊತೆಗೆ 210 ಕೆಪಿಹೆಚ್ ಟಾಪ್ ಸ್ವೀಡ್ (ಗರಿಷ್ಠ ವೇಗ) ಪಡೆಯಲಿದ್ದು, ರಸ್ತೆಯಲ್ಲಿ ಉತ್ತಮವಾದ ವೇಗವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

ಬಿಎಂಡಬ್ಲ್ಯೂ 7 ಸೀರಿಸ್, ಇಂಟಿಗ್ರಲ್ ಆಕ್ಟಿವ್ ಸ್ಟೀರಿಂಗ್ (Integral Active Steering) ಒಳಗೊಳ್ಳುವ ಮೂಲಕ ಅತ್ಯಾಧುನಿಕವಾಗಿದೆ. ಪ್ರಮುಖವಾಗಿ, 20 - ಇಂಚಿನ ಲೈಟ್ ಅಲಾಯ್ ವೀಲ್ಸ್, ಪಿಎಎಕ್ಸ್ (PAX) ಟೈಯರ್ಸ್ ಅನ್ನು ಹೊಂದಿದೆ. ಹೆಚ್ಚಿನ ಸುರಕ್ಷತೆಯನ್ನು ಖಾತ್ರಿಪಡಿಸಲು ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಕಠಿಣ ಸಂದರ್ಭದಲ್ಲಿ ಚಾಲಕನ್ನು ಎಚ್ಚರಿಸುತ್ತದೆ.

BMW 7 Series Protection: Luxury car have New Era of Security

ಬಿಎಂಡಬ್ಲ್ಯೂ ಕಂಪನಿಯು ಗ್ರಾಹಕರ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಈ ಕಾರನ್ನು ಸಿದ್ಧಪಡಿಸಿದೆ. ಅದಕ್ಕೆ ತಕ್ಕಂತೆಯೇ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ನೀಡಿದೆ. ಹಿಂಭಾಗದ ಆಸನಗಗಳ ನಡುವೆ ಪುಟ್ಟ ಕೂಲ್ ಬಾಕ್ಸ್ (Cool Box), 28 ಕರ್‌ಗಳೊಂದಿಗೆ ಬೋವರ್ಸ್ & ವಿಲ್ಕಿನ್ಸ್ ಆಡಿಯೊ ಸಿಸ್ಟಮ್, ಎಲೆಕ್ಟಿಕಲಿ ಆಪರೇಟೆಡ್ ರೋಲರ್ ಸನ್‌ಬ್ಲೈಂಡ್‌, ಟಚ್‌ಸ್ಕ್ರೀನ್, ಇಂಟರ್‌ಕಾಮ್ ಸಿಸ್ಟಮ್‌ ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಬಿಎಂಡಬ್ಲ್ಯೂ ತನ್ನ ಕಾರಿನಲ್ಲಿ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯವನ್ನು ಪರಿಚಯಿಸಿ ಸುಮ್ಮನಾಗಿಲ್ಲ. ಇದರ ನಿರ್ವಹಣೆ ಕುರಿತು ಚಾಲಕರಿಗೆ ವಿಶೇಷ ತರಬೇತಿ ಶಿಬಿರವನ್ನು ಸಹ ಆಯೋಜಿಸಲು ತೀರ್ಮಾನ ಮಾಡಿದೆ. ಸಂಭಾವ್ಯ ಅಪಾಯ ಎದುರಾದಾಗ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ನುರಿತ ಮಾರ್ಗದರ್ಶಕರಿಂದ ತರಗತಿಗಳನ್ನು ನಡೆಸಿ, ಪ್ರತಿಯೊಂದು ರಕ್ಷಣಾ ಸಾಧನಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ.

BMW 7 Series Protection: Luxury car have New Era of Security

ಒಟ್ಟಿನಲ್ಲಿ ಬಿಎಂಡಬ್ಲ್ಯೂ ಕಂಪನಿಯು ಈ ಕಾರನ್ನು ಅತ್ಯಾಕರ್ಷಕ ಸೌಕರ್ಯಗಳೊಂದಿಗೆ ರಕ್ಷಣಾತ್ಮಕವಾಗಿ ವಿನ್ಯಾಸಗೊಳಿಸುರುವುದು ಐಷಾರಾಮಿ ಕಾರು ಖರೀದಿದಾರರಿಗೆ ಸಂತೋಷ ತಂದಿದೆ. ಮುಂಬರುವ ದಿನದಲ್ಲಿ ಯಾವ ಸೆಲೆಬ್ರಿಟಿ ಅಥವಾ ಉದ್ಯಮಿಗಳು 7 ಸೀರಿಸ್ ಸೆಡಾನ್ ಖರೀದಿಸುತ್ತಾರೆ ಎಂಬುದುದನ್ನು ಕಾದು ನೋಡಬೇಕಾಗಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಈ ಕಾರು, ರೂ.1.78 ರಿಂದ ರೂ.1.81 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, February 12, 2024, 12:25 [IST]
English summary
Bmw 7 series protection luxury car have new era of security
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+