ಮಾರುಕಟ್ಟೆಗೆ ಹೊಸ ಕಾರು ಎಂಟ್ರಿ: ಅಡ್ವೆಂಚರ್ ಪ್ರಿಯರಿಗೆ ರಸದೌತಣ: ಆರಂಭಿಕ ಬೆಲೆ 8.49 ಲಕ್ಷ!
ಸಿಟ್ರನ್ ಇಂಡಿಯಾ ಇಂದು ತನ್ನ ಜನಪ್ರಿಯ ಏರ್‌ಕ್ರಾಸ್ ಎಸ್‌ಯುವಿಯ ಸೀಮಿತ ಆವೃತ್ತಿಯ (Limited edition) ಏರ್‌ಕ್ರಾಸ್ ಎಕ್ಸ್‌ಪ್ಲೋರರ್ (Aircross Xplorer edition) ಅನ್ನು ಬಿಡುಗಡೆ ಮಾಡಿದೆ. ಅಡ್ವೆಂಚರ್ ಬಯಸುವ ಮತ್ತು ವಿಶಿಷ್ಟ ವಿನ್ಯಾಸದ ಅಭಿರುಚಿಯನ್ನು ಹೊಂದಿರುವವರಿಗೆ ತಕ್ಕಂತೆ ಏರ್‌ಕ್ರಾಸ್ ಎಕ್ಸ್‌ಪ್ಲೋರರ್ ಆವೃತ್ತಿಯು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಇವು ಮಾತ್ರವಲ್ಲದೇ ತನ್ನ ಪ್ರೀಮಿಯಂ ಚಾಲನಾ ಅನುಭವದೊಂದಿಗೆ ವ್ಯಾಪಕ ಶ್ರೇಣಿಯ ಗ್ರಾಹಕರನ್ನು ಆಕರ್ಷಿಸಲು ಸಿದ್ಧವಾಗಿದೆ ಎಂದು ಕಂಪನಿ ಹೇಳಿದೆ. ಈ ಕಾರಿನ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ವಿಶೇಷ ಆವೃತ್ತಿಯು ಡಿಸೈನ್ ಮತ್ತು ಕ್ರಿಯಾತ್ಮಕತೆ ಎರಡನ್ನೂ ಹೆಚ್ಚಿಸುವ ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯಾಶ್‌ಕ್ಯಾಮ್, ಪ್ರೀಮಿಯಂ ಇನ್ - ಕ್ಯಾಬಿನ್ ಅನುಭವಕ್ಕಾಗಿ ಫುಟ್‌ವೆಲ್ ಲೈಟಿಂಗ್, ಇಲ್ಯುಮಿನೇಟೆಡ್ ಸಿಲ್ ಪ್ಲೇಟ್‌ಗಳು ಮತ್ತು ಸ್ಟ್ರೈಕಿಂಗ್ ಹುಡ್ ಗಾರ್ನಿಶ್ ಸೇರಿವೆ. ಇವು ಕಾರಿನ ಪ್ರೀಮಿಯಂ ಅನುಭವವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ ಎಂದು ಕಂಪನಿ ಹೇಳಿದೆ.

ಹೊರಭಾಗವನ್ನು ಬೋಲ್ಡ್ ಬಾಡಿ ಡಿಕಾಲ್‌ಗಳು ಮತ್ತು ಖಾಕಿ ಬಣ್ಣದ ಇಂಟೇಕ್‌ಗಳೊಂದಿಗೆ ಸ್ಪೋರ್ಟಿ ನೋಟವನ್ನು ಹೆಚ್ಚಿಸಲಾಗಿದೆ. ಇದು ಏರ್‌ಕ್ರಾಸ್ ಎಕ್ಸ್‌ಪ್ಲೋರರ್‌ಗೆ ಒರಟಾದ ಅಡ್ವೆಂಚರ್ ನೋಟವನ್ನು ನೀಡುತ್ತದೆ. ಇನ್ನೂ ಹೆಚ್ಚಿನ ಆಕರ್ಷಕ ಫೀಚರ್‌ಗಳನ್ನು ಬಯಸುವವರಿಗೆ, ದೂರದ ಪ್ರಯಾಣಕ್ಕೆ ಸೂಕ್ತವಾದ ಹಿಂಬದಿ - ಸೀಟಿಗೂ ಇನ್‌ಫೋಟೈನ್ಮೆಂಟ್ ಸಿಸ್ಟಮ್ ಸೇರಿಸುವ ಆಯ್ಕೆ ನೀಡಲಾಗಿದೆ.
ಚಾಲನಾ ಅನುಭವವನ್ನು ಮತ್ತಷ್ಟು ಹೆಚ್ಚಿಸಲು, ಏರ್‌ಕ್ರಾಸ್ ಎಕ್ಸ್‌ಪ್ಲೋರರ್ ಆವೃತ್ತಿಯು ಎರಡು ಅತ್ಯಾಕರ್ಷಕ ಪ್ಯಾಕೇಜ್ ಆಯ್ಕೆಗಳನ್ನು ಒಳಗೊಂಡಿದೆ. ಪ್ರಸ್ತುತ ಮಾರಾಟದಲ್ಲಿರುವ ಮಾಡೆಲ್‌ನ ಸ್ಟ್ಯಾಂಡರ್ಡ್ ಪ್ಯಾಕ್ ಬೆಲೆಯು ರೂ. 24,000 ಇದ್ದರೇ, ಹೊಸ ಏರ್‌ಕ್ರಾಸ್ ಎಕ್ಸ್‌ಪ್ಲೋರರ್ ಆವೃತ್ತಿಯ ಐಚ್ಛಿಕ ಪ್ಯಾಕ್ (Optional pack) ಬೆಲೆಯು ರೂ. 51,700 ಇದೆ. ಇದು ಡ್ಯುಯಲ್ - ಪೋರ್ಟ್ ಅಡಾಪ್ಟರ್‌ನೊಂದಿಗೆ ಹಿಂಬದಿ - ಸೀಟಿಗೆ ಮನರಂಜನೆಯನ್ನು ಸೇರಿಸುತ್ತದೆ.

ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಸಿಟ್ರನ್ ಏರ್‌ಕ್ರಾಸ್ ಎಕ್ಸ್‌ಪ್ಲೋರರ್ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತದೆಯಾದರೂ, ಇದು ಯಾಂತ್ರಿಕವಾಗಿ ಬದಲಾಗದೆ ಉಳಿದಿದೆ. ಸ್ಟ್ಯಾಂಡರ್ಡ್ ಆಗಿ ನೀಡುವ ಅದೇ ನ್ಯಾಚುರಲ್ಲಿ ಆಸ್ಪಿರೇಟೆಡ್ 1.2 - ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಮ್ಯಾನುವಲ್ ಹಾಗೂ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಒಳಗೊಂಡಿದೆ.
ಸೀಮಿತ ಆವೃತ್ತಿಯ ಏರ್‌ಕ್ರಾಸ್ ಎಕ್ಸ್‌ಪ್ಲೋರರ್ ಮಾಡೆಲ್, ಎರಡು ಟ್ರಿಮ್ ಪ್ಲಸ್ ಮ್ಯಾಕ್ಸ್‌ನಲ್ಲಿ ಬರುತ್ತದೆ. ಸಿಟ್ರನ್ ಏರ್‌ಕ್ರಾಸ್ ಶ್ರೇಣಿಯು ರೂ. 8.49 ಲಕ್ಷದ ಆಕರ್ಷಕ ಬೆಲೆಯಲ್ಲಿ ಪ್ರಾರಂಭವಾಗುತ್ತದೆ. ಮೊದಲೇ ಹೇಳಿದಂತೆ ಶೈಲಿ ಮತ್ತು ಕ್ರಿಯಾತ್ಮಕತೆ ಎರಡನ್ನೂ ಇನ್ನಷ್ಟು ಹೆಚ್ಚಿಸಲು, ಏರ್‌ಕ್ರಾಸ್ ಎಕ್ಸ್‌ಪ್ಲೋರರ್ ಆವೃತ್ತಿಯು ಎರಡು ವಿಶೇಷ ಪ್ಯಾಕೇಜ್ ಆಯ್ಕೆಗಳನ್ನು ಒಳಗೊಂಡಿದೆ.

ಸಿಟ್ರನ್ ಇಂಡಿಯಾದ ನಿರ್ದೇಶಕ ಶಿಶಿರ್ ಮಿಶ್ರಾ ಮಾತನಾಡಿ, "ನಮ್ಮ ಗ್ರಾಹಕರಿಗೆ ಉತ್ತೇಜಕ ಪ್ರಯಾಣವನ್ನು ರಚಿಸಲು ಸಿಟ್ರನ್‌ನ ಸಮರ್ಪಣೆಯನ್ನು ಏರ್‌ಕ್ರಾಸ್ ಎಕ್ಸ್‌ಪ್ಲೋರರ್ ಎಡಿಷನ್ ಪ್ರದರ್ಶಿಸುತ್ತದೆ. ಅಸಾಧಾರಣ ವಿನ್ಯಾಸ ಮತ್ತು ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಮಧ್ಯಮ - ಎಸ್‌ಯುವಿ ವಿಭಾಗದಲ್ಲಿ ಅಡ್ವೆಂಚರ್ ಮನೋಭಾವವನ್ನು ನೀಡುತ್ತದೆ. ಸಿಟ್ರನ್ ಸೌಕರ್ಯದೊಂದಿಗೆ ಸೀಮಿತ ಆವೃತ್ತಿಯು ಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡುತ್ತದೆ ಎಂದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications