ಬಿವೈಡಿ eMax 7 vs ಮಾರುತಿ ಇನ್ವಿಕ್ಟೊ: ನಂ.1 ಕಂಪನಿಯ ಎದೆನಡುಗಿಸಿದ ಚೀನಾದ ಹೊಸ ಕಾರು!
ವಿಶ್ವದಾದ್ಯಂತ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಚೀನಾ ಮೂಲದ ಬಿವೈಡಿ (BYD) ಗುರುತಿಸಿಕೊಂಡಿದೆ. ಬಿವೈಡಿ ಕಂಪನಿಯು ತನ್ನ ಹೊಸ ಬಿವೈಡಿ ಇಮ್ಯಾಕ್ಸ್ 7 (BYD eMax 7) ಎಂಪಿವಿ ಕಾರನ್ನು ಬಿಡುಗಡೆಗೊಳಿಸಲಾಗಿದೆ. ಇದು ಪೆಟ್ರೋಲ್-ಹೈಬ್ರಿಡ್ ಇಂಜಿನ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಬರುತ್ತದೆ. ಇದು ದೇಶದ ಏಕೈಕ ಎಲೆಕ್ಟ್ರಿಕ್ ಎಂಪಿವಿಯಾಗಿರುವ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಯಾವುದೇ ಸ್ಪರ್ಧೆಯನ್ನು ಹೊಂದಿಲ್ಲದಿದ್ದರೂ, ಇದು ಮಾರುತಿ ಸುಜುಕಿ ಇನ್ವಿಕ್ಟೊದಂತಹ ಹೈಬ್ರಿಡ್ ವಿಭಾಗದಲ್ಲಿ ಎಂಪಿವಿಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಬಿವೈಡಿ ಇಮ್ಯಾಕ್ಸ್ 7 ಮತ್ತು ಮಾರುತಿ ಇನ್ವಿಕ್ಟೊ ಮಾದರಿಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.
ಪವರ್‌ಟ್ರೇನ್: ಈ ಕಾರಿನಲ್ಲಿ ಪ್ರತಿಯೊಂದು ರೂಪಾಂತರವು ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆಯುತ್ತದ. ಈ ಕಾರಿನ ಪ್ರೀಮಿಯಂ ರೂಪಾಂತರ 55.4kWh ಬ್ಯಾಟರಿ ಪ್ಯಾಕ್ 420 ಕಿ.ಮೀ ರೇಂಜ್ ಅನ್ನು ನೀಡಿದರೆ, ಸುಪೀರಿಯರ್ ಮಾದರಿಯು 71.8kWh ಬ್ಯಾಟರಿ ಪ್ಯಾಕ್ 530 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಪ್ರೀಮಿಯಂ ಟ್ರಿಮ್ 163hp ಪವರ್ ಅನ್ನು ಉತ್ಪಾದಿಸಿದರೆ. ಸುಪೀರಿಯರ್ ಮಾದರಿಯು 204hp ಪವರ್ ಉತ್ಪಾದಿಸುತ್ತದೆ. ಎರಡೂ ರೂಪಾಂತರಗಳು 310Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿನ್: ಮಾರುತಿ ಸುಜುಕಿ ಇನ್ವಿಕ್ಟೋ, 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 186 PS ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇ-ಸಿವಿಟಿ (e-CVT) ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿದಾರರಿಗೆ ದೊರೆಯುತ್ತದೆ. ಮೈಲೇಜ್ ವಿಚಾರವಾಗಿ ಹೇಳುವುದಾದರೆ, 23.24 kmpl ಮೈಲೇಜ್ ಅನ್ನು ನೀಡುತ್ತದೆ.
ಫೀಚರ್ಸ್: ಈ ಬಿವೈಡಿ ಇಮ್ಯಾಕ್ಸ್ 7 ಕಾರಿನಲ್ಲಿ 12.8-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್, e6 ನಲ್ಲಿ 10.1-ಇಂಚಿನ ದೊಡ್ಡ ಅಪ್‌ಡೇಟ್ ಆಗಿದೆ. ಇನ್ನು ಈ ಕಾರಿನಲ್ಲಿ ಸೆಂಟರ್ ಕನ್ಸೋಲ್ ಅನ್ನು ಸ್ವಲ್ಪಮಟ್ಟಿಗೆ ಪರಿಷ್ಕರಿಸಲಾಗಿದೆ ಮತ್ತು ಎರಡು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳು, ಕೆಲವು ಹೊಸ ಸ್ವಿಚ್‌ಗಿಯರ್ ಮತ್ತು ಹೊಸ ಡ್ರೈವ್ ಸೆಲೆಕ್ಟರ್ ಲಿವರ್ ಅನ್ನು ಒಳಗೊಂಡಿದೆ.

ಸುರಕ್ಷತಾ ಫಿಚರ್ಸ್: ಸುರಕ್ಷತೆಯ ವಿಚಾರದಲ್ಲಿ ಮಾರುತಿ ಸುಜುಕಿ ಇನ್ವಿಕ್ಟೋಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಎಂಪಿವಿ 6 ಏರ್‌ಬ್ಯಾಗ್, ಸೀಟ್‌ಬೆಲ್ಟ್ ರಿಮೈಂಡರ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 - ಡಿಗ್ರಿ ಕ್ಯಾಮೆರಾ, ಫ್ರಂಟ್ & ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.
ಬಿವೈಡಿ ಇಮ್ಯಾಕ್ಸ್ 7 ಕಾರಿನಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾ ಎರಡೂ ಟ್ರಿಮ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಈ ಕಾರಿನಲ್ಲಿ ಕ್ವಾರ್ಟ್ಜ್ ಬ್ಲೂ, ಹಾರ್ಬರ್ ಗ್ರೇ, ಕ್ರಿಸ್ಟಲ್ ವೈಟ್ ಮತ್ತು ಕಾಸ್ಮೊಸ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.
ಇನ್ನು ಬಿವೈಡಿ ಇಮ್ಯಾಕ್ಸ್ 7 ಎಂಪಿವಿ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಿದೆ. ಖರಿದಿಸಲು ಬಯಸುವ ಆಸಕ್ತ ಗ್ರಾಹಕರು ಸಮೀಪದ ಡೀಲರ್‌ಶಿಪ್ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.51,000 ಹಣವನ್ನು ಮುಂಗಡವಾಗಿ ಪಾವತಿಸುವ ಮೂಲಕ ಕಾಯ್ದಿರಿಸಬಹುದು. ಈ ನೂತನ ಬಿವೈಡಿ ಇಮ್ಯಾಕ್ಸ್ 7 ಎಂಪಿವಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಹಲವು ಹಣಕಾಸಿನ ಪ್ರಯೋಜನಗಳನ್ನು ಕಂಪನಿ ಘೋಷಣೆ ಮಾಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications