ಹೊಸ ಟಾಟಾ ಕಾರಿನ ಬುಕಿಂಗ್ ಆರಂಭ: 9 ಲಕ್ಷಕ್ಕೆ ಸಾಟಿಯಿಲ್ಲದ ಫೀಚರ್ಸ್ ಮತ್ತು ಪರ್ಫಾಮೆನ್ಸ್!
ಭಾರತದ ಹೆಮ್ಮೆಯ ಕಾರು ನಿರ್ಮಾಣ ಕಂಪನಿಯಾದ ಟಾಟಾ ಮೋಟಾರ್ಸ್ ಗ್ರಾಹಕರ ಅಭಿರುಚಿಯನ್ನು ಅರಿತುಕೊಂಡು ಅದಕ್ಕೆ ತಕ್ಕುದಾದ ರೀತಿಯಲ್ಲಿ ಕಾರುಗಳನ್ನಿ ನಿರ್ಮಿಸುತ್ತಿದೆ. ಈ ಸಾಲಿಗೆ ಇದೀಗ ಮತ್ತೊಂದು ವಾಹನ ಸೇರ್ಪಡೆಯಾಗಿದ್ದು, ಲಾಂಚ್ ಆಗುವುದಕ್ಕೂ ಮುನ್ನವೇ ಬುಕಿಂಗ್ ಅನ್ನು ಆರಂಭಿಸಲಾಗಿದೆ. ಟಾಟಾ ಅಲ್ಟ್ರೋಜ್ ಕಾರಿನ ಕುರಿತಾಗಿ ಎಲ್ಲರಿಗೂ ತಿಳಿದಿದೆ. ಇದೀಗ ಟಾಟಾ ಈ ಕಾರಿನ ರೇಸರ್ ಎಡಿಷನ್ ಅನ್ನು ಹೊರ ತರಲಿದ್ದು, ಇದು ಈ ಕಾರಿನ ಪರ್ಫಾಮೆನ್ಸ್ ಎಡಿಷನ್ ಆಗಿದೆ. ಟಾಟಾ ಈ ಕಾರಿನ ಬುಕಿಂಗ್ ಅನ್ನು ಇದೀಗ ಆರಂಭಿಸಿದೆ.
ಹೌದು, ಈಗಾಗಲೇ ಬುಕಿಂಗ್ ಓಪನ್ ಆಗಿರುವ ಈ ಕಾರಿನ ಕುರಿತಾಗಿ ಹೇಳುವುದಾದರೆ, ಮಾಹಿತಿಗಳ ಪ್ರಕಾರ ಈ ಆಲ್ಟ್ರೋಜ್ ರೇಸರ್ (Tata Altroz Racer) ಎಡಿಷನ್ ಸುಮಾರು ಮೂರು ವೇರಿಯಂಟ್‌ನಲ್ಲಿ ಲಭ್ಯವಿದೆ. ಈ ವೇರಿಯಂಟ್‌ಗಳನ್ನು R1, R2 ಮತ್ತು R3 ಎಂದು ಹೆಸರಿಸಲಾಗಿದೆ. ಈ ಕಾರಿನಲ್ಲಿ ಸೆಗ್ಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಂ ಸಿಗಲಿದೆ.

ಹೆಚ್ಚಿನ ಸುರಕ್ಷತೆಗಾಗಿ ಈ ಕಾರಿಗೆ 360 ಡಿಗ್ರಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಟಾಟಾ ಮೋಟಾರ್ಸ್ ಬುಧವಾರ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ನೂತನ 'ಆಲ್ಟ್ರೋಜ್ ರೇಸರ್' ಕಾರಿನ ಟೀಸರ್ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದು ಹ್ಯಾಚ್‌ಬ್ಯಾಕ್‌ನ ಹೊರಭಾಗದ ವಿನ್ಯಾಸ (ಡಿಸೈನ್)ದ ಬಗ್ಗೆ ಒಂದಷ್ಟು ಬೆಳಕನ್ನು ಚೆಲ್ಲುತ್ತದೆ. ಈ ವಿಡಿಯೋದಲ್ಲಿ ಹೊಸ ಆಲ್ಟ್ರೋಜ್ ರೇಸರ್ ಮಾದರಿಯು ಡುಯಲ್-ಟೋನ್ ಪೇಂಟ್ ಸ್ಕೀಮ್ (ಬಣ್ಣದ ಆಯ್ಕೆ) ಹೊಂದಿರುವುದನ್ನು ನೋಡಬಹುದು.
