100 ಕಿ.ಮೀ ಓಡಲು 3-ಲೀ. ಇಂಧನ ಸಾಕು! ಅಗ್ಗದ ಹೈಬ್ರಿಡ್ ಕಾರುಗಳನ್ನು ಪರಿಚಯಿಸಿದ BYD
ಆಟೋ ಉದ್ಯಮದಲ್ಲಿ ವಾಹನ ತಯಾರಕರ ನಡುವೆ ತೀವ್ರ ಪೈಪೋಟಿ ಹೆಚ್ಚಾಗಿದೆ. ಭವಿಷ್ಯವೇ ಎಲೆಕ್ಟ್ರಿಕ್ ಕಾರುಗಳೆಂದು ಕೆಲ ತಯಾರಕರು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿದ್ದರೇ, ಇತ್ತ ಇಂಧನ ಚಾಲಿತ ಕಾರುಗಳೊಂದಿಗೆ ಹೈಬ್ರಿಡ್ ಟೆಕ್ನಾಲಜಿಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ಇನ್ನೂ ಕೆಲವು ಕಂಪನಿಗಳು ಹೇಳುತ್ತಿವೆ. ಮತ್ತೊಂದೆಡೆ ಕೇವಲ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಮಾತ್ರ ಮುನ್ನುಗ್ಗುತ್ತಿದ್ದ ಚೀನಾ ಮೂಲದ ಎಲೆಕ್ಟ್ರಿಕ್ ಕಾರು ತಯರಕರಾದ 'ಬಿವೈಡಿ', ಇದೀಗ ಹೊಸ ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಈ ಕಾರುಗಳು 100 ಕಿ.ಮೀ ಓಡಲು ಕೇವಲ 2.9ಲೀ. ಇಂಧನ ಸಾಕು ಎಂದು ಭರವಸೆ ನೀಡಿದ್ದಾರೆ.
BYD ಕಂಪನಿಯು, ಕಳೆದ ಮಂಗಳವಾರ ಸಂಜೆ ಚೀನಾದಲ್ಲಿ ಈ ಕುರಿತ ಈವೆಂಟ್ ಒಂದನ್ನು ಆಯೋಜಿಸಿ ಹೈಬ್ರಿಡ್ ವಾಹನಗಳ ಬಗ್ಗೆ ವಿವರಿಸದೆ. ಹೊಸ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಎರಡು ಕಾರುಗಳನ್ನು 100,000 ಯುವಾನ್ ($ 13,800) ಕ್ಕಿಂತ ಕಡಿಮೆ ಬೆಲೆಯಲ್ಲಿ ತಕ್ಷಣವೇ ಬಿಡುಗಡೆ ಮಾಡಲಾಗುವುದು, ಇವು ಡ್ಯುಯಲ್-ಮೋಡ್ ಪ್ಲಗ್-ಇನ್ ಎಲೆಕ್ಟ್ರಿಕ್ ಹೈಬ್ರಿಡ್ ಕಾರುಗಳಾಗಿವೆ ಎಂದು ಹೇಳಿದೆ.

ಇದೇ ಈವೆಂಟ್ನಲ್ಲಿ BYD Co. ಕಾರುಗಳು ಒಳಗೊಂಡಿರುವ ಹೊಸ ಹೈಬ್ರಿಡ್ ಪವರ್ಟ್ರೇನ್ ಅನ್ನು ಸಹ ಅನಾವರಣಗೊಳಿಸಿತು, ಒಂದೇ ಚಾರ್ಜ್ ಮತ್ತು ಪೂರ್ಣ ಟ್ಯಾಂಕ್ ಇಂಧನದೊಂದಿಗೆ ನ್ಯೂಯಾರ್ಕ್-ಮಿಯಾಮಿ, ಮ್ಯೂನಿಚ್-ಮ್ಯಾಡ್ರಿಡ್ ಅಥವಾ ಬೀಜಿಂಗ್-ಗುವಾಂಗ್ಝೌಗೆ ಯಾವುದೇ ಅಡೆತಡೆಯಿಲ್ಲದೆ ಚಲಿಸಬಲ್ಲವು. ಈ ಪ್ರದೇಶಗಳ ನಡುವೆ ಸುಮಾರು 2,000 ಕಿ.ಮೀ ಅಂತರವಿದ್ದು, ಇಷ್ಟು ದೂರ ಪ್ರಯಾಣಿಸಲು ಒಮ್ಮೆ ಇಂಧನ ತುಂಬಿಕೊಂಡು ಚಾರ್ಜ್ ಮಾಡಿದರೆ ಸಾಕು ಎಂದು ಹೇಳಿದೆ.
