BYD: ಭಾರತದಲ್ಲಿ ಒಂದೇ ದಿನ 200 ಸೀಲ್ ಕಾರುಗಳನ್ನು ವಿತರಿಸಿದ ಚೀನಾ ಮಾಲೀಕತ್ವದ ಬಿವೈಡಿ

ಭಾರತದಲ್ಲಿ ಚೀನಾ ಒಡೆತನದ 'ಬಿವೈಡಿ' ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಸದ್ಯ ಒಂದೇ ದಿನ 200 ಯುನಿಟ್ ಹೊಚ್ಚ ಹೊಸ 'ಸೀಲ್' ಸೆಡಾನ್‌ನ್ನು ವಿತರಿಸಿ, ಐತಿಹಾಸಿಕ ಸಾಧನೆಯನ್ನು ಮಾಡಿದೆ. ಈಚೆಗೆ ದೇಶಾದ್ಯಂತ ಈ ಕಾರಿನ ಬುಕ್ಕಿಂಗ್ ಶುರುವಾಗಿ 2 ತಿಂಗಳೊಳಗೆ 1,000ಕ್ಕೂ ಹೆಚ್ಚು ಗ್ರಾಹಕರು ಆರ್ಡರ್ ಮಾಡಿದ್ದರು.

ನವದೆಹಲಿ ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಕೊಚ್ಚಿಯಲ್ಲಿ ನಡೆದ 'ಮೆಗಾ ಡೆಲಿವರಿ' ಕಾರ್ಯಕ್ರಮದಲ್ಲಿ ನೂತನ ಬಿವೈಡಿ ಸೀಲ್ (BYD Seal) ಎಲೆಕ್ಟ್ರಿಕ್ ಸೆಡಾನ್‌ನ್ನು ವಿತರಿಸಲಾಯಿತು. ಗ್ರಾಹಕರು ಕೂಡ ಸಂಭ್ರಮದಿಂದ ಹೊಸ ಕಾರನ್ನು ಡೆಲಿವರಿ ಪಡೆದರು. ದೇಶೀಯ ಮಾರುಕಟ್ಟೆಯಲ್ಲಿ ಈ ಸೀಲ್ ಸೆಡಾನ್‌ ರೂ.41 ಲಕ್ಷದಿಂದ ರೂ.53 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

BYD Seal 200 Cars Delivery In Single Day India Price And Range Details

ನೂತನ ಬಿವೈಡಿ ಸೀಲ್ ಕಾರು ಆಕರ್ಷಕವಾದ ವಿನ್ಯಾಸವನ್ನು ಹೊಂದಿದ್ದು, ಡೈನಾಮಿಕ್ ರೇಂಜ್, ಪ್ರೀಮಿಯಂ ರೇಂಜ್ ಹಾಗೂ ಪರ್ಫಾರ್ಮೆನ್ಸ್ ಎಂಬ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಲಭ್ಯವಿದೆ. ಆರ್ಕ್ಟಿಕ್ ಬ್ಲೂ, ಅಟ್ಲಾಂಟಿಸ್ ಗ್ರೇ, ಕಾಸ್ಮೊಸ್ ಬ್ಲ್ಯಾಕ್ ಸೇರಿದಂತೆ ಹಲವು ಬಣ್ಣಗಳನ್ನು ಕೂಡ ಪಡೆದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಸಂಚರಿಸಬಹುದು.

ಈ ಸೀಲ್ ಎಲೆಕ್ಟ್ರಿಕ್ ಸೆಡಾನ್ ಎರಡು ಬ್ಯಾಟರಿ ಪ್ಯಾಕ್‌ನೊಂದಿಗೆ ದೊರೆಯಲಿದ್ದು, ಅದಕ್ಕೆ ತಕ್ಕಂತೆಯೇ ಅತ್ಯುತ್ತಮವಾದ ಕಾರ್ಯಕ್ಷಮತೆಯನ್ನು ಹೊಂದಿದೆ. ಇದರ 61.44 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿಯು ಸಿಂಗಲ್ ಮೋಟಾರ್ ಸೆಟಪ್ ಹೊಂದಿದ್ದು, 204 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 310 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 510 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ.

BYD Seal 200 Cars Delivery In Single Day India Price And Range Details

ಮತ್ತೊಂದು 82.56 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹಾಗೂ ಸಿಂಗಲ್ ಮೋಟಾರ್ ಸೆಟಪ್ ಪಡೆದಿರುವ ಮಾದರಿಯು, 313 ಪಿಎಸ್ ಪವರ್ ಮತ್ತು 360 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಡುಯಲ್ ಮೋಟಾರ್ ಸೆಟಪ್ ಒಳಗೊಂಡಿರುವ ಆವೃತ್ತಿಯು 530 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 670 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಭರ್ತಿ ಚಾರ್ಜ್ ನಲ್ಲಿ 580 ರಿಂದ 650 ಕಿ.ಮೀ ಓಡುತ್ತದೆ.

ಬಿವೈಡಿ ಸೀಲ್ ಸೆಡಾನ್‌ನ ಬ್ಯಾಟರಿಯು ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಶೇಕಡ 30 ರಿಂದ 80% ಆಗಲು ಕೇವಲ 26 ನಿಮಿಷವನ್ನು ತೆಗೆದುಕೊಳ್ಳುತ್ತದೆ. 15.6 - ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್‌ಗಳು, ವೆಂಟಿಲೇಟೆಡ್ & ಹೀಟೆಡ್ ಫ್ರಂಟ್ ಸೀಟ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

BYD Seal 200 Cars Delivery In Single Day India Price And Range Details

ಸುರಕ್ಷತೆಗೂ ಈ ಕಾರು ಹೆಸರುವಾಸಿಯಾಗಿದ್ದು, 9 ಏರ್‌ಬ್ಯಾಗ್‌, 360 - ಡಿಗ್ರಿ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಐಎಸ್ಒಎಫ್ಐಎಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಿವೈಡಿ ಸೀಲ್ ಸೆಡಾನ್‌ಗೆ ಹ್ಯುಂಡೈ ಐಯೋನಿಕ್ 5, ಕಿಯಾ ಇವಿ6, ಮತ್ತು ವೋಲ್ವೋ ಸಿ40 ರೀಚಾರ್ಜ್ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, May 28, 2024, 10:48 [IST]
English summary
Byd seal 200 cars delivery in single day india price and range details
Read more on byd india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+