530 ಕಿ.ಮೀ ರೇಂಜ್, 7 ಜನ ಪ್ರಯಾಣಿಸಬಹುದು: ಬಿವೈಡಿ M6 ಬೆಸ್ಟ್ ಫ್ಯಾಮಿಲಿ ಕಾರ್ ಆಗುತ್ತಾ?

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಬಿವೈಡಿ ಇಂಡಿಯಾ (BYD India) ತನ್ನ್ ಹೊಸ M6 ಎಲೆಕ್ಟ್ರಿಕ್ ಎಂಪಿವಿಗಾಗಿ ಟೀಸರ್ ಬಿಡುಗಡೆಗೊಳಿಸಿದೆ. ಬಿವೈಡಿ M6 (BYD M6) ಮಾದರಿಗೆ ಹೊಸ ಹೆಸರಿನೊಂದಿಗೆ ಜಾಗತಿಕವಾಗಿ e6 ಫೇಸ್‌ಲಿಫ್ಟ್ ಆಗಿದೆ. M6 ಕಾರು ಈ ವರ್ಷ ಜುಲೈನಲ್ಲಿ GAIKINDO ಇಂಡೋನೇಷ್ಯಾ ಇಂಟರ್ನ್ಯಾಷನಲ್ ಆಟೋ ಶೋನಲ್ಲಿ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿತು. ಈ ಹೊಸ ಬಿವೈಡಿ M6 ಕಾರು ಭಾರತೀಯ ಮಾರುಕಟ್ಟೆಗೆಯನ್ನು ಪ್ರವೇಶಿಸಲಿದೆ. 2021ರಲ್ಲಿ e6 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಿವೈಡಿಯ ಮೊದಲ ಪ್ರಯಾಣಿಕ ವಾಹನವಾಗಿದೆ.

ಇದನ್ನು ಆರಂಭದಲ್ಲಿ ವಾಣಿಜ್ಯ ವಾಹನ ನಿರ್ವಾಹಕರಿಗೆ ಮಾತ್ರ ನೀಡಲಾಗಿದ್ದರೂ, ಖಾಸಗಿ ಖರೀದಿದಾರರಿಗೆ ಮಾರಾಟವು 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭವಾಯಿತು. e6 ಅನ್ನು ಬದಲಾಯಿಸಿ M6 ಎಲೆಕ್ಟ್ರಿಕ್ ಎಂಪಿವಿಯನ್ನು ಹೆಚ್ಚಿನ ನವೀಕರಣಗಳನ್ನು ತರುತ್ತದೆ. ನವೀಕರಿಸಿದ ಬಿವೈಡಿ M6 ಎಲೆಕ್ಟ್ರಿಕ್ ಎಂಪಿವಿ ಪರಿಷ್ಕೃತ ಟ್ವಿನ್ LED ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ (DRLs) ಹೊಸ ಫುಲ್-LED ಹೆಡ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ.

BYD M6

ಇನ್ನು ಈ ಕಾರಿಗ ಮುಂಭಾಗದ ಬಂಪರ್ ಅನ್ನು ಹೊಸ ಏರ್-ವೆಂಟ್ ಸ್ಟೈಲಿಂಗ್ ಮತ್ತು ಕ್ರೋಮ್ ಅಸ್ಸೆಟ್ ಗಳೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಈ ಪ್ರೊಫೈಲ್ ಹೆಚ್ಚು ಬದಲಾಗದೆ ಉಳಿಯುತ್ತದೆ ಆದರೆ ಹಿಂಭಾಗವು ಹೊಸ ಸುತ್ತುವ ಟೈಲ್‌ಲೈಟ್‌ಗಳನ್ನು ಹೊಂದಿದೆ ಅದು ದಪ್ಪವಾಗಿ ಕಾಣುತ್ತದೆ ಮತ್ತು ಹೆಚ್ಚು ಎಲ್‌ಇಡಿ ವಿವರಗಳನ್ನು ಪಡೆಯುತ್ತದೆ. ಹಿಂದಿನ ಬಂಪರ್ ಅನ್ನು ಮುಂಭಾಗದಂತೆಯೇ ಹೊಸ ಕ್ರೋಮ್ ಅಸ್ಸೆಂಟ್ ಗಳೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಫೇಸ್‌ಲಿಫ್ಟ್ ಬಂದಾಗ ಹೊಸ ಅಲಾಯ್ ವ್ಹೀಲ್ ಗಳನ್ನು ಹೊಂದಿರಲಿವೆ.

