ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಚೀನಾ ಕಂಪನಿ ತಯಾರಿ: ಬರಲಿದೆ ಹೊಸ ಅದ್ಭುತ ಕಾರು!

ಹುಂಡೈ ಕ್ರೆಟಾ ಭಾರತೀಯರ ನೆಚ್ಚಿನ ಕಾರು ಮಾದರಿಗಳಲ್ಲಿ ಒಂದಾಗಿದೆ. ಅತಿ ಶ್ರೀಮಂತರ ಮನೆಯಲ್ಲೂ ಈ ಕಾರನ್ನು ನಾವು ನೋಡಬಹುದು. ಹತ್ತು ಐಷಾರಾಮಿ ಕಾರುಗಳನ್ನು ಹೊಂದಿರುವವರು ಸಹ ಸಾಮಾನ್ಯ ಬಳಕೆಗಾಗಿ ಈ ಕಾರು ಒಂದು ಯುನಿಟ್ ಅನ್ನು ಖರೀದಿಸುತ್ತಾರೆ. ಆದ್ದರಿಂದಲೇ ಅನೇಕರ ನೆಚ್ಚಿನ ಕಾರು ಕ್ರೆಟಾ. ಚೀನಾದ ಜನಪ್ರಿಯ ಕಂಪನಿಯೊಂದು ಬಹುಬೇಡಿಕೆಯ ಕ್ರೆಟಾ ಎಸ್‍ಯುವಿಗೆ ಪೈಪೋಟಿ ನೀಡಬಲ್ಲ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಗಳಿವೆ. ಚೀನಾದ ಜನಪ್ರಿಯ ಕಂಪನಿ ಬಿವೈಡಿ (BYD) ಎಲೆಕ್ಟ್ರಿಕ್ ಕ್ರೆಟಾಗೆ ಪ್ರತಿಸ್ಪರ್ಧಿ ಮಾದರಿಯನ್ನು ಪ್ರಾರಂಭಿಸಲಿದೆ.

ಇನ್ನು ಜಾಗತಿಕವಾಗಿ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ (Tesla) ಕಂಪನಿ ಕಾರುಗಳಿಗೆ ಚೀನಾ ಮೂಲದ ಬಿವೈಡಿ (BYD) ಮಾರಾಟಗೊಳಿಸುವ ಎಲೆಕ್ಟ್ರಿಕ್ ಕಾರುಗಳು ಪ್ರಬಲವಾದ ಸ್ಪರ್ಧೆಯೊಡ್ಡುತ್ತಿವೆ. ಭಾರತದ ವಾಹನ ಮಾರುಕಟ್ಟೆಯಲ್ಲಿಯೂ ಬಿವೈಡಿ ಕಂಪನಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ.

BYD

ಹ್ಯುಂಡೈ ಶೀಘ್ರದಲ್ಲೇ ಕ್ರೆಟಾ ಆಧಾರಿತ ಎಲೆಕ್ಟ್ರಿಕ್ ಕಾರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಆದ್ದರಿಂದ ಬಿವೈಡಿಯ ಈ ಹೊಸಬರು ಕ್ರೆಟಾದ ಎರಡೂ ರೂಪಾಂತರಗಳೊಂದಿಗೆ (ECE ಮತ್ತು ಎಲೆಕ್ಟ್ರಿಕ್) ಸ್ಪರ್ಧಿಸುವ ನಿರೀಕ್ಷೆಯಿದೆ. ಇದು ಭಾರತದ ಬಿ-ಸೆಗ್ಮೆಂಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಅಂದರೆ ಹೆಸರಿಸದ ಎಲೆಕ್ಟ್ರಿಕ್ ಮಿಡ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಲಭ್ಯವಿರುತ್ತದೆ.

