ಚೀನಾ ಕಂಪನಿಯಿಂದ ಗರಿಷ್ಥ ಸುರಕ್ಷತೆ, ಕಡಿಮೆ ಬೆಲೆಯಲ್ಲಿ ಹೊಸ ಕಾರು: ಸ್ವದೇಶಿ ಕಂಪನಿಗಳಿಗೆ ಆತಂಕ!
ಚೀನಾದ ಮೂಲಕ ಬಿವೈಡಿ (BYD) ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಗ್ರಾಹಕರ ಸ್ಪಂದನೆಗೆ ತಕ್ಕಂತೆ ಈ ವರ್ಷ ದೇಶದ ಪ್ರಮುಖ ನಗರಗಳಲ್ಲಿ ಹೊಸ ಶೋರೂಂಗಳನ್ನು ತೆರೆಯುತ್ತಿದೆ. ಇದೀಗ ಬಿವೈಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.
ಬಿವೈಡಿ ಕಂಪನಿಯು ಭಾರತದಲ್ಲಿ Atto 3 ಮತ್ತು E6 ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿವೆ. ಇದೀಗ ಬಿವೈಡಿ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಡಾಲ್ಫಿನ್ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದೆ. ವಿದೇಶದಲ್ಲಿ ಬಿವೈಡಿಯ ಹೊಸ ಲೋಗೋ ಡಾಲ್ಫಿನ್ ಬಿಡುಗಡೆಯೊಂದಿಗೆ ಪ್ರಾರಂಭವಾಯಿತು ಮತ್ತು ಇದು ಆಸ್ಟ್ರೇಲಿಯಾ, ಯುರೋಪ್, ಥೈಲ್ಯಾಂಡ್, ಮಲೇಷ್ಯಾ, ಬ್ರೆಜಿಲ್, ಜಪಾನ್ ಮತ್ತು ಅದರ ತವರು ಟರ್ಫ್, ಚೀನಾದಂತಹ ಪ್ರಮುಖ ಮಾರುಕಟ್ಟೆಗಳನ್ನು ಭೇದಿಸುವಲ್ಲಿ ಈ ಕಾರು ಪ್ರ್ರಮುಖ ಪಾತ್ರವಹಿಸಿದೆ.

ಇದರಿಂದ ಬಿವೈಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ಜನಪ್ರಿಯ ಕಾರನ್ನು ಬಿಡುಗಡೆಗೊಳಿಸಿ ಹೆಚ್ಚಿನ ಗ್ರಾಹರನ್ನು ಸೆಳೆಯುವ ತಂತ್ರ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ, ಭಾರತದಲ್ಲಿ ಅತ್ಯಂತ ಕೈಗೆಟುಕುವ BYD ವಾಹನವೆಂದರೆ ಅದರ E6 ಎಂಪಿವಿ ಮತ್ತು ಬೆಲೆಗಳು ಸುಮಾರು ರೂ. 29 ಲಕ್ಷವಾಗಿದೆ. ಆದರೆ Atto 3 eSUV ಬೆಲೆಯು ಸುಮಾರು ರೂ.34 ಲಕ್ಷ ಗಳಿಂದ ಪ್ರಾರಂಭವಾಗುತ್ತದೆ.
ಬಿವೈಡಿ ಡಾಲ್ಫಿನ್ ಇವಿ (BYD Dolphin EV) ಮಾದರಿಯು ಬಿವೈಡಿ ಕಂಪನಿಯ ಇಂಜಿನಿಯರಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಈ ಎಲೆಕ್ಟಿಕ್ ಕಾರು ಕೇವಲ 7 ಸೆಕೆಂಡುಗಳಲ್ಲಿ 0-100 ಕಿ.ಮೀ ಸ್ಫೀಡ್ ಅನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಬಿವೈಡಿ ಡಾಲ್ಫಿನ್ ಎಲೆಕ್ಟ್ರಿಕ್ ಕಾರು 427 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಡಾಲ್ಫಿನ್ ವಿಶೇಷವಾಗಿ ಭಾರತೀಯ ಮಾರುಕಟ್ಟೆಯನ್ನು ಆಕರ್ಷಿಸುವಂತೆ ಮಾಡುವುದು ಅದರ ದರವಾಗಿರುತ್ತದೆ.

