ಮಾರುತಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್: ತಿಂಗಳಾತ್ಯದವರೆಗೆ ಮಾತ್ರ ಲಭ್ಯ

ತಿಂಗಳ ಆರಂಭಕ್ಕೆ ಹೋಲಿಸಿದರೆ ಜೂನ್ ಕೊನೆಯ ವಾರದಲ್ಲಿ ಮಾರುತಿ ಸುಜುಕಿಯ ನೆಕ್ಸಾದಲ್ಲಿ ಮಾರಾಟವಾಗುವ ಕಾರುಗಳಿಗೆ ಹೆಚ್ಚಿನ ರಿಯಾಯಿತಿಯನ್ನು ನೀಡಲಾಗುತ್ತದೆ. ಹೆಚ್ಚಿನ ದಾಸ್ತಾನುಗಳ ಉಳಿಕೆ ಮತ್ತು ನಿಧಾನ ಮಾರಾಟವು ಇದಕ್ಕೆ ಕಾರಣವಾಗಿದೆ ಎಂದು ಡೀಲರ್ ಮೂಲಗಳು ತಿಳಿಸಿವೆ. ಗ್ರ್ಯಾಂಡ್ ವಿಟಾರಾ, ಫ್ರಾಂಕ್ಸ್ ಮತ್ತು ಎಕ್ಸ್‌ಎಲ್ 6 ಎಂಪಿವಿ ಕಾರುಗಳು ಜೂನ್ ಅಂತ್ಯದಲ್ಲಿ ಹೆಚ್ಚುವರಿ ರಿಯಾಯಿತಿಯೊಂದಿಗೆ ಸಿಗುತ್ತಿವೆ. ಉಳಿದಂತೆ ಬಲೆನೊ, ಇಗ್ನಿಸ್ ಮತ್ತು ಸಿಯಾಜ್ ತಿಂಗಳ ಆರಂಭದಲ್ಲಿ ಘೊಷಿಸಲಾದ ಅದೇ ರಿಯಾಯಿತಿಗಳೊಂದಿಗೆ ಸಿಗಲಿವೆ, ಹೊಸ ಇನ್ವಿಕ್ಟೋ ಎಂಪಿವಿ ಯಾವುದೇ ರಿಯಾಯಿತಿಗಳಿಲ್ಲದೆ ಮಾರಾಟದಲ್ಲಿದೆ.

ಮಾರುತಿ ಎಕ್ಸ್ಎಲ್6: ಮಾರುತಿ ಎಕ್ಸ್ಎಲ್ 6 ಮೇಲಿನ ರಿಯಾಯಿತಿಯನ್ನು 15,000 ರೂ.ವರೆಗೆ ಹೆಚ್ಚಿಸಲಾಗಿದೆ. ಒಟ್ಟು ಪ್ರಯೋಜನಗಳು ಈಗ ಪೆಟ್ರೋಲ್ ರೂಪಾಂತರಗಳಿಗೆ 40,000 ರೂ.ಗಳನ್ನು ತಲುಪಿದ್ದರೆ, ಸಿಎನ್‌ಜಿ ಟ್ರಿಮ್‌ಗಳು ಈಗ 25,000 ರೂ.ಗಳವರೆಗೆ ರಿಯಾಯಿತಿಯೊಂದಿಗೆ ಸಿಗಲಿವೆ. ಮಾರುತಿ ಎಕ್ಸ್ಎಲ್6 ಬೆಲೆಯು ರೂ.11.61 ಲಕ್ಷದಿಂದ ರೂ.14.61 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ. ಈ ಎಂಪಿವಿ 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ಲಭ್ಯವಿದೆ.

huge-discount-on-maruti-nexa-cars-till-the-end-of-the-june-month

ಮಾರುತಿ ಗ್ರ್ಯಾಂಡ್ ವಿಟಾರಾ: ತಿಂಗಳ ಆರಂಭದಲ್ಲಿ ಒಟ್ಟು 74,000 ರೂ.ಗಳವರೆಗೆ ರಿಯಾಯಿತಿ ಮತ್ತು ಮೂರು ವರ್ಷಗಳ ವಿಸ್ತರಿತ ವಾರಂಟಿ (ರೂ. 38,000 ಪಾವತಿ)ಯೊಂದಿಗೆ ನೀಡಲಾಗುತ್ತಿದ್ದ ಮಾರುತಿ ಗ್ರ್ಯಾಂಡ್ ವಿಟಾರಾದ ಹೈಬ್ರಿಡ್ ವೇರಿಯೆಂಟ್‌ಗಳ ಮೇಲೆ ಈಗ 1.4 ಲಕ್ಷ ರೂ.ವರೆಗೆ ಒಟ್ಟಾರೆ ರಿಯಾಯಿತಿ ನೀಡಲಾಗುತ್ತಿದೆ.