ಈ ವಿಭಾಗದಲ್ಲಿ ಮಾರಾಟವಾಗುವ ವಾಹನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಬೇಡಿಕೆಯನ್ನು ಪರಿಗಣಿಸಿ, ಹೋಂಡಾ ಮತ್ತು ಮಾರುತಿ ಸುಜುಕಿ ತಮ್ಮ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಿದ್ಧಪಡಿಸುತ್ತಿವೆ. ಈ ಎರಡೂ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಕಾರನ್ನು BYD ಕಂಪನಿಗಿಂತ ಮೊದಲೇ ಮಾರಾಟಕ್ಕೆ ಬಿಡುಗಡೆ ಮಾಡಲಿದ್ದಾರೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಅತ್ಯಂತ ಸವಾಲಿನ ಬೆಲೆಗೆ ಮಾರಾಟವಾಗಲಿದೆ ಎಂಬ ವರದಿಗಳಿವೆ.

ರೂ. 20 ಲಕ್ಷಕ್ಕಿಂತ ಕಡಿಮೆ ಬೆಲೆ ಇರಲಿದೆ ಎನ್ನಲಾಗಿದೆ. ಆದರೆ, ಬೆಲೆ ಇನ್ನೂ ಖಚಿತವಾಗಿಲ್ಲ 2025ರ ಮೊದಲಾರ್ಧದಲ್ಲಿ ಬಿವೈಡಿ ಕಂಪನಿಯು ಹೊಸ ಎಸ್‍ಯುವಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದೆ ಬಿಡುಗಡೆಯಾಗಲಿರುವ ಹ್ಯುಂಡೈ ಕ್ರೆಟಾ ಇವಿ ಮತ್ತು ಮಾರುತಿ EVX ಗೆ ದೊಡ್ಡ ಪ್ರತಿಸ್ಪರ್ಧಿಯಾಗಲಿದೆ.

ಮುಂದಿನ ವರ್ಷ ಜನವರಿಯಲ್ಲಿ ಮುಂಬರುವ ಭಾರತ್ ಮೊಬಿಲಿಟಿ ಶೋನಲ್ಲಿ BYD ತನ್ನ ಹೆಸರಿಸದ ಹೊಸಬರನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಿವೈಡಿಯ ಎಲೆಕ್ಟ್ರಿಕ್ ಪ್ರವೇಶವು ಹ್ಯುಂಡೈ ಮಾತ್ರವಲ್ಲದೆ ಎಲೆಕ್ಟ್ರಿಕ್ ನಾಲ್ಕು ಚಕ್ರಗಳ ಜಗತ್ತಿನಲ್ಲಿ ಪ್ರಸ್ತುತ ಮುಂಚೂಣಿಯಲ್ಲಿರುವ ಟಾಟಾ ಕೂಡ ಆಗಿದೆ. ಇಂದಿನವರೆಗೆ, BYD ಅಡಿಯಲ್ಲಿ ಕೇವಲ ಮೂರು ಎಲೆಕ್ಟ್ರಿಕ್ ಕಾರು ಮಾದರಿಗಳು ಮಾರಾಟದಲ್ಲಿವೆ.

ಇನ್ನು ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಕ್ರಿಸ್ಟಾ ಎಂಪಿವಿಗಳಿಗೆ ಎದುರಾಳಿಯಾಗಿ ಹೊಚ್ಚ ಹೊಸ ಎಲೆಕ್ಟ್ರಿಕ್ ಫ್ಯಾಮಿಲಿ ಕಾರನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಬಿವೈಡಿ ಇಂಡಿಯಾ (BYD India) ನೂತನ ಇಮ್ಯಾಕ್ಸ್ 7 (eMAX 7) ಎಂಪಿವಿ ಬಿಡುಗಡೆಗೊಳಿಸಲು ಅಧಿಕೃತವಾಗಿ ದಿನಾಂಕ ನಿಗದಿಪಡಿಸಿದೆ. ಈ ಕಾರು ಅಕ್ಟೋಬರ್ 8ರಂದು ಮಾರಾಟಕ್ಕೆ ಬರಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೊಸ ಎಂಪಿವಿಯನ್ನು ಕಂಪನಿಯು ಇ6 (e6) ಫ್ಯಾಮಿಲಿ ಕಾರಿನ ಜಾಗಕ್ಕೆ ತರುತ್ತಿದೆ,

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, September 20, 2024, 11:49 [IST]
English summary
Byd india plans to launch new electric suv rival creta ev
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+