ಸುಲಭವಾಗಿ ಕನಸಿನ ಕಾರ್ ಫಾರ್ಚ್ಯೂನರ್ ಕೊಳ್ಳಬೇಕೇ?: ಡೌನ್‌ಪೇಮೆಂಟ್, EMI ಬಗ್ಗೆ ಸಂಪೂರ್ಣ ಮಾಹಿತಿ!
ಭಾರತೀಯರಲ್ಲಿ ನಿಮ್ಮ ಕನಸಿನ ವಾಹನ ಯಾವುದು ಎಂದು ಕೇಳಿದರೆ ಅದರಲ್ಲಿ ಬಹುತೇಕರು ನೀಡುವ ಉತ್ತರ ಟೊಯೊಟಾ ಫಾರ್ಚ್ಯೂನರ್. ತಮ್ಮ ಜೀವನದ ಒಂದಲ್ಲಾ ಒಂದು ಘಟ್ಟದಲ್ಲಿ ನಮ್ಮಲ್ಲಿ ಎಲ್ಲರೂ ಸಹ ಈ ಟೊಯೊಟಾ ಫಾರ್ಚ್ಯೂನರ್ ಕಾರನ್ನು ಕೊಳ್ಳಬೇಕು ಎಂದು ಕನಸು ಕಂಡಿರುತ್ತೇವೆ ಎಂಬುದು ವಾಸ್ತವ.
ಇಂದಿನ ಈ ಲೇಖನ ಅಂತಹವರಿಗಾಗಿ. ಈ ಲೇಖನದಲ್ಲಿ ಟೊಯೋಟಾ ಫಾರ್ಚ್ಯೂನರ್ ಅನ್ನು ಪಡೆಯಲು ಎಷ್ಟು ಡೌನ್‌ಪೇಮೆಂಟ್ ಮಾಡಬೇಕು, ