ಸೆಕೆಂಡ್‌ ಹ್ಯಾಂಡ್ ಮಾರುತಿ ಸ್ವಿಫ್ಟ್‌ ಖರೀದಿಸಿ ಕೇವಲ ಎರಡು ಲಕ್ಷಕ್ಕೆ: ಕನಸಲ್ಲ ಇದು, ನನಸು ಮಾಡಿಕೊಳ್ಳಿ!

ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಅವರದ್ದೇ ಆದ ಬಹುದೊಡ್ಡ ಫ್ಯಾನ್‌ ಬೇಸ್‌ ಇದೆ. ನಮ್ಮಲ್ಲಿ ಮೊದಲ ಬಾರಿಗೆ ಒಂದು ಕಾರು ತೆಗೆದುಕೊಳ್ಳುವವರು ಬಹುತೇಕ ಆಯ್ಕೆ ಮಾಡುವುದು ಮಾರುತಿ ಸುಜುಕಿ ಕಾರುಗಳನ್ನೇ. ಇದಕ್ಕೆ ಕಾರಣ ಆ ಕಾರಿನ ಬಾಳಿಕೆ ಮತ್ತು ಅದರ ಸರ್ವೀಸ್‌. ಭಾರತದ ಯಾವುದೇ ಮೂಲೆಗೆ ಹೋದರೂ ಸಹ ನೀವು ಸುಲಭವಾಗಿ ಈ ಕಾರಿಗಳನ್ನು ರಿಪೇರಿ ಮಾಡಬಹುದಾಗಿದೆ. ಮಾರುತಿ ಸ್ವಿಫ್ಟ್‌ ಸಹ ಈ ಕಂಪನಿಯ ಪ್ರಸಿದ್ದ ಕಾರುಗಳಲ್ಲಿ ಒಂದು. ನೀವೇನಾದರೂ ಸೆಕೆಂಡ್‌ ಹ್ಯಾಂಡ್‌ ಸ್ವಿಫ್ಟ್‌ ಖರಿದಿಸುವ ಯೋಜನೆಯಲ್ಲಿದ್ದರೆ ಈ ಲೇಖನ ನಿಮಗಾಗಿ.

ಈಗಾಗಲೇ ತಿಳಿಸಿದಂತೆ ಮಾರುತಿಯ ಪ್ರಸಿದ್ದ ಕಾರು ಮಾದರಿಗಳಲ್ಲಿ ಪ್ರಮುಖವಾದ ಕಾರು ಈ ಮಾರುತಿ ಸುಜುಕಿ ಸ್ವಿಫ್ಟ್‌. ಈಗ ಮಾರುಕಟ್ಟೆಯಲ್ಲಿ ನಾಲ್ಕನೇ ತಲೆಮಾರು ಮಾರಾಟದಲ್ಲಿದ್ದು, ನೀವು ಹಳೆಯ ಸ್ವಿಫ್ಟ್‌ಗಳನ್ನು 2 ಲಕ್ಷ ರೂಪಾಯಿಯ ಒಳಗೂ ಖರೀದಿ ಮಾಡಬಹುದಾಗಿದೆ. ಹೌದು, ನಿಮಗೆ ನಂಬಲು ಕಷ್ಟವಾಗಿದ್ದರೂ ನಾವು ಹೇಳುತ್ತಿರುವುದು ನಿಜ. ಸಾಧಾರಣವಾಗಿ 5 ಲಕ್ಷದ ಒಳಗೆ ಸ್ವಿಫ್ಟ್‌ ಸೆಕೆಂಡ್‌ ಹ್ಯಾಂಡ್ ಕಾರು ಸಿಗುವುದು ಕಮ್ಮಿ.

Buy Second Hand Maruti Suzuki Swift For Under Two Lakh More Details

ಆದರೆ ನೀವು ಇನ್ನೂ ಕೊಂಚ ಹಳೆಯದಾದ ಸ್ವಿಫ್ಟ್‌ ಕಾರನ್ನು ನೋಡುವುದಾದರೆ ನಿಮಗೆ ಅದು 2 ಲಕ್ಷದೊಳಗೆ ಸಿಗುತ್ತದೆ. ಕಾರ್‌ವಾಲೆ ಎಂಬ ವೆಬ್‌ಸೈಟ್‌ನಲ್ಲಿ ನೀವು 2013 ಮಾಡೆಲ್‌ನ ಸ್ವಿಫ್ಟ್‌ ಅನ್ನು 1,90,000 ರೂಗಳಿಗೆ ಖರೀದಿ ಮಾಡಬಹುದಾಗಿದೆ. ಈ ಕಾರು ಸುಮಾರು 130,000 ಕಿಮೀ ಓಡಿದ್ದು, ನೀವು ಈ ಕಾರನ್ನು ಇನ್ನೂ ಸಹ ಒಡಿಸಬಹುದಾಗಿದೆ. ವೆಬ್‌ಸೈಟ್‌ನಲ್ಲಿ ನೀಡಿರುವಂತೆ ಈ ಕಾರಿನ ಕಂಡೀಷನ್‌ ತಕ್ಕಮಟ್ಟಿಗೆ ಚೆನ್ನಾಗಿಯೇ ಇದೆ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಭಾರತದಲ್ಲಿ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಮಾರಾಟವಾಗುತ್ತಿದೆ. ಈ ಕಾರಿನ ಬಗ್ಗೆ ನೋಡುವುದಾದರೆ, ನೂತನ ಮಾರುತಿ ಸುಜುಕಿ ಸ್ವಿಫ್ಟ್‌ (Maruti Suzuki Swift) ಕಾರು ರೂ.6.49 ಲಕ್ಷದಿಂದ ರೂ.9.65 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ, ಝಡ್ಎಕ್ಸ್ಐ ಪ್ಲಸ್ ರೂಪಾಂತರ (ವೇರಿಯೆಂಟ್)ಗಳನ್ನು ಪಡೆದುಕೊಂಡಿದೆ.

Buy Second Hand Maruti Suzuki Swift For Under Two Lakh More Details

ಈ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) 1.2-ಲೀಟರ್ 3-ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 80 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 112 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 24.8 ರಿಂದ 25.72 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ.

ನೂತನ ಹ್ಯಾಚ್‌ಬ್ಯಾಕ್‌ ಒಳಭಾಗವು ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಈ ಕಾರು 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಅರ್ಕಾಮಿಸ್-ಟ್ಯೂನ್ಡ್ ಸೌಂಡ್ ಸಿಸ್ಟಮ್, ಯುಎಸ್‌ಬಿ ಟೈಪ್-ಎ & ಟೈಪ್-ಸಿ ಪೋರ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಮಾರುತಿ ಸುಜುಕಿ ಸ್ವಿಫ್ಟ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಎಲ್ಲ ಮಾದರಿಗಳು 6 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಸೀಟ್ ಬೆಲ್ಟ್ ರಿಮೈಂಡರ್‌ ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ. ಶೀಘ್ರದಲ್ಲಿಯೇ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೂ ಒಳಪಡುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 17, 2024, 18:12 [IST]
English summary
Buy second hand maruti suzuki swift for under two lakh more details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+