ಚೀನಾದ ಕಾರೆಂದು ಚಿಂತಿಸಬೇಡಿ: ಕಡಿಮೆ ಬೆಲೆಗೆ ಬರಲಿವೆ ವಿಮಾನದಂತೆ ಸೌಕರ್ಯವಿರುವ ಕಾರುಗಳು!

ಜನಪ್ರಿಯ ಬಿವೈಡಿ (BYD) ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಗ್ರಾಹಕರ ಸ್ಪಂದನೆಗೆ ತಕ್ಕಂತೆ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಹೊಸ ಶೋರೂಂಗಳನ್ನು ತೆರೆಯುತ್ತಿದೆ. ಬಿವೈಡಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ತನ್ನ ಎಲೆಕ್ಟ್ರಿಕ್ ವಾಹನಗಳ ಯಶಸ್ಸನ್ನು ಕಂಡುಕೊಂಡ ನಂತರ ಬಿವೈಡಿ ಇಂಡಿಯಾ ಕಂಪನಿಯು ತನ್ನ ಹೊಸ ಕಾರುಗಳಿಗೆ ಪೇಟೆಂಟ್‌ಗಳನ್ನು ಸಲ್ಲಿಸಿದೆ. ಬಿವೈಡಿ ಕಂಪನಿಯು ಭಾರತದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲು ಸಜ್ಜಾಗುತ್ತಿದೆ.

ಬಿವೈಡಿ ಇಂಡಿಯಾ ಕಂಪನಿಯು ಬಾವೊ 3 ಮತ್ತು ಬಾವೊ 9 ಹೊಸ ಕಾರುಗಳಿಗೆ ಪೇಟೆಂಟ್‌ಗಳನ್ನು ಸಲ್ಲಿಸಿದೆ. ಬಾವೊ 3 ಒಂದು ಆಫ್-ರೋಡ್ ಎಲೆಕ್ಟ್ರಿಕ್ ವಾಹನವಾಗಿದ್ದು ಅದು ಸೂಪರ್ 3 ಕಾನ್ಸೆಪ್ಟ್ ಕಾರಿನ ಉತ್ಪಾದನಾ ಆವೃತ್ತಿಯಾಗಿದೆ. ಪೇಟೆಂಟ್ ಸಲ್ಲಿಸುವುದರಿಂದ ತಯಾರಕರು ವಾಹನವನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಅರ್ಥವಿಲ್ಲ. ಕೆಲವೊಮ್ಮೆ ಕಾರುಗಳ ವಿನ್ಯಾಸವನ್ನು ರಕ್ಷಿಸಲು ಪೇಟೆಂಟ್‌ಗಳನ್ನು ಸಲ್ಲಿಸಲಾಗುತ್ತದೆ.

BYD

ಬಾವೊ 3 ಒಂದು ಆಫ್-ರೋಡ್ ಎಲೆಕ್ಟ್ರಿಕ್ ಎಸ್‍ಯುವಿಯಾಗಿದ್ದು, ಇದು ಬಿವೈಡಿಯ ಅಂಗಸಂಸ್ಥೆಯಾದ ಫಾಂಗ್ ಚೆಂಗ್ ಬಾವೊ ಬ್ರಾಂಡ್‌ನ ಅಡಿಯಲ್ಲಿದೆ. ಫಾಂಗ್ ಚೆಂಗ್ ಬಾವೊ ಸಾಮಾನ್ಯವಾಗಿ ಆಫ್-ರೋಡರ್‌ಗಳು ಮತ್ತು ಪರ್ಫಾಮೆನ್ಸ್ ಕಾರುಗಳಂತಹ ವಾಹನಗಳನ್ನು ಮಾರಾಟ ಮಾಡುತ್ತಾರೆ. ಈ ಬ್ರ್ಯಾಂಡ್ ಆಫ್-ರೋಡ್ ವಾಹನಗಳಿಗೆ ಭಾರೀ ಜನಪ್ರಿಯತೆಯನ್ನು ಗಳಿಸಿದೆ.

