BMW R18 ಟ್ರಾನ್ಸ್‌ಕಾಂಟಿನೆಂಟಲ್ ಬೈಕ್ ಬಿಡುಗಡೆ: ನೀವು ಊಹಿಸಿದ್ದಕ್ಕಿಂತ ಭಾರೀ ಬೆಲೆ!

ಬಿಎಂಡಬ್ಲ್ಯೂ ಮೋಟಾರ್ಡ್ ಇಂಡಿಯಾ (BMW Motorrad India) ನೂತನ 'R18 ಟ್ರಾನ್ಸ್‌ಕಾಂಟಿನೆಂಟಲ್' ಮೋಟಾರ್‌ಸೈಕಲ್‌ನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದೊಂದು ದುಬಾರಿ ಬೆಲೆಯ ಬೈಕ್ ಆಗಿದ್ದು, ಇದರ ಬೆಲೆಗೆ ಕನಿಷ್ಠವೆಂದರೂ ಮೂರು ಕಾರುಗಳನ್ನು ಖರೀದಿಸಬಹುದಾಗಿದೆ. ಈ ಮೋಟಾರ್‌ಸೈಕಲ್‌ ದರವೆಷ್ಟು, ಅಂತಹುದೇನೂ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ತಿಳಿಯೋಣ.

ಈ ನೂತನ ಬಿಎಂಡಬ್ಲ್ಯೂ ಆರ್18 ಟ್ರಾನ್ಸ್‌ಕಾಂಟಿನೆಂಟಲ್ ಬೈಕ್, ಸಾಕಷ್ಟು ಐಷಾರಾಮಿ ವೈಶಿಷ್ಟ್ಯಗಳನ್ನು ಪಡೆದಿದ್ದು, ರೂ.31.50 ಲಕ್ಷ (ಎಕ್ಸ್ ಶೋರೂಂ, ಭಾರತ) ದರಕ್ಕೆ ಖರೀದಿಗೆ ಸಿಗಲಿದೆ. ಇದು ಬಿಎಂಡಬ್ಲ್ಯೂ ಆರ್18 ಸರಣಿಯ ನಾಲ್ಕನೇ ಮೋಟಾರ್‌ಸೈಕಲ್‌ ಆಗಿದ್ದು, ಆರ್18 ಕ್ಲಾಸಿಕ್ ಮೊದಲ ಬೈಕ್. ನೂತನ ಆರ್18 ಟ್ರಾನ್ಸ್‌ಕಾಂಟಿನೆಂಟಲ್ ಬೈಕಿಗಾಗಿ ಬುಕಿಂಗ್ ದೇಶಾದ್ಯಂತ ಈಗಾಗಲೇ ಆರಂಭವಾಗಿದ್ದು, ಇತರೆ, ಬಿಎಂಡಬ್ಲ್ಯೂ ಮೋಟಾರ್‌ಸೈಕಲ್‌ಗಳಂತೆ ಇದನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ.

BMW R18 ಟ್ರಾನ್ಸ್‌ಕಾಂಟಿನೆಂಟಲ್ ಬೈಕ್ ಬಿಡುಗಡೆ: ನೀವು ಊಹಿಸಿದ್ದಕ್ಕಿಂತ ಭಾರೀ ಬೆಲೆ!

ಹೊಚ್ಚ ಹೊಸ ಬಿಎಂಡಬ್ಲ್ಯೂ ಆರ್18 ಟ್ರಾನ್ಸ್‌ಕಾಂಟಿನೆಂಟಲ್ ಬೈಕ್, ನೋಡಲು ಅತ್ಯಾಕರ್ಷಕವಾಗಿದ್ದು, ಕೊಂಚ ಮಟ್ಟಿಗೆ ದೊಡ್ಡ ಗಾತ್ರವನ್ನು ಪಡೆದಿದ್ದು, ಮೋಟಾರ್‌ಸೈಕಲ್‌ ಪ್ರಿಯರು ಇಷ್ಟಪಡುವ ರೀತಿಯಲ್ಲಿಯೇ ಇದೆ. ತೂಕದ ಬಗ್ಗೆ ಮಾತನಾಡುವುದಾದರೆ, ಈ ಬೈಕ್ 427 kg ಇದ್ದು, ಬರೋಬ್ಬರಿ 24 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಪಡೆದುಕೊಂಡಿದೆ. ಲಾಗ್ ಡ್ರೈವ್ ಹೋಗುವವರಿಗೆ ಇದು ಹೇಳಿ ಮಾಡಿಸಿದ ಬೈಕ್ ಆಗಿದೆ.

