Budget 2024: ದೊಡ್ಡ ಹೊಡೆತ.. ಟಾಟಾ, ಮಹೀಂದ್ರಾ, ಮಾರುತಿ ಸುಜುಕಿ ಕಂಪನಿಗಳ ಷೇರುಗಳು ಕುಸಿತ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಇಂದು (ಜುಲೈ 23) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2024-25ರ ಪೂರ್ಣ ಪ್ರಮಾಣದ ಬಜೆಟ್ (Budget) ಮಂಡಿಸಿದರು. ಈ ಮೂಲಕ ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೂ ಭಾಜನರಾದರು. ಈ ಬಜೆಟ್‌ನಲ್ಲಿ ಕೆಲವು ವಲಯಗಳಿಗೆ ಭರ್ಜರಿ ಕೊಡುಗೆ ಸಿಕ್ಕರೆ, ಒಂದಷ್ಟು ವಲಯಗಳು ಸ್ವಲ್ಪ ನಿರಾಸೆ ಅನುಭವಿಸಿವೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು, ತಮ್ಮ ಬಜೆಟ್‌ ಭಾಷಣದಲ್ಲಿ ದೇಶದಲ್ಲಿ ವಿದ್ಯುತ್ ಚಾಲಿತ ವಾಹನ (Electric Vehicle - EV)ಗಳ ಬಳಕೆ ಉತ್ತೇಜಿಸುವ ಯಾವುದೇ ಯೋಜನೆಯನ್ನು ಘೋಷಣೆ ಮಾಡಲಿಲ್ಲ. ಈ ಹಿನ್ನೆಲೆ, ಷೇರುಪೇಟೆಯಲ್ಲಿ ಪ್ರಮುಖ ವಿದ್ಯುತ್ ಚಾಲಿತ ವಾಹನ ತಯಾರಕ ಕಂಪನಿಗಳಾದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರಾ ಷೇರುಗಳು ಶೇಕಡ 3% ವರೆಗೆ ಕುಸಿತ ಕಂಡವು.

Budget 2024 Tata Motors Mahindra Maruti suzuki Shares Decline

ಎನ್‌ಎಸ್‌ಇ (ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ - NSE)ಯಲ್ಲಿ ಮಧ್ಯಾಹ್ನ 12:30ರ ವೇಳೆಗೆ ಟಾಟಾ ಮೋಟಾರ್ಸ್ (Tata Motors) ಷೇರುಗಳು ಶೇಕಡ 3% ಕುಸಿತಕಂಡು ರೂ.975ರಲ್ಲಿ ವಹಿವಾಟಾಗುತ್ತಿದೆ. ಹಾಗೆಯೇ ಮಹೀಂದ್ರಾ (Mahindra) ಷೇರುಗಳು ಶೇಕಡ 2% ಇಳಿಕೆಯಾಗಿದ್ದು, ರೂ.2,763ರಲ್ಲಿ ವಹಿವಾಟು ನಡೆಯುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಚಾಲಿತ ವಾಹನೋದ್ಯಮವು ಗಮನಾರ್ಹವಾಗಿ ಬೆಳವಣಿಗೆಯಾಗುತ್ತಿದೆ. ಈ ಹಂತದಲ್ಲಿ ಕೇಂದ್ರ ಸರ್ಕಾರದ ಬೆಂಬಲ ನಿರ್ಣಾಯಕವಾಗಿದೆ ಎಂದು ಉದ್ಯಮ ಸಂಸ್ಥೆಗಳು ಬಲವಾಗಿ ಪ್ರತಿಪಾದಿಸಿದ್ದವು. ಪ್ರಧಾನಿ ಮೋದಿ ನೇತೃತ್ವದ 3.0 ಸರ್ಕಾರ ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ವಾಹನಗಳಿಗೂ ಭಾರೀ ಕೊಡುಗೆ ನೀಡಬಹುದು ಎಂಬ ನಿರೀಕ್ಷೆಗಳು ಇದ್ದವು. ಆದಾಗ್ಯೂ ಅದು ನೆರವೇರಲಿಲ್ಲ.

