ಬರುತ್ತಿದೆ ಚೀನಾ ಕಂಪನಿಯ ಹೊಸ ಆಫ್-ರೋಡರ್: ಯಾವುದೇ ಬೆಟ್ಟ, ಗುಡ್ಡಗಳು ಇದರ ಮುಂದೆ ಲೆಕ್ಕಕ್ಕಿಲ್ಲ!

ವಿಶ್ವದ ಅತಿ ದೊಡ್ಡ ಇವಿ ತಯಾರಕರಾದ ಬಿಲ್ಡ್ ಯುವರ್ ಡ್ರೀಮ್ಸ್ (ಬಿವೈಡಿ) ಭಾರತೀಯರ ನೆಚ್ಚಿನ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ. ಬಿವೈಡಿ (BYD) ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುತ್ತಿದ್ದರೂ, ಐಷಾರಾಮಿ ಸ್ಪೋರ್ಟ್ಸ್ ಕಾರಿನಂತಹ ವಿನ್ಯಾಸ ಮತ್ತು ವ್ಯಾಪಕ ಶ್ರೇಣಿಯು ಜನರನ್ನು ಬ್ರ್ಯಾಂಡ್‌ಗೆ ಆಕರ್ಷಿಸುತ್ತದೆ. ಬಿವೈಡಿ ಮೂರು ವಿಭಿನ್ನ ಎಲೆಕ್ಟ್ರಿಕ್ ಕಾರುಗಳಳನ್ನು ಈಗಾಗಲೇ ಮಾರಾಟ ಮಾಡುತ್ತಿದೆ. ಅವುಗಳೆಂದರೆ e6 ಎಂಪಿವಿ, ಆಟ್ಟೊ 3 ಎಸ್‍ಯುವಿ ಮತ್ತು ಸೀಲ್ ಸೆಡಾನ್ ಆಗಿದೆ. ಇನ್ನೊಂದು ವಿಷಯವೆಂದರೆ ಈ ಚೈನೀಸ್ ವಾಹನ ತಯಾರಕರು ಎಲ್ಲರೂ ತಿರುಗಿ ನೋಡುವಂತಹ ಮಾದರಿಗಳನ್ನು ಮಾಡವಲ್ಲಿ ಸಮರ್ಥರಾಗಿದ್ದಾರೆ.

ಇದೀಗ ಬಿವೈಡಿ ಕಂಪನಿಯು ಭಾರತದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಆಫ್ ರೋಡರ್ ಎಸ್‍ಯುವಿ ಆಗಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು ಹೊಸ ಮಾದರಿಯನ್ನು 2024ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಬಹುದು. ಹಬ್ಬದ ಸೀಸನ್ ನಲ್ಲಿ ಹೊಸ ಕಾರು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ತಂತ್ರವಾಗಿದೆ. ಬಿವೈಡಿ ಭಾರತದಲ್ಲಿ ಬಾವೊ 5 (Bao 5) ಎಂಬ ಜೀಪ್ ಮಾದರಿಯ ಮಾದರಿಯನ್ನು ಬಿಡುಗಡೆ ಮಾಡಲಿದೆ.

BYD Bao 5

ಬಾವೊ 5 ಜೀಪ್ ಮಾದರಿಯನ್ನು ಕಳೆದ ವರ್ಷದ ಕೊನೆಯಲ್ಲಿ ಚೀನಾದಲ್ಲಿ Fangchengbao ಅಡಿಯಲ್ಲಿ ಪ್ರಾರಂಭಿಸಲಾಯಿತು. ವಿದೇಶಗಳಲ್ಲಿ ಬಿವೈಡಿ ಐಷಾರಾಮಿ ಬ್ರಾಂಡ್ ಎಂದು ಕರೆಯಲ್ಪಡುತ್ತದೆ. 2024ರ ಜುಲೈ ತಿಂಗಳ ನಂತರ ಈ ಆಫ್-ರೋಡ್ ಎಸ್‍ಯುವಿ ಯುರೋಪಿಯನ್ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಬಿವೈಡಿ ಕಂಪನಿಯು ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ.