ಈ ಬೈಕ್, ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದರ ಪವರ್ ಫುಲ್ 1,802ಸಿಸಿ, ಆಯಿಲ್ ಕೋಲ್ಡ್ ಟ್ವಿನ್ ಸಿಲಿಂಡರ್ ಬಾಕ್ಸರ್ ಎಂಜಿನ್, 4,750 rpmನಲ್ಲಿ 89 bhp ಗರಿಷ್ಠ ಪವರ್ ಹಾಗೂ 3,000 rpmನಲ್ಲಿ 158 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

BMW R18 ಟ್ರಾನ್ಸ್‌ಕಾಂಟಿನೆಂಟಲ್ ಬೈಕ್ ಬಿಡುಗಡೆ: ನೀವು ಊಹಿಸಿದ್ದಕ್ಕಿಂತ ಭಾರೀ ಬೆಲೆ!

ಬಿಎಂಡಬ್ಲ್ಯೂ ಆರ್18 ಟ್ರಾನ್ಸ್‌ಕಾಂಟಿನೆಂಟಲ್ ಮೋಟಾರ್‌ಸೈಕಲ್‌ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಇದು ದೊಡ್ಡದಾದ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6 ಸ್ಪೀಕರ್‌ ಜೊತೆಗೆ ಮಾರ್ಷಲ್ ಗೋಲ್ಡ್ ಸೀರೀಸ್ ಸ್ಟೇಜ್ 2 ಆಡಿಯೋ ಸಿಸ್ಟಮ್, ಸಬ್ ವೂಫರ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಎಂಜಿನ್ ಬ್ರೇಕಿಂಗ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಸ್ಟೆಬಿಲಿಟಿ ಕಂಟ್ರೋಲ್ ಹಾಗೂ LED ಹೆಡ್‌ಲ್ಯಾಂಪ್ಸ್ ಪಡೆದಿದೆ.

ಈ ಬೈಕ್ ಹಲವು ರೈಡಿಂಗ್ ಮೋಡ್‌ ಜೊತೆಗೆ ಐದು ವಿವಿಧ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಗ್ರಾವಿಟಿ ಬ್ಲೂ ಮೆಟಾಲಿಕ್, ಬ್ಲ್ಯಾಕ್ ಸ್ಟಾರ್ಮ್ ಮೆಟಾಲಿಕ್, ಆಪ್ಷನ್ 719 ಮಿನರಲ್ ವೈಟ್ ಮೆಟಾಲಿಕ್, ಮ್ಯಾನ್ಹ್ಯಾಟನ್ ಮೆಟಾಲಿಕ್ ಮ್ಯಾಟ್ ಹಾಗೂ ಆಪ್ಷನ್ 719 ಗ್ಯಾಲಕ್ಸಿ ಡಸ್ಟ್ ಮೆಟಾಲಿಕ್/ಟೈಟಾನ್ ಸಿಲ್ವರ್ 2 ಮೆಟಾಲಿಕ್. ನೋಡಲು ಆರ್18 ಟ್ರಾನ್ಸ್‌ಕಾಂಟಿನೆಂಟಲ್ ಮೋಟಾರ್‌ಸೈಕಲ್‌ ರಿಚ್ ಲುಕ್ ಹೊಂದಿದೆ.

ಒಟ್ಟಾರೆಯಾಗಿ ಈ ಬೈಕ್, ಅದರ ಬೆಲೆಗೆ ತಕ್ಕಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದ್ದು, ಶ್ರೀಮಂತ ಗಾಹಕರು ಇಷ್ಟಪಟ್ಟು ಖರೀದಿ ಮಾಡಬಹುದು. ಕಾರುಗಳು ಹೊಂದಿರುವ ರೀತಿಯಲ್ಲಿಯೇ ದೊಡ್ಡದಾದ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ಇದು ಎಲ್ಲರನ್ನು ಆಕರ್ಷಿಸುತ್ತದೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಈ ಮೋಟಾರ್‌ಸೈಕಲ್‌ನ್ನು ಯಾರು ಖರೀದಿಸುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, March 24, 2023, 15:46 [IST]
English summary
Bmw r 18 transcontinental launched in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+