ಇದರಿಂದ ಹೈಬ್ರಿಡ್ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ (Maruti Suzuki) ಷೇರುಗಳು ಶೇಕಡ 2% ಕುಸಿತವಾಗಿದ್ದು, ರೂ.12,400ರಲ್ಲಿ ವಹಿವಾಟು ನಡೆಯುತ್ತಿದೆ. ದೇಶದಲ್ಲಿ ಚಾರ್ಜಿಂಗ್ ಮೂಲಸೌಕರ್ಯದ ಸಮಸ್ಯೆಯಿಂದ ಹೈಬ್ರಿಡ್ (Hybrid) ವಾಹನಗಳು ಪರ್ಯಾಯವಾಗಲಿವೆ ಎನ್ನಲಾಗಿದ್ದು, ಹೈಬ್ರಿಡ್ ವಾಹನಗಳಿಗೆ ಪ್ರಸ್ತುತ ಶೇಕಡ 28% ಜಿಎಸ್‌ಟಿ ವಿಧಿಸಲಾಗುತ್ತಿದೆ. ಅದನ್ನು ಕೈಗೆಟುಕುವಂತೆ ಮಾಡಲು ತೆರಿಗೆಯನ್ನು ಕಡಿಮೆ ಮಾಡಬಹುದು ಎಂಬ ಆಟೋಮೊಬೈಲ್ ತಜ್ಞರು ಅಂದಾಜಿಸಿದ್ದರು.

ನರೇಂದ್ರ ಮೋದಿ ಸರ್ಕಾರವು 2030ರ ವೇಳೆಗೆ ಒಟ್ಟು ವಾಹನ ಮಾರಾಟದಲ್ಲಿ ಶೇಕಡ 30% ವಿದ್ಯುತ್ ಚಾಲಿತ ವಾಹನಗಳು ಇರಬೇಕೆಂದು ಬಯಸಿದ್ದು, ಹೈಬ್ರಿಡ್ - ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಮಾರಾಟ ಬೆಂಬಲಿಸಲು ಫಾಸ್ಟರ್ ಅಡಾಪ್ಷನ್ & ಮ್ಯಾನುಫ್ಯಾಕ್ಚರಿಂಗ್ (ಫೇಮ್ FAME) ಯೋಜನೆಯನ್ನು ಮೂರನೇ ಹಂತದಲ್ಲಿ ಜಾರಿಗೊಳಿಸಲು ಹೆಚ್ಚಿನ ಅನುದಾನ ಮೀಸಲಿರಿಸಬಹುದು ಎಂಬುದರ ಕುರಿತಂತೆ ಚರ್ಚೆಗಳು ಕೂಡ ನಡೆದಿದ್ದವು. ಸದ್ಯ ಆ ಬಗ್ಗೆಯೂ ಯಾವುದೇ ಔಪಚಾರಿಕ ಘೋಷಣೆಗಳನ್ನು ಮಾಡಲಾಗಿಲ್ಲ.

ಈ ಕುರಿತಂತೆ ಕೆಲವೇ ದಿನಗಳ ಹಿಂದೆ, ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್‌.ಡಿ ಕುಮಾರಸ್ವಾಮಿ (H.D.Kumaraswamy) ಅವರು, ಹಸಿರು ಚಲನಶೀಲತೆ ಉತ್ತೇಜಿಸುವ ಸಲುವಾಗಿ ಫೇಮ್-3 (ಫಾಸ್ಟರ್ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್) ಯೋಜನೆಯನ್ನು ಸದ್ಯದಲ್ಲಿಯೇ ಘೋಷಿಸಲಾಗುವುದು. ಆದರೆ, ಈ ಬಜೆಟ್‌ನಲ್ಲಿ ಅಲ್ಲ ಎಂದು ತಿಳಿಸಿದ್ದರು.

ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (FADA) ಪ್ರಕಾರ, 2024ರ ಹಣಕಾಸು ವರ್ಷ (Finance year)ದಲ್ಲಿ ಎಲೆಕ್ಟ್ರಿಕ್ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ 91% (90,996 ಯುನಿಟ್) ಅಧಿಕಗೊಂಡಿದೆ. ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಮಾರಾಟವು ಮೂರು ಪಟ್ಟು ಹೆಚ್ಚಳವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, July 23, 2024, 14:22 [IST]
English summary
Budget 2024 tata motors mahindra maruti suzuki shares decline details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+