ಬಾವೊ 3 ಬಾಕ್ಸ್ ಪ್ರೊಫೈಲ್ ಅನ್ನು ಹೊಂದಿದೆ ಆದ್ದರಿಂದ ಓವರ್‌ಹ್ಯಾಂಗ್‌ಗಳು ಚಿಕ್ಕದಾಗಿರುತ್ತವೆ. ಏರ್ ಡಾಂ ಹರಿವನ್ನು ಅತ್ಯುತ್ತಮವಾಗಿಸಲು ಡೋರ್ ಹ್ಯಾಂಡಲ್‌ಗಳು ಬಾಡಿವರ್ಕ್‌ನೊಂದಿಗೆ ಫ್ಲಶ್ ಆಗಿರುತ್ತವೆ. ಆಯಾಮಗಳಿಗೆ ಸಂಬಂಧಿಸಿದಂತೆ, ಬಾವೊ 3 ಎಲೆಕ್ಟ್ರಿಕ್ ಎಸ್‍ಯುವಿಯು 4,605 ಎಂಎಂ ಉದ್ದ, 1,900 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರವನ್ನು ಹೊಂದಿದೆ.

BYD

ಇನ್ನು ಬಾವೊ 3 ಡ್ಯುಯಲ್ ಎಲೆಕ್ಟ್ರಿಕ್ ಮೋಟರ್‌ಗಳಿಂದ ಚಾಲಿತ ಫ್ಹೋಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಎಸ್‍ಯುವಿಯ ಮುಂಭಾಗದ ಮೋಟಾರ್ 150 ಪಿಎಸ್ ನೀಡುತ್ತದೆ ಮತ್ತು ಹಿಂದಿನ ಮೋಟಾರ್ 300 ಪಿಎಸ್ ಉತ್ಪಾದಿಸುತ್ತದೆ. ಇದು ಬಿವೈಡಿಯ ಅತ್ಯಾಧುನಿಕ ಬ್ಲೇಡ್ ಬ್ಯಾಟರಿ ಪ್ಯಾಕ್‌ಗಳನ್ನು ಸಹ ಹೊಂದಿದೆ.

ಬಾವೊ 9 ಎಲೆಕ್ಟ್ರಿಕ್ ಕಾರು ವೋಲ್ಫ್‌ಗ್ಯಾಂಗ್ ಎಗರ್ಟ್ ವಿನ್ಯಾಸವನ್ನು ಹೊಂದಿದೆ. ಇವರು ಆಡಿ ಮತ್ತು ಲ್ಯಾಂಬೋರ್ಗಿನಿ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ವಿನ್ಯಾಸವು ಲ್ಯಾಂಬೋರ್ಗಿನಿ ಅವೆಂಟಡಾರ್ J ನಂತಿದೆ. ಈ ಬಾವೊ 9 ಎಲೆಕ್ಟ್ರಿಕ್ ಕಾರು ಡ್ಯುಯಲ್ ಟೈಲ್ ಲ್ಯಾಂಪ್‌ಗಳು ಮತ್ತು ಹಿಂಭಾಗದ ಸ್ಪಾಯ್ಲರ್‌ನೊಂದಿಗೆ ನಯವಾದ ಪ್ರೊಫೈಲ್‌ನೊಂದಿಗೆ ಬರುತ್ತದೆ.

BYD

ಇನ್ನು ಈ ಎಲೆಕ್ಟ್ರಿಕ್ ಕಾರು ಪ್ರಯಾಣಿಕರಿಗೆ ಕಾರ್ಬನ್ ಫೈಬರ್‌ನಿಂದ ಮಾಡಲಾದ ಎರಡು ಸೀಟುಗಳ ಮಾತ್ರ ಇವೆ. ಕಾರ್ಬನ್ ಫೈಬರ್ ತೂಕವನ್ನು ಕಡಿಮೆ ಮಾಡುವಾಗ ಬಿಗಿತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡ್ಯಾಶ್ ಬೋರ್ಡ್ ವಿಮಾನಗಳಿಂದ ಪ್ರೇರಿತವಾಗಿದೆ ಆದ್ದರಿಂದ ಸೆಂಟರ್ ಕನ್ಸೋಲ್, ಸ್ಟೀರಿಂಗ್ ವೀಲ್ ಮತ್ತು ಬಟನ್‌ಗಳಿರುತ್ತದೆ. ಸದ್ಯಕ್ಕೆ, ಬಾವೊ 9 ಬಿಡುಗಡೆಯ ಬಗ್ಗೆ ಮಾಹಿತಿ ಬಹಿರಂಗಪಡಿಸಲಾಗಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, December 6, 2024, 14:04 [IST]
English summary
Byd files patents for bao 3 and bao 9 in india details
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+