ವಿಶೇಷವಾಗಿ ಕಪ್ಪು (ಬ್ಲ್ಯಾಕ್) ಬಣ್ಣವು ಪೀಲರ್‌ಗಳು, ರೇರ್ ಡೋರ್ ಹ್ಯಾಂಡಲ್‌ಗಳು ಹಾಗೂ ಬಾನೆಟ್‌ನಾದ್ಯಂತ ಹರಡಿಕೊಂಡಿದೆ. ಅಲ್ಲಲ್ಲಿ ಬಿಳಿ (ವೈಟ್) ಬಣ್ಣದ ಸ್ಟ್ರಿಪ್‌ಗಳಿವೆ. ಶಾರ್ಕ್-ಫಿನ್ ಆಂಟೆನಾ ಮತ್ತು ಫ್ರಂಟ್ (ಮುಂಭಾಗ) ಫೆಂಡರ್‌ನಲ್ಲಿ 'ರೇಸರ್' ಬ್ಯಾಡ್ಜಿಂಗ್ ಅನ್ನು ಕಾಣಬಹುದು. ಆದಾಗ್ಯೂ ಈ ಹ್ಯಾಚ್‌ಬ್ಯಾಕ್‌ನ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯ (ಫೀಚರ್ಸ್)ಗಳ ಕುರಿತಂತೆ ಟಾಟಾ ಮೋಟಾರ್ಸ್ ಯಾವುದೇ ಅಧಿಕೃತ ವಿವರಗಳನ್ನು ಬಹಿರಂಗಪಡಿಸಿಲ್ಲ.

ಈಗ ಮಾರಾಟದಲ್ಲಿರುವ ಸ್ಟ್ಯಾಂಡರ್ಡ್ ಆಲ್ಟ್ರೊಜ್‌ಗಿಂತ ರೇಸರ್ ಆವೃತ್ತಿ ಭಿನ್ನವಾಗಿ ಕಾಣಲು, ಹುಡ್ ಸೇರಿದಂತೆ ರೂಫ್, ORVM, ಪಿಲ್ಲರ್‌ಗಳು ಮತ್ತು ಅಲಾಯ್ ವೀಲ್‌ಗಳೆಲ್ಲವನ್ನು ಬ್ಲಾಕ್ ಔಟ್‌ನೊಂದಿಗೆ ಡಿಸೈನ್ ಮಾಡಲಾಗಿದೆ. ಇದಲ್ಲದೆ, ರೂಫ್ ಮತ್ತು ಹುಡ್ ಮೇಲೆ ಅವಳಿ ಬಿಳಿ ಪಟ್ಟಿಗಳನ್ನು ಹೊಂದಿದ್ದು, ಸ್ಪೋರ್ಟಿ ನೋಟವನ್ನು ಹೆಚ್ಚಿಸುತ್ತವೆ. ಕ್ಯಾಬಿನ್ ಬಿಳಿ ಅಕ್ಸೆಂಟ್‌ಗಳೊಂದಿಗೆ ಬ್ಲಾಕ್ ಮತ್ತು ರೆಡ್ ಥೀಮ್ ಅನ್ನು ಸಹ ಹೊಂದಿದೆ.
ಹೊಸ ಆಲ್ಟ್ರೋಜ್ ರೇಸರ್ ಹ್ಯಾಚ್‌ಬ್ಯಾಕ್‌ನ್ನು ಆಲ್ಫಾ (ಆಗೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್ - ALFA) ಪ್ಲಾಟ್‌ಫಾರ್ಮ್‌ನಡಿ ಕಂಪನಿಯು ಅಭಿವೃದ್ದಿಪಡಿಸಿದೆ ಎಂದು ತಿಳಿದುಬಂದಿದೆ. ಈ ಕಾರು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಬರಲಿದ್ದು, ೧೨೦ ಪಿಎಸ್ ಗರಿಷ್ಠ ಪವರ್ ಮತ್ತು 170 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ದೊರೆಯುವ ಸಾಧ್ಯತೆಯಿದೆ.
ಈ ಟಾಟಾ ಆಲ್ಟ್ರೊಜ್ ರೇಸರ್ ಅನ್ನು 2023 ಆಟೋ ಎಕ್ಸ್‌ಪೋದಲ್ಲಿ ಮತ್ತು ಭಾರತ್ ಮೊಬಿಲಿಟಿ ಶೋ 2024 ರಲ್ಲಿ ಮೊದಲ ಬಾರಿ ಪ್ರದರ್ಶಿಸಲಾಗಿತ್ತು. ಆಗ ನಾವು ಕಂಡಂತೆ 10.25 ಇಂಚಿನ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ವೈರ್‌ಲೆಸ್ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಮಲ್ಟಿಪಲ್ ಡ್ರೈವ್ ಮೋಡ್‌ಗಳು, ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹೊಂದಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








