ಮಾರುಕಟ್ಟೆ ಶೇಕ್: ಆಕರ್ಷಕ ಬೆಲೆಯಲ್ಲಿ ಚೀನಾ ಕಾರು ಬಿಡುಗಡೆ... 2 ಕುಟುಂಬ ಪ್ರಯಾಣಿಸಬಹುದು!
ವಿಶ್ವದಾದ್ಯಂತ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಚೀನಾ ಮೂಲದ ಬಿವೈಡಿ (BYD) ಗುರುತಿಸಿಕೊಂಡಿದೆ. ಬಿಲ್ಡ್ ಯುವರ್ ಡ್ರೀಮ್ (ಬಿವೈಡಿ) ಕಂಪನಿಯು ಜನಪ್ರಿಯ ಟೆಸ್ಲಾವನ್ನು ಹಿಂದಿಕ್ಕಿ ನಂ.1 ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾಗಿದೆ. ಈ ಜನಪ್ರಿಯ ಬಿವೈಡಿ ಕಂಪನಿಯು ತನ್ನ ಹೊಸ ಬಿವೈಡಿ ಇಮ್ಯಾಕ್ಸ್ 7 (BYD eMax 7) ಎಂಪಿವಿ ಕಾರನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಿವೈಡಿ ಇಮ್ಯಾಕ್ಸ್ 7 ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.26.90 ಲಕ್ಷವಾದರೆ, ಟಾಪ್ ಸ್ಪೆಕ್ ಸುಪೀರಿಯರ್ ಮಾದರಿಯ ಬೆಲೆಯು ರೂ.29.9 ಲಕ್ಷವಾಗಿದೆ.
ಈ ಬಿವೈಡಿ ಇಮ್ಯಾಕ್ಸ್ 7 (BYD eMax 7) ಎಂಪಿವಿ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ. ಖರಿದಿಸಲು ಬಯಸುವ ಆಸಕ್ತ ಗ್ರಾಹಕರು ಸಮೀಪದ ಡೀಲರ್‌ಶಿಪ್ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.51,000 ಹಣವನ್ನು ಮುಂಗಡವಾಗಿ ಪಾವತಿಸುವ ಮೂಲಕ ಕಾಯ್ದಿರಿಸಬಹುದು. ಈ ನೂತನ ಬಿವೈಡಿ ಇಮ್ಯಾಕ್ಸ್ 7 ಎಂಪಿವಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಹಲವು ಹಣಕಾಸಿನ ಪ್ರಯೋಜನಗಳನ್ನು ಕಂಪನಿ ಘೋಷಣೆ ಮಾಡಿದೆ.

ಹೊಸ ವೈಡಿ ಇಮ್ಯಾಕ್ಸ್ 7 ಕಾರಿನಲ್ಲಿ ಬದಲಾಯಿಸಲಾದ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್-ಲ್ಯಾಂಪ್‌ಗಳನ್ನು ಹೊಂದಿದೆ, ಆದರೆ ಬಂಪರ್‌ಗಳು ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಪಡೆಯುತ್ತವೆ, ಜೊತೆಗೆ ಕ್ರೋಮ್ ಅಂಶಗಳನ್ನು ಸೇರಿಸಲಾಗುತ್ತದೆ. 225/55 R17 ಟೈರ್‌ಗಳಲ್ಲಿ ಹೊಸ ವಿನ್ಯಾಸದ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಕೂಡ ಹೊಂದಿವೆ.
ಈ ಹೊಸ ಬಿವೈಡಿ ಇಮ್ಯಾಕ್ಸ್ 7 ಕಾರು ಕ್ವಾರ್ಟ್ಜ್ ಬ್ಲೂ, ಹಾರ್ಬರ್ ಗ್ರೇ, ಕ್ರಿಸ್ಟಲ್ ವೈಟ್ ಮತ್ತು ಕಾಸ್ಮೊಸ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಕಾರಿನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಎರಡೂ ಟ್ರಿಮ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಇನ್ನು ಈ ಹೊಸ ಬಿವೈಡಿ ಇಮ್ಯಾಕ್ಸ್ 7 ಕಾರಿನಲ್ಲಿ 12.8-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್, e6 ನಲ್ಲಿ 10.1-ಇಂಚಿನ ದೊಡ್ಡ ಅಪ್‌ಡೇಟ್ ಆಗಿದೆ. ಇನ್ನು ಈ ಕಾರಿನಲ್ಲಿ ಸೆಂಟರ್ ಕನ್ಸೋಲ್ ಅನ್ನು ಸ್ವಲ್ಪಮಟ್ಟಿಗೆ ಪರಿಷ್ಕರಿಸಲಾಗಿದೆ ಮತ್ತು ಎರಡು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳು, ಕೆಲವು ಹೊಸ ಸ್ವಿಚ್‌ಗಿಯರ್ ಮತ್ತು ಹೊಸ ಡ್ರೈವ್ ಸೆಲೆಕ್ಟರ್ ಲಿವರ್ ಅನ್ನು ಒಳಗೊಂಡಿದೆ.
ಇನ್ನು ಹೊಸ ಸ್ಟೀರಿಂಗ್ ವ್ಹೀಲ್ ಅನ್ನು ಸಹ ಪಡೆಯುತ್ತದೆ, ಆದರೆ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 5-ಇಂಚಿನ LCD MID ಯೊಂದಿಗೆ ಅನಲಾಗ್ ಡಯಲ್‌ಗಳನ್ನು ಉಳಿಸಿಕೊಂಡಿದೆ. ಈ ಕಾರಿನ ಎರಡು ಟಾಪ್ ಸ್ಪೆಕ್ ರೂಪಾಂತರಗಳಲ್ಲಿ ವೆಲ್ 2 ADAS ಟೆಕ್, ಪನರೊಮಿಕ್ ಗ್ಲಾಸ್ ರೂಫ್, ಪವರ್ಡ್ ಮತ್ತು ವೆಂಟಿಲೆಟಡ್ ಸೀಟುಗಳು, ಫ್ರೇಮ್‌ಲೆಸ್ ಫ್ರಂಟ್ ವೈಪರ್‌ಗಳು ಮತ್ತು ರೂಫ್ ರೈಲ್‌ಗಳು, ಇತರ ಬಿಟ್‌ಗಳೊಂದಿಗೆ ಬರುತ್ತದೆ.

ಈ ಹೊಸ ಕಾರಿನಲ್ಲಿ ಪ್ರತಿಯೊಂದು ರೂಪಾಂತರವು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆಯುತ್ತದ. ಈ ಕಾರಿನ ಪ್ರೀಮಿಯಂ ರೂಪಾಂತರ 55.4kWh ಬ್ಯಾಟರಿ ಪ್ಯಾಕ್ 420 ಕಿ.ಮೀ ರೇಂಜ್ ಅನ್ನು ನೀಡಿದರೆ, ಸುಪೀರಿಯರ್ ಮಾದರಿಯು 71.8kWh ಬ್ಯಾಟರಿ ಪ್ಯಾಕ್ 530 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಪ್ರೀಮಿಯಂ ಟ್ರಿಮ್ 163hp ಪವರ್ ಅನ್ನು ಉತ್ಪಾದಿಸಿದರೆ. ಸುಪೀರಿಯರ್ ಮಾದರಿಯು 204hp ಪವರ್ ಉತ್ಪಾದಿಸುತ್ತದೆ. ಎರಡೂ ರೂಪಾಂತರಗಳು 310Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








