ಸಾಮಾನ್ಯರಿಗೂ ಲಕ್ಷುರಿ ಫೀಚರ್ಸ್, ಅತ್ಯಂತ ಕಡಿಮೆ ಬೆಲೆಯ ಎಸ್‍ಯುವಿ ಕೂಪೆ ವಿತರಣೆ ಪ್ರಾರಂಭ
ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಫ್ರೆಂಚ್ ಮೂಲದ ಸಿಟ್ರನ್ (Citroen) ಭಾರತೀಯ ಮಾರುಕಟ್ಟೆಗೆ 2019 ರಲ್ಲಿ ಕಾಲಿಟ್ಟಿತ್ತು. 2021 ರಲ್ಲಿ, ಕಂಪನಿಯು ತನ್ನ ಪ್ರಮುಖ ಎಸ್‍ಯುವಿಯಾದ C5 ಏರ್‌ಕ್ರಾಸ್ ಅನ್ನು ಬಿಡುಗಡೆ ಮಾಡಿತು ಮತ್ತು ಇಲ್ಲಿಯವರೆಗೆ, ಸಿಟ್ರನ್ ಒಟ್ಟು 4 ಕಾರು ಮಾದರಿಗಳನ್ನು ಬಿಡುಗಡೆ ಮಾಡಿದೆ. ಹೊಸ ಬಸಾಲ್ಟ್ ಭಾರತೀಯ ಮಾರುಕಟ್ಟೆಗೆ ಕಂಪನಿಯ ಪೋರ್ಟ್‌ಫೋಲಿಯೊದಿಂದ 5ನೇ ಕಾರ್ ಆಗಿದೆ. ಹೊಸ ಸಿಟ್ರನ್ ಬಸಾಲ್ಟ್ (Citroen Basalt) ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಹೊಸ ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆ ರೂ.7.99 ಲಕ್ಷದ ವಿಶೇಷ ಪರಿಚಯಾತ್ಮಕ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಈ ಪರಿಚಯಾತ್ಮಕ ಬೆಲೆಯು 2024ರ ಅಕ್ಟೋಬರ್ 31ರವರೆಗೆ ಎಲ್ಲಾ ಬುಕಿಂಗ್‌ಗಳಿಗೆ ಮಾನ್ಯವಾಗಿರುತ್ತದೆ. ಈ ಎಸ್‍ಯುವಿಯ ಕಾಯುವ ಅವಧಿಯು ರೂಪಾಂತರವನ್ನು ಅವಲಂಬಿಸಿ ಸುಮಾರು ಒಂದು ತಿಂಗಳು ಇರುತ್ತದೆ ಎಂದು ಹೇಳಲಾಗುತ್ತದೆ. ಇದೀಗ ಸಿಟ್ರನ್ ಇಂಡಿಯಾ ದೇಶದಲ್ಲಿ ಹೊಸ ಬಸಾಲ್ಟ್ ಕೂಪ್ ಎಸ್‌ಯುವಿ ವಿತರಣೆಯನ್ನು ಪ್ರಾರಂಭಿಸಿದೆ. ಮೊದಲ ಬಸಾಲ್ಟ್ ಎಸ್‍ಯುವಿ ಕೂಪೆಯನ್ನು ದೆಹಲಿಯ ಡೀಲರ್‌ಶಿಪ್‌ನಲ್ಲಿ ತನ್ನ ಗ್ರಾಹನಿಗೆ ವಿತರಿಸಲಾಗಿದೆ.

ಹೊಸ ಸಿಟ್ರನ್ ಬಸಾಲ್ಟ್ ತುಂಬಾ ಆಸಕ್ತಿದಾಯಕ ವಿನ್ಯಾಸವನ್ನು ಹೊಂದಿದೆ. ಈ ಎಸ್‍ಯುವಿ ಕೂಪೆ ಬಾಡಿ ಸ್ಟೈಲ್ ಅನ್ನು ಹೊಂದಿದೆ. ಈ ಹೊಸ ಮಾದರಿಯ ಮುಂಭಾಗದಲ್ಲಿ ಲ್ಇಡಿ ಡಿಆರ್ಎಲ್ಗಳು ಮತ್ತು ಎಲ್ಇಡಿ ಹೆಡ್ ಲೈಟ್ ಸೆಟಪ್ ಅನ್ನು ಪಡೆಯುತ್ತದೆ. ಇದರ ಹೊರತಾಗಿ ನೀವು ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಮತ್ತು ಸ್ವಲ್ಪ ಪ್ರಮಾಣದ ಕ್ರೋಮ್ ಅನ್ನು ಹೊಂದಿದೆ. ಈ ಹೊಸ ಕಾರಿನಲ್ಲಿ ಪಾಂಗ್ ಲೈಟ್ ಹ್ಯಾಲೊಜೆನ್ ಯುನಿಟ್ ಆಗಿದೆ.
ಹೊಸ ಸಿಟ್ರನ್ ಬಸಾಲ್ಟ್ ಬದಿಯಲ್ಲಿ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು ಮತ್ತು ಸುತ್ತಲೂ ಬಾಡಿ ಕ್ಲಾಡಿಂಗ್ ಅನ್ನು ಪಡೆಯುತ್ತದೆ. ಸೈಡ್ ಮಿರರ್‌ಗಳು ಗ್ಲಾಸ್ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಇನ್ನು ಈ ಮಾದರಿಯಲ್ಲಿ ಸ್ಲೋಪಿಂಗ್ ರೂಫ್‌ಲೈನ್ ಮತ್ತು ಸುತ್ತುವ 3D ಟೈಲ್‌ಲೈಟ್‌ಗಳನ್ನು ನೋಡಬಹುದು. ಇದರ ಹಿಂಭಾಗದಲ್ಲಿ, ನೀವು ಶಾರ್ಕ್‌ಫಿನ್ ಆಂಟೆನಾ ಮತ್ತು ಡಿಫೊಗರ್‌ಗಳನ್ನು ಪಡೆಯುತ್ತದೆ.

