ಸಿನಿಮಾಗಳಲ್ಲಿ ಹಾಡಿ ಕೋಟಿಬೆಲೆಯ ರೇಂಜ್‌ ರೋವರ್‌ ಖರೀದಿ: ಕಲೆಯ ಬೆಲೆಗೆ, ಇದೆಲ್ಲವೂ ಕಮ್ಮಿಯೇ!

ಭಾರತೀಯ ಸೆಲೆಬ್ರಿಟಿಗಳಿಗೆ ರೇಂಜ್‌ ರೋವರ್ ಕಾರುಗಳು ಎಂದರೆ ಅದೊಂದು ರೀತಿಯ ಎಮೋಷನ್‌ ಎಂದೇ ಹೇಳಬಹುದು. ಯಾಕೆಂದರೆ ಬಹುತೇಕ ಬಾಲಿವುಡ್‌ ಮತ್ತು ಇತರ ಸೆಲೆಬ್ರಿಟಿಗಳು ತಮ್ಮ ಕಾರು ಕಲೆಕ್ಷನ್‌ನಲ್ಲಿ ರೇಂಜ್‌ ರೋವರ್‌ ಕಂಪನಿಯ ಯಾವುದಾದರೊಂದು ಕಾರು ಇರದಿದ್ದರೆ ಅದೊಂದು ರೀತಿಯಲ್ಲಿ ಅಪೂರ್ಣವೇ ಸರಿ.

ಈ ಪಾಲಿಗೆ ಇದೀಗ ಮತ್ತೊಬ್ಬ ಕಲಾವಿದ ಸಹ ಸೇರಿಕೊಂಡಿದ್ದಾರೆ. ಪ್ರಖ್ಯಾತ ಚಿತ್ರಗಳಿಗೆ ಹಾಡುಗಳನ್ನು ಬರೆದಿರುವ ಈತ ತನ್ನ ಕನಸಿನ ರೇಂಜ್‌ ರೋವರ್ ವೇಲಾರ್‌ ಕಾರನ್ನು ಖರೀದಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅಂದರ ಹಾಗೆ ಈ ಲಕ್ಷುರಿ ರೇಂಜ್‌ ರೋವರ್‌ ಎಸ್‌ಯುವಿಯನ್ನು ಖರೀದಿಸಿದ ಹಾಡು ಬರಹಗಾರನ ಹೆಸರು ಝುಬಿನ್‌ ಗರ್ಗ್‌.

Bollywood Singer Zubin Garg Added Range Rover Velar Into His Car Collection

ಮೂಲತಃ ಅಸ್ಸಾಂ ರಾಜ್ಯದವರಾದ ಈ ಝುಬಿನ್‌ ಗರ್ಗ್‌ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬಾಲಿವುಡ್‌ ಚಿತ್ರರಂಗದಲ್ಲಿ ಹಾಡನ್ನು ಹಾಡುವುದು ಮಾತ್ರವಲ್ಲದೇ ಚಿತ್ರಗೀತೆಗಳನ್ನು ಬರೆಯುವುದರಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಝುಬಿನ್‌ ಗರ್ಗ್‌ ಒಬ್ಬ ನಟ, ನಿರ್ದೇಶಕ, ಹಾಡುಗಾರ ಮತ್ತು ಗೀತೆ ರಚನಕಾರರೂ ಹೌದು. ಇವರ ಪ್ರಮುಖ ಚಿತ್ರಗಳೆಂದರೆ ಕಾಂಚನಾಗಂಗಾ ಮತ್ತು ಮಿಷನ್‌ ಚೈನಾ.

ಇನ್ನು ಝಬಿನ್‌ ಗರ್ಗ್ ಪ್ರಖ್ಯಾತ ರೇಂಜ್‌ ರೋವರ್‌ ವೇಲಾರ್ ಅನ್ನು ಖರೀದಿಸುವ ಮೂಲಕ ತನ್ನ ಬಹುಕಾಲದ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಇವರು ಖರೀದಿಸಿರುವ ಈ ಕಾರಿನ ವಿಶೇಷತೆಗಳೆಂದರೆ, ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಎಸ್‍ಯುವಿಯ 2.0-ಲೀಟರ್ ಇನ್‌ಲೈನ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ನೀಡಲಾಗುತ್ತದೆ. ರೇಂಜ್ ರೋವರ್‌ನ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಗಳು 8-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳೊಂದಿಗೆ ಜೋಡಿಸಲಾಗಿದೆ.

Bollywood Singer Zubin Garg Added Range Rover Velar Into His Car Collection

ರೇಂಜ್ ರೋವರ್ ವೆಲಾರ್ (Range Rover Velar) ಫೇಸ್‌ಲಿಫ್ಟೆಡ್ ಪೆಟ್ರೋಲ್ ಆವೃತ್ತಿಯು 5,500 rpm ನಲ್ಲಿ 246.6 bhp ಮತ್ತು 1,300 rpm ಮತ್ತು 4,500rpm ನಡುವೆ 365Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೇಂಜ್ ರೋವರ್ ವೆಲಾರ್ ಪಿ250 7.5 ಸೆಕೆಂಡ್‌ಗಳಲ್ಲಿ ಗಂಟೆಗೆ 01-00 ಕಿಮೀ ವೇಗವನ್ನು ತಲುಪುತ್ತದೆ. ಇನ್ನು ಈ ಮಾದರಿಯು 217 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಇನ್ನು 'D200' ಎಂದು ಕರೆಯಲ್ಪಡುವ ಡೀಸೆಲ್ ರೂಪಾಂತರವು 48V ಮೈಲ್ಡ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿದೆ. ಈ ಡೀಸೆಲ್ ಎಂಜಿನ್ 3,750 rpm ನಲ್ಲಿ 201 bhp ಮತ್ತು 1,750 rpm ಮತ್ತು 2,500rpm ನಡುವೆ 430 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಡೀಸೆಲ್ ವೆಲಾರ್ 8.3 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಅನ್ನು ಬೆಂಬಲಿಸುತ್ತದೆ ಮತ್ತು ಎಚ್‌ವಿಎಸಿ ಸೆಟಪ್ ಅನ್ನು ಸಹ ನಿಯಂತ್ರಿಸುತ್ತದೆ. ಈ ಹೊಸ ರೇಂಜ್ ರೋವರ್ ವೆಲಾರ್ ಫೇಸ್‌ಲಿಫ್ಟೆಡ್ ಎಸ್‍ಯುವಿಯಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಹೊಂದಿರುವ ಹೊಸ ಮುಚ್ಚಿದ ಸ್ಟೋರೇಜ್ ಪ್ರದೇಶವನ್ನು ಸಹ ನೋಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, March 8, 2024, 15:40 [IST]
English summary
Bollywood singer zubin garg added range rover velar into his car collection
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+