ಮಧ್ಯಮ ಮತ್ತು ಟಾಪ್-ಸ್ಪೆಕ್ ಡೆಲ್ಟಾ, ಝೀಟಾ ಮತ್ತು ಆಲ್ಫಾ ವೇರಿಯೆಂಟ್‌ಗಳ ಮೇಲೆ 64,000 ರೂ.ಗಳ ಹಳೆಯ ಅದೇ ರಿಯಾಯಿತಿಯನ್ನು ಮುಂದುವರಿಸಲಾಗುತ್ತಿದೆ. ಸಿಎನ್‌ಜಿ ಎಂಟ್ರಿ ಲೆವೆಲ್ ಸಿಗ್ಮಾ ಮತ್ತು ಇತರ ಸಿಎನ್‌ಜಿ ಟ್ರಿಮ್‌ಗಳು ಕ್ರಮವಾಗಿ 34,000 ರೂ. (20,000 ರೂ.ಗಳ ಹೆಚ್ಚಳ) ಮತ್ತು 14,000 ರೂ. ರಿಯಾಯಿತಿಯೊಂದಿಗೆ ಸಿಗಲಿವೆ.

huge-discount-on-maruti-nexa-cars-till-the-end-of-the-june-month

ಗ್ರ್ಯಾಂಡ್ ವಿಟಾರಾ ಬೆಲೆಯು 10.99 ಲಕ್ಷದಿಂದ 19.93 ಲಕ್ಷ ರೂ. (ಎಕ್ಸ್‌ ಶೋರೂಂ) ಇದೆ. ಇದು 1.5-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಲಭ್ಯವಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಕೇವಲ ಮ್ಯಾನುವಲ್‌ನಲ್ಲಿ ಅದೇ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ನ ಸಿಎನ್‌ಜಿ ಆವೃತ್ತಿ ಮತ್ತು ಸ್ಟ್ರಾಂಗ್ ಹೈಬ್ರಿಡ್ ಪವರ್ ಟ್ರೇನ್ ಅನ್ನು ನೀಡಲಾಗುತ್ತದೆ.

ಮಾರುತಿ ಫ್ರಾಂಕ್ಸ್: ಕಂಪನಿಯು ಇತ್ತೀಚೆಗೆ ವೆಲಾಸಿಟಿ ಎಡಿಷನ್ ಶ್ರೇಣಿಯನ್ನು ಫ್ರಾಂಕ್ಸ್‌ನ ಎಲ್ಲಾ 14 ವೇರಿಯೆಂಟ್‌ಗಳಿಗೆ ಸೇರಿಸಲು ವಿಸ್ತರಿಸಿದ್ದು, ಇದರಲ್ಲಿ ಟರ್ಬೊ ಟ್ರಿಮ್‌ನಲ್ಲಿ ಮಾರಾಟವಾಗದ ಸ್ಟಾಕ್‌ಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಸ್ಟ್ಯಾಂಡರ್ಡ್ ಪೆಟ್ರೋಲ್ ಆವೃತ್ತಿಗಳು 32,500 ರೂ.ಗಳವರೆಗೆ (ಸುಮಾರು 5,000 ರೂ.ಗಳ ಏರಿಕೆ) ಪ್ರಯೋಜನಗಳನ್ನು ಹೊಂದಿದ್ದರೆ, ಸಿಎನ್‌ಜಿ ವೇರಿಯೆಂಟ್‌ಗಳು 12,000 ರೂ.ಗಳವರೆಗೆ ರಿಯಾಯಿತಿಯನ್ನು ಪಡೆದಿವೆ.

ಇದರ ಬೆಲೆಯು ರೂ.7.29 ಲಕ್ಷದಿಂದ ರೂ.12.88 ಲಕ್ಷಗಳ (ಎಕ್ಸ್‌ ಶೋರೂಂ) ನಡುವೆ ಇದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಆಯ್ಕೆಗಳೊಂದಿಗೆ ಬರುತ್ತದೆ. ಹಾಗೆಯೇ 1.2-ಲೀಟರ್ ಸಿಎನ್‌ಜಿ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋ ಆಯ್ಕೆಗಳೊಂದಿಗೆ ಬರುತ್ತದೆ.

ಗಮನಿಸಿ: ಇಲ್ಲಿ ಹೇಳಲಾದ ರಿಯಾಯಿತಿಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ಹಾಗೆಯೇ ಸ್ಟಾಕ್ ಲಭ್ಯತೆಗೆ ಒಳಪಟ್ಟಿರುತ್ತವೆ. ನಿಖರವಾದ ರಿಯಾಯಿತಿ ಮಾಹಿತಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಡೀಲರ್ ಅನ್ನು ಸಂಪರ್ಕಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Monday, June 24, 2024, 15:28 [IST]
English summary
Huge discount on maruti nexa cars till the end of the june month
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+