ಜನಪ್ರಿಯ ಎಸ್‌ಯುವಿಗೆ 0-ಸ್ಟಾರ್ ಸೇಫ್ಟಿ ರೇಟಿಂಗ್: ಕಾರು ತಯಾರಕರಿಗೆ ಮುಜುಗರ!
Citroen C3 Aircross: ಇತ್ತೀಚೆಗೆ ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲಿಯೂ ಕಾರುಗಳ ಸುರಕ್ಷತಾ ರೇಟಿಂಗ್ ತುಂಬಾ ಪ್ರಾಮುಖ್ಯತೆ ಪಡೆಯುತ್ತಿದೆ. ಜನರು ಸುರಕ್ಷಿತ ಕಾರುಗಳನ್ನು ಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದೇ ಕಾರಣಕ್ಕೆ ತೀರಾ ಕಳಪೆ ಗುಣಮಟ್ಟದ ಕಾರುಗಳು ಎಂಬ ಅಪಖ್ಯಾತಿ ಪಡೆದಿದ್ದ ಮಾರುತಿ ಸುಜುಕಿ, ಇತ್ತೀಚೆಗೆ ತನ್ನ ಡಿಜೈರ್ ಅನ್ನು 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡುವಷ್ಟು ಬಲಿಷ್ಟವಾಗಿ ನಿರ್ಮಿಸಿ ಎಲ್ಲರನ್ನು ಅಚ್ಚರಿಗೊಳಿಸಿದೆ. ಆದ್ರೆ ಫ್ರೆಂಚ್ ಮೂಲದ ಸಿಟ್ರನ್ ಮಾತ್ರ ಕೆಲ ದೇಶಗಳಲ್ಲಿ ತನ್ನ ನಿರ್ಮಾಣ ಗುಣಮಟ್ಟವನ್ನು ಕಳೆದುಕೊಂಡು ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ.
ಸ್ಟೆಲ್ಲಾಂಟಿಸ್ ಗ್ರೂಪ್ ಅಂಗಸಂಸ್ಥೆಯಾದ ಸಿಟ್ರನ್ ಭಾರತ ಮಾತ್ರವಲ್ಲ ವಿಶ್ವದ ಹಲವು ದೇಶಗಳಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಿರ್ಮಾಣವಾದ ಸಿಟ್ರನ್ ಸಿ3 ಏರ್‌ಕ್ರಾಸ್ (Citroen C3 Aircross) ಅನ್ನು ಲ್ಯಾಟಿನ್ ಎನ್‌ಸಿಎಪಿ (Latin New Car Assessment Programme)ಗೆ ಒಳಪಡಿಸಲಾಗಿದ್ದು, ಶೂನ್ಯ-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದು ಎಲ್ಲರನ್ನು ನಿರಾಸೆಗೊಳಿಸಿದೆ.

ಲ್ಯಾಟಿನ್ ಎನ್‌ಸಿಎಪಿ ಪರೀಕ್ಷಿಸಿದ ಸಿಟ್ರನ್ ಸಿ3 ಏರ್‌ಕ್ರಾಸ್ ಕಾರು (ಮೇಡ್ ಇನ್ ಬ್ರೆಜಿಲ್) ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ ಶೇ33.01 ರಷ್ಟು ಮತ್ತು ಮಕ್ಕಳ ಸುರಕ್ಷತೆಯಲ್ಲಿ ಶೇ11.37 ರಷ್ಟು ಸುರಕ್ಷತೆಯನ್ನು ಪಡೆದಿದೆ. ಪ್ರಸ್ತುತ ಪ್ರೋಟೋಕಾಲ್‌ಗಳ ಪ್ರಕಾರ ಲ್ಯಾಟಿನ್ ಎನ್‌ಸಿಎಪಿ ಈ ಹಿಂದೆ ಪರೀಕ್ಷಿಸಿದ ಇತರ ಸ್ಟೆಲ್ಲಾಂಟಿಸ್ ಕಾರುಗಳು ಸಹ 0 ಯಿಂದ 2 ಸ್ಟಾರ್ ಅಂಕಗಳನ್ನು ಪಡೆದಿವೆ ಎಂದು ವರದಿಯಾಗಿದೆ.
ಲ್ಯಾಟಿನ್ ಎನ್‌ಸಿಎಪಿನಲ್ಲಿ ಪರೀಕ್ಷಿಸಿದ ಸಿಟ್ರನ್ ಸಿ3 ಏರ್‌ಕ್ರಾಸ್ ಕಾರಿನಲ್ಲಿ ಎಇಬಿ ಇಂಟರ್-ಅರ್ಬನ್, ಸ್ಪೀಡ್ ಅಸಿಸ್ಟ್ ಸಿಸ್ಟಮ್ ಮತ್ತು ಲೇನ್ ಅಸಿಸ್ಟ್ ಸಿಸ್ಟಮ್, ಎಇಬಿ ಪೆಡಸ್ಟ್ರಿಯನ್(ಪಾದಾಚಾರಿ), ಎಇಬಿ ಸಿಟಿ ಸಿಸ್ಟಮ್ ಹೊಂದಿಲ್ಲ. ನಿರ್ಣಾಯಕ ಸುರಕ್ಷತಾ ಸಾಧನಗಳ ಅಲಭ್ಯತೆಯು ಕಡಿಮೆ ಸುರಕ್ಷತಾ ರೇಟಿಂಗ್‌ಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ.