ಇದರೊಂದಿಗೆ ಚೀನೀ ಕಂಪನಿಯು ICE ಎಂಜಿನ್ ಮಾದರಿಗಳಿಗಾಗಿ Fangchengbao ಎಂಬ ಹೊಸ ಬ್ರ್ಯಾಂಡ್ ಅನ್ನು ರಚಿಸಿದೆ. ಫೋರ್ಡ್ ಬ್ರಾಂಕೋ ಮತ್ತು ಲ್ಯಾಂಡ್ ರೋವರ್ ಡಿಫೆಂಡರ್‌ನಂತಹ ಆಫ್-ರೋಡರ್ ಎಸ್‌ಯುವಿಗಳ ವಿನ್ಯಾಸದಿಂದ ಬಾವೊ 5 ಸ್ಫೂರ್ತಿ ಪಡೆದಿದೆ. ಬಿವೈಡಿ ಬಾವೊ 5 ಎಸ್‍ಯುವಿ ಮಾದರಿಯು ಲ್ಯಾಂಡ್ ರೋವರ್ ಡಿಫೆಂಡರ್ 110 ಮಾದರಿಯ ಗಾತ್ರದಲ್ಲಿ ಬರುತ್ತದೆ.

BYD Bao 5

ಹೊಸ ಬಾವೊ 5 ಎಸ್‍ಯುವಿಯು ನೇರ ಮುಂಭಾಗ, ಬಾಕ್ಸಿ ಹಿಂಭಾಗದ ತುದಿ, ಎತ್ತರದ ಲ್ಯಾಡರ್, ಫ್ಲಾಟ್ ಬಾನೆಟ್, ದೊಡ್ಡ ವ್ಝೀಲ್ ಅರ್ಚಾರ್ ಮತ್ತು ದೊಡ್ಡ ವ್ಹೀಲ್ ಗಳು ಈ ಆಫ್-ರೋಡ್ ಎಸ್‍ಯುವಿಗೆ ರಗಡ್ ಲುಕ್ ಅನ್ನು ಹೊಂದಿದೆ. ಇನ್ನು ಆಧುನಿಕ ಕಾರುಗಳ ವಿಶಿಷ್ಟ ಶೈಲಿಯಲ್ಲಿ, ಇದು ಹೊರಭಾಗದಲ್ಲಿ ಬೆಳಕಿನ ಬಾರ್‌ಗಳನ್ನು ಮತ್ತು ಒಳಭಾಗದಲ್ಲಿ ದೊಡ್ಡ ಡಿಸ್ ಪ್ಲೇಯನ್ನು ಸಹ ಒಳಗೊಂಡಿದೆ.

ಈ 2,800 ಕೆಜಿ ತೂಕದ ಹೊರತಾಗಿಯೂ, ಬಾವೊ 5 ಆಫ್-ರೋಡರ್ ಎಸು ಸ್ಪೋರ್ಟ್ಸ್ ಮೋಡ್‌ನಲ್ಲಿನ ಕಾರ್ಯಕ್ಷಮತೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಿಲ್ಲ. ಈ ವಾಹನವು ಕೇವಲ 4.8 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅದೇ ಸಮಯದಲ್ಲಿ, ಈ ಎಸ್‍ಯುವಿಯ ಟಾಪ್ ಸ್ಪೀಡ್ 180 ಕಿ.ಮೀ ಆಗಿದೆ.

BYD Bao 5

PHEV ಸಿಸ್ಟಂ 125 ಕಿಮೀ ರೇಂಜ್ ಅನ್ನು ಒದಗಿಸುತ್ತದೆ. ಇನ್ನು ಬಾವೊ 5 100 kW DC ಫಾಸ್ಟ್ ಚಾರ್ಜಿಂಗ್ ಅನ್ನು ಸಂಪೂರ್ಟ್ ಮಾಡುತ್ತದೆ. ಆದ್ದರಿಂದ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಬಹುದು. ಎಲೆಕ್ಟ್ರಿಕ್ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲ ವಾಹನದ ದಕ್ಷತೆಯು ವಿಭಿನ್ನ ಮಟ್ಟದಲ್ಲಿರುತ್ತದೆ. ಹಾಗಾಗಿ ಬೆಲೆಯು ಐಷಾರಾಮಿ ವಿಭಾಗದಲ್ಲಿ ಕಾರುಗಳಂತೆಯೇ ಇರುತ್ತದೆ ಎಂದು ನಾವು ಹೇಳಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 28, 2024, 11:34 [IST]
English summary
Byd bao 5 off road suv to be launch in india details
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+