ಈವೆಂಟ್ ಸಮಯದಲ್ಲಿ, BYD ತನ್ನ ಪ್ಲಗ್ - ಇನ್ ಹೈಬ್ರಿಡ್ ಪರೀಕ್ಷೆಗಳಲ್ಲಿ 2,500 ಕಿಲೋಮೀಟರ್ ದೂರವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದೆ. ಸದ್ಯಕ್ಕೆ, ಮೇಡ್ - ಇನ್ - ಚೀನಾ ಕಾರುಗಳಿಗೆ ನವೀಕರಣಗಳನ್ನು ಉದ್ದೇಶಿಸಲಾಗಿದ್ದು, ಎಲ್ಲವೂ ಅಂದುಕೊಂಡಂತಾದರೆ ಶೀಘ್ರದಲ್ಲೇ ರಫ್ತು ಮಾಡುವ ಸಾಧ್ಯತೆಯಿದೆ.

ದೀರ್ಘ ಶ್ರೇಣಿಯ ಸಾಮರ್ಥ್ಯಗಳೊಂದಿಗೆ ಬರುವ ಮೊದಲ ಎರಡು ವಾಹನಗಳಾದ ಕ್ವಿನ್ ಎಲ್ ಮತ್ತು ಸೀಲ್ 06 ಮಧ್ಯಮ ಗಾತ್ರದ ಸೆಡಾನ್ಗಳಾಗಿವೆ. ಈ ಎರಡನ್ನೂ ಕಳೆದ ಏಪ್ರಿಲ್ನಲ್ಲಿ ಬೀಜಿಂಗ್ ಆಟೋ ಶೋನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇದೀಗ ಉತ್ಪಾದನೆ ಮಾಡುವ ಹಂತಕ್ಕೆ ತಂದಿದ್ದು, ಶೀಘ್ರದಲ್ಲೇ ಆಟೋ ವಲಯದಲ್ಲಿ ಹೊಸ ಅಲೆ ಎಬ್ಬಿಸಲು ಸಜ್ಜಾಗಿವೆ.
ತೀವ್ರ ಪೈಪೋಟಿ: ಬಿವೈಡಿನ ಈ ಹೊಸ ತಂತ್ರಜ್ಞಾನದ ಅಲೆಯು ಟೊಯೋಟಾ ಮೋಟಾರ್ ಕಾರ್ಪೊರೇಷನ್ ಮತ್ತು ವೋಕ್ಸ್ವ್ಯಾಗನ್ AG ವಿರುದ್ಧ EV ಪರಿವರ್ತನೆಯ ಯುದ್ಧವನ್ನು ತೀವ್ರಗೊಳಿಸಲಿದೆ. ಅಲ್ಲದೇ ಚೀನಾ ವಾಹನ ಮಾರುಕಟ್ಟೆಯಲ್ಲಿ ಬಿವೈಡಿ ವ್ಯಾಪಕವಾದ ಬೆಲೆ ಕಡಿತದೊಂದಿಗೆ ಕಾರುಗಳನ್ನು ಅಗ್ಗವಾಗಿ ಅಲ್ಟ್ರಾ-ಲಾಂಗ್ ಹೈಬ್ರಿಡ್ಗಳನ್ನು ನೀಡುವ ಮೂಲಕ ಬೆಲೆ ಯುದ್ಧವನ್ನು ಮತ್ತಷ್ಟು ಪ್ರಚೋದಿಸಬಹುದು.
ಇದು ಹೀಗಿದ್ದರೇ ಟೊಯೊಟಾ ಕಳೆದ ಮಂಗಳವಾರ ಹೊಸ ತಲೆಮಾರಿನ ಇಂಧನ ಚಾಲಿತ ಎಂಜಿನ್ಗಳ ಮೂಲಮಾದರಿಗಳನ್ನು ಅನಾವರಣಗೊಳಿಸಿತು. ಅವು ಬ್ಯಾಟರಿಗಳ ಜೊತೆಗೆ ಹೈಡ್ರೋಜನ್ ಹಾಗೂ ಅಥವಾ ಇತರ ಇಂಧನಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಒಟ್ಟಾರೆ ದೈತ್ಯ ಕಂಪನಿಗಳ ಈ ಆವಿಷ್ಕಾರಗಳು ಸಾಮಾನ್ಯರಿಗೆ ಅಗ್ಗದ ಬೆಲೆಯಲ್ಲಿ ಹೊಸ ಕಾರಗಳನ್ನು ನೀಡುವಲ್ಲಿ ಸಹಕಾರಿಯಾಗಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