ಲ್ಯಾಟಿನ್ ಎನ್‌ಸಿಎಪಿನಲ್ಲಿ ಪರೀಕ್ಷಿಸಿದ ಸಿಟ್ರನ್ ಸಿ3 ಏರ್‌ಕ್ರಾಸ್ ಕಾರಿನಲ್ಲಿ ಲಭ್ಯವಿದ್ದ ಸುರಕ್ಷತಾ ಫೀಚರ್‌ಗಳನ್ನು ನೋಡುವುದಾದ್ರೆ, ಮುಂಭಾಗದಲ್ಲಿ ಏರ್‌ಬ್ಯಾಗ್‌ಗಳು, ಇಎಸ್‌ಸಿ, ಬೆಲ್ಟ್ ಪ್ರಿಟೆನ್ಷನರ್, ಬೆಲ್ಟ್ ಲೋಡ್ಲಿಮಿಟರ್, ಸೀಟ್ ಬೆಲ್ಟ್ ರಿಮೈಂಡರ್, ಮತ್ತು ಪಾದಚಾರಿ ರಕ್ಷಣೆ ಸೇರಿವೆ. ಆದ್ರೆ ಸೈಡ್ ಹೆಡ್ ಕರ್ಟನ್ ಏರ್‌ಬ್ಯಾಗ್, ಸೈಡ್ ಚೆಸ್ಟ್ ಏರ್‌ಬ್ಯಾಗ್, ಸೈಡ್ ಪೆಲ್ವಿಸ್ ಏರ್‌ಬ್ಯಾಗ್ ಮತ್ತು ಮೊಣಕಾಲು ಏರ್‌ಬ್ಯಾಗ್‌ನಂತಹ ನಿರ್ಣಾಯಕ ಫೀಚರ್‌ಗಳು ಇರಲಿಲ್ಲ.
ಈ ಕಾರಣದಿಂದಾಗಿ ಪರೀಕ್ಷೆಯಲ್ಲಿ ಪ್ರಯಾಣಿಕರಿಗೆ (ಡಮ್ಮಿ ಗೊಂಬೆಗಳು) ಸರಿಯಾದ ರಕ್ಷಣೆ ನೀಡುವಲ್ಲಿ ಕಾರು ವಿಫಲವಾಗಿದ್ದು, 0-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯಿತು. ಆದರೆ ಭಾರತೀಯ ಮಾದರಿಯು ಇಷ್ಟು ಕಳಪೆಯಾಗಿ ಇರುವುದಿಲ್ಲ, ಏಕೆಂದರೆ ಇಲ್ಲಿ ಸಿಟ್ರನ್ ಸಿ3 ಏರ್‌ಕ್ರಾಸ್ ಉತ್ತಮ ಸೇಫ್ಟಿ ಫೀಚರ್ಸ್ ಹಾಗೂ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ ಎಂದು ನಂಬಲಾಗಿದೆ.

ಅದೇನೇ ಇದ್ದರೂ, ಗ್ರಾಹಕರು ತಮ್ಮ ವಾಹನಗಳ ಸುರಕ್ಷತಾ ಪರಾಕ್ರಮದ ಬಗ್ಗೆ ಅಪಾರವಾಗಿ ಟೀಕಿಸುತ್ತಿರುವ ಇಂದಿನ ಪರಿಸ್ಥಿತಿಗಳಲ್ಲಿ, ಫ್ರೆಂಚ್ ಕಾರು ತಯಾರಕರು ಇಂತಹ ಮುಜುಗರದ ಸೇಫ್ಟಿ ರೇಟಿಂಗ್ ಪಡೆದಿರುವುದು ಅಚ್ಚರಿಗೊಳಿಸಿದೆ. ಶೀಘ್ರದಲ್ಲೇ ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್‌ನ ಭಾರತೀಯ ಮಾಡೆಲ್ ಕೂಡ ಸೇಫ್ಟಿ ರೇಟಿಂಗ್ ಪರೀಕ್ಷೆಗೆ ಒಳಗಾಗಲಿದೆ. ಫಲಿತಾಂಶಕ್ಕೆ ನಾವು ಕೂಡ ಕಾಯುತ್ತಿದ್ದೇವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