ಭಾರತದಲ್ಲಿ, ಡಾಲ್ಫಿನ್ ಎಲೆಕ್ಟ್ರಿಕ್ ಕಾರು ಅಟ್ಟೊ 3 ಮಾದರಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ. ಈ ಬಿವೈಡಿ ಡಾಲ್ಫಿನ್ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ MG ZS EV ಮತ್ತು ಮುಂದೆ ಬಿಡುಗಡೆಯಾಗಲಿರುವ ಟಾಟಾ ಕರ್ವ್ ಇವಿ, ಹ್ಯುಂಡೈ ಕ್ರೆಟಾ ಇವಿ, ಸಿಟ್ರನ್ ಏರ್‌ಕ್ರಾಸ್ ಮತ್ತು ಇತರ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.
ಬಿವೈಡಿ ಡಾಲ್ಫಿನ್ ಎಲೆಕ್ಟ್ರಿಕ್ ಕಾರು 4,290 mm ಉದ್ದ, 1,770 mm ಅಗಲ, 1,570 mm ಎತ್ತರ ಮತ್ತು 2,700 mm ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಬಿವೈಡಿ ಡಾಲ್ಫಿನ್ ಎಲೆಕ್ಟ್ರಿಕ್ ಕಾರು 345 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಈ ಎಲೆಕ್ರಿಕ್ ಕಾರಿನ ಹಿಂಬಂದಿಯ ಸೀಟುಗಳನ್ನು 60:40 ಸ್ಪ್ಲಿಟ್ ಮಾಡಬಹುದು. ಇನ್ನು ಎಲೆಕ್ಟ್ರಿಕ್ ಕಾರಿನ ಕನೆಕ್ಟಿವಿಟಿ LED ಟೈಲ್ ಲೈಟ್‌ಗಳನ್ನು ಹೊಂದಿರಲಿವೆ.

ಈ ಬಿವೈಡಿ ಡಾಲ್ಫಿನ್ ಎಲೆಕ್ಟ್ರಿಕ್ ಕಾರಿನಲ್ಲಿ ಡ್ಯುಯಲ್-ಲೇಯರ್ಡ್ ಡ್ಯಾಶ್‌ಬೋರ್ಡ್ ಬೃಹತ್ 12.8-ಇಂಚಿನ ತಿರುಗಬಹುದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ PM2.5 ಏರ್ ಫಿಲ್ಟರ್, 5-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಲೆಥೆರೆಟ್ ಅಪ್ಹೋಲ್ಸ್ಟರಿ, TPMS, 360- ಡಿಗ್ರಿ ಕ್ಯಾಮೆರಾ ಮತ್ತು ADAS ಸೂಟ್ ನೊಂದಿಗೆ ಬರಲಿದೆ.
ಈ ಬಿವೈಡಿ ಡಾಲ್ಫಿನ್ ಸುರಕ್ಷತಾ ರೇಟಿಂಗ್ 5-ಸ್ಟಾರ್ ಯುರೋ NCAP ಆಗಿದೆ. ಇದರಿಂದ ಈ ಕಾರು ಗರಿಷ್ಠ ಸುರಕ್ಷತೆಯನ್ನು ಹೊಂದಿರಲಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 44.9 kWh ಬ್ಯಾಟರಿ ಮತ್ತು 60.48 kWh ಬ್ಯಾಟರಿ ಆಯ್ಕೆಗಳಿವೆ . ಡಾಲ್ಫಿನ್ 180 ಮತ್ತು 310 Nm ನಡುವಿನ ಟಾರ್ಕ್ ಜೊತೆಗೆ 94 ಮತ್ತು 201 bhp ನಡುವಿನ ಪವರ್ ನೊಂದಿಗೆ ಸಿಂಗಲ್ ಮೋಟಾರ್ FWD ಲೇಔಟ್ ಅನ್ನು ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