ಹೊಸ ಬಿವೈಡಿ M6 ಕಾರಿನ 12.8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊರತುಪಡಿಸಿ ಹೊರಹೋಗುವ ಮಾದರಿಯ ವಿನ್ಯಾಸವನ್ನು ಕ್ಯಾಬಿನ್ ಉಳಿಸಿಕೊಂಡಿದೆ. ಇನ್ನು ಈ ಕಾರಿನಲ್ಲಿ 10.1-ಇಂಚಿನ ಯುನಿಟ್ ಅನ್ನು ಬದಲಾಯಿಸುತ್ತದೆ, ಆದರೆ ಕಾಸ್ಮೆಟಿಕ್ ಬದಲಾವಣೆಗಳು ಎರಡು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳು, ಹೊಸ ಸ್ವಿಚ್‌ಗಿಯರ್ ಮತ್ತು ಹೊಸ ಡ್ರೈವ್ ಸೆಲೆಕ್ಟರ್ ಅನ್ನು ಒಳಗೊಂಡಿವೆ.

BYD M6

ಇದರೊಂದಿಗೆ ಇನ್ಸ್ ಟ್ರೂಮೆಂಟ್ ಕನ್ಸೋಲ್‌ಗಾಗಿ ಅನಲಾಗ್ ಡಯಲ್‌ಗಳೊಂದಿಗೆ ಹೊಸ ಸ್ಟೀರಿಂಗ್ ವ್ಹೀಲ್ ಅನ್ನು ಹೊಂದಿದೆ. ಇತರ ವೈಶಿಷ್ಟ್ಯಗಳೆಂದರೆ ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾಗಳು, ಕ್ರೂಸ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕಲ್ ಆಪರೇಬಲ್ ಟೈಲ್‌ಗೇಟ್ ಆನ್ನು ಹೊಂದಿದೆ.

ಕ್ಯಾಬಿನ್ ವಿನ್ಯಾಸವು ಬಹುತೇಕ ಒಂದೇ ಆಗಿರುತ್ತದೆ ಆದರೆ ಹೊಸ ಸ್ಟೀರಿಂಗ್ ವೀಲ್ ಮತ್ತು ದೊಡ್ಡ ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಪ್ರಸ್ತುತ BYD e6 ಅನ್ನು ಭಾರತದಲ್ಲಿ ಐದು ಸೀಟುಗಳಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತದೆ ಆದರೆ ಹೊಸ M6 ಅನ್ನು ಆರು ಅಥವಾ ಏಳು ಸೀಟುಗಳ ಸಂರಚನೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬಿವೈಡಿ ಇಂಡಿಯಾ ಈ ಬಾರಿ ಎಲೆಕ್ಟ್ರಿಕ್ ಎಂಪಿವಿಯೊಂದಿಗೆ ಮಲ್ಟಿ-ಸೀಟರ್ ರೂಪಾಂತರಗಳನ್ನು ತರುತ್ತದೆಯೇ ಎಂದು ನೋಡಬೇಕಾಗಿದೆ.

BYD M6

ಹೊಸ ಬಿವೈಡಿ M6 ಕಾರಿನಲ್ಲಿ 55.4 kWh ಮತ್ತು 71.8 kWh ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಬರುತ್ತದೆ. ಇದು 420 ಕಿಮೀ ಮತ್ತು 530 ಕಿಮೀ ರೇಂಜ್ ಅನ್ನು ಹೊಂದಿದೆ. ಇನ್ನು ಣ್ಣ ಬ್ಯಾಟರಿಯಲ್ಲಿ 161 bhp ಮತ್ತು ದೊಡ್ಡ ಬ್ಯಾಟರಿ ಆಯ್ಕೆಯಲ್ಲಿ 201 bhp ಗೆ ಟ್ಯೂನ್ ಮಾಡಲಾದ ಏಕೈಕ ಎಲೆಕ್ಟ್ರಿಕ್ ಮೋಟಾರ್‌ನಿಂದ ಪವರ್ ಬರುತ್ತದೆ. ಗರಿಷ್ಠ ಟಾರ್ಕ್ 310 Nm ನಲ್ಲಿ ಒಂದೇ ಆಗಿರುತ್ತದೆ. 530 ಕಿ.ಮೀ ರೇಂಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, August 31, 2024, 17:35 [IST]
English summary
Byd m6 electric mpv teased ahead of launch
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+