BYD: ಭಾರತದಲ್ಲಿ ಚೀನಾ ಮಾಲೀಕತ್ವದ 'ಸೀಲ್' ಕಾರಿನ ಬುಕ್ಕಿಂಗ್ ಆರಂಭ.. 570 ಕಿ.ಮೀ ಓಡುತ್ತೆ, ನಿರೀಕ್ಷೆಗಳು ದುಪ್ಪಟ್ಟು!

ಚೀನಾ ಮಾಲೀಕತ್ವದ ಬಿವೈಡಿ (BYD), ಹೊಚ್ಚ ಹೊಸ ಸೀಲ್‌ (Seal) ಎಲೆಕ್ಟ್ರಿಕ್ ಕಾರಿಗಾಗಿ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ಪ್ರಾರಂಭಿಸಿದೆ. ಇದೊಂದು ಸೆಡಾನ್ ಆಗಿದ್ದು, ಮಾರ್ಚ್ 5 ರಂದು ದೇಶೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅನಾವರಣಗೊಳ್ಳಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನೂತನ ಬಿವೈಡಿ ಸೀಲ್‌ (BYD Seal) ಎಲೆಕ್ಟ್ರಿಕ್ ಕಾರನ್ನು ಕಾಯ್ದಿರಿಸಿದ ಗ್ರಾಹಕರು ವಿಶೇಷ ಸೌಲಭ್ಯವನ್ನು ಕೂಡ ಪಡೆಯಲಿದ್ದಾರೆ. ಏಪ್ರಿಲ್ 30, 2024ರೊಳಗೆ ಈ ಕಾರನ್ನು ಬುಕ್ಕಿಂಗ್ ಮಾಡಿದರೆ ಯುಇಎಫ್ಎ ಫುಟ್‌ಬಾಲ್‌ ಚಾಂಪಿಯನ್ಸ್ ಲೀಗ್ ಪಂದ್ಯವನ್ನು ವೀಕ್ಷಿಸಲು ಹಾಗೂ ಭಾರತದಿಂದ ಅಲ್ಲಿಗೆ ಹೋಗಲು ಟಿಕೆಟ್ ಕೂಡ ಲಭ್ಯವಾಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಿವೈಡಿ ಟೆಸ್ಲಾದೊಂದಿಗೆ ಸ್ಪರ್ಧಿಸುತ್ತದೆ.

China Ownership BYD Seal EV Bookings Open In India: Expected Features

ಈ ಬಿವೈಡಿ ಸೀಲ್‌ ಎಲೆಕ್ಟ್ರಿಕ್ ಸೆಡಾನ್ ಸಿಂಗಲ್ & ಡುಯಲ್ ಮೋಟಾರ್ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 308 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 360 ಎನ್ಎಂ ಪೀಕ್ ಟಾರ್ಕ್ ಅಥವಾ 522 ಬಿಹೆಚ್‌ಪಿ ಪವರ್ ಹಾಗೂ 670 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ದೊಡ್ಡದಾದ 82.5 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಹೊಂದಿರುವ ಸೀಲ್‌ ಕಾರು, 520 ಕಿ.ಮೀ ರಿಂದ 570 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಚಿಕ್ಕದಾದ 61.4 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಪಡೆದಿರುವ ಕಾರು, 460 ಕಿ.ಮೀ ಕ್ರಮಿಸಲಿದ್ದು, 201 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 310 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಡಿಸಿ ಫಾಸ್ಟ್ ಸೇರಿದಂತೆ ವಿವಿಧ ಚಾರ್ಜಿಂಗ್ ಆಯ್ಕೆಯಲ್ಲಿ ಸಿಗುತ್ತದೆ.

China Ownership BYD Seal EV Bookings Open In India: Expected Features

ಈ ಬಿವೈಡಿ ಸೀಲ್‌ (BYD Seal) ಎಲೆಕ್ಟ್ರಿಕ್ ಸೆಡಾನ್, ಕೇವಲ 3.8 ಸೆಕೆಂಡುಗಳಲ್ಲಿ 0-100 ಕೆಎಂಪಿಎಚ್ ವೇಗವನ್ನು ಪಡೆಯಲಿದ್ದು, 15.6-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್‌, ವೆಂಟಿಲೇಟೆಡ್ & ಹಿಟೆಡ್ ಫ್ರಂಟ್ ಸೀಟ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದಲೂ ಬಿವೈಡಿ ಸೀಲ್‌ ಅತ್ಯಾಧುನಿಕವಾಗಿದ್ದು, ಕಳೆದ ವರ್ಷಅಕ್ಟೋಬರ್‌ನಲ್ಲಿ ಜರುಗಿದ ಯುರೋ ಎನ್‌ಸಿಎಪಿ (Euro NCAP) ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ವಯಸ್ಕ ಮತ್ತು ಮಕ್ಕಳ ರಕ್ಷಣೆ ವಿಭಾಗದಲ್ಲಿ ಶೇಕಡ 89%ಗೆ 86% ಅಂಕಗಳನ್ನು ಗಳಿಸಿದೆ. ಮಲ್ಟಿ ಏರ್‌ಬ್ಯಾಗ್‌, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಭಾರತದಲ್ಲಿ ಬಿವೈಡಿ ಕಂಪನಿಯು ಆಟ್ಟೊ 3 ಹಾಗೂ ಇ6 ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಆಟ್ಟೊ 3 ಕಾರು ರೂ.33.99 ಲಕ್ಷದಿಂದ ರೂ.34.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 521 ಕಿ.ಮೀ ಕ್ರಮಿಸುತ್ತದೆ. ಬಿವೈಡಿ ಇ6 ಕಾರು ರೂ.29.15 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದ್ದು, ಭರ್ತಿ ಚಾರ್ಜ್ ನಲ್ಲಿ 520 ಕಿ.ಮೀ ಓಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, February 29, 2024, 10:21 [IST]
English summary
China ownership byd seal ev bookings open in india expected features
Read more on ಬಿವೈಡಿ byd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+