ಬಸಾಲ್ಟ್ ಒಳಭಾಗದಲ್ಲಿ, ಟ್ರಿಪಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಪಡೆಯುತ್ತದೆ. ವೈರ್‌ಲೆಸ್ Apple CarPlay ಮತ್ತು Android Auto ಕನೆಕ್ಟಿವಿಟಿ ಹೊಂದಿರುವ 10.25 ಟಚ್‌ಸ್ಕ್ರೀನ್ ಅನ್ನು ಹೊಂದಿದೆ ಮತ್ತು 15W ವೈರ್‌ಲೆಸ್ ಚಾರ್ಜರ್ ಅನ್ನು ಸಹ ಪಡೆಯುತ್ತದೆ. ಈ ಕಾರಿನ 7-ಇಂಚಿನ TFT ಡಿಸ್ ಪ್ಲೇಯನ್ನು ಪಡೆಯುತ್ತದೆ. ಈ ಡಿಸ್‌ಪ್ಲೇಯು 3 ವಿಭಿನ್ನ ಥೀಮ್‌ಗಳನ್ನು ಹೊಂದಿದೆ ಮತ್ತು ಚಾಲಕನ ಅಗತ್ಯಕ್ಕೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದು.
ಈ ಸಿಟ್ರನ್ ಬಸಾಲ್ಟ್ ಕಾರಿನ ಹಿಂಭಾಗದಲ್ಲಿ AC ವೆಂಟ್‌ಗಳು ಮತ್ತು 2 ಚಾರ್ಜಿಂಗ್ ಸಾಕೆಟ್‌ಗಳಿವೆ. ಒಟ್ಟಾರೆಯಾಗಿ ಬಸಾಲ್ಟ್ ಕ್ಯಾಬಿನ್ ಪ್ರೀಮಿಯಂ ಅನ್ನು ಅನುಭವಿಸುತ್ತದೆ ಮತ್ತು ಯೋಗ್ಯವಾದ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಆದರೆ ಇದು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್‌ರೂಫ್ ಮುಂತಾದ ಕೆಲವು ಫೀಚರ್ಸ್ ಗಳನ್ನು ಹೊಂದಿಲ್ಲ.
ಹೊಸ ಸಿಟ್ರನ್ ಬಸಾಲ್ಟ್ ಮಾದರಿಯಲ್ಲಿ 2 ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಒಂದು 1.2 ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಆಗಿದ್ದು, ಇದು 82 bhp ಮತ್ತು 115 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು , 1.2 ಟರ್ಬೊ ಪೆಟ್ರೋಲ್ 3-ಸಿಲಿಂಡರ್ ಎಂಜಿನ್ 109 bhp ಪವರ್ ಅನ್ನು ಉತ್ಪಾದಿಸುತ್ತದೆ. ಇದು ಮ್ಯಾನುವಲ್ 190Nm ಮತ್ತು ಆಟೋಮ್ಯಾಟಿಕ್ 205Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಸುರಕ್ಷತೆಯ ದೃಷ್ಟಿಯಿಂದ, ಹೊಸ ಸಿಟ್ರನ್ ಬಸಾಲ್ಟ್ ಕಾರಿನಲ್ಲಿ 6 ಏರ್‌ಬ್ಯಾಗ್‌ಗಳು, ABS, EBD, ISOFIX ಮತ್ತು ಇನ್ನೂ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಈ ಕಾರಿನ ಮೈಲೇಜ್ ಬಗ್ಗೆ ಹೇಳುವುದಾದರೆ, ಇದು 18 ರಿಂದ 19.5 ಕಿ.ಮೀ.ವರೆಗೆ ಮೈಲೇಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.


Click it and Unblock the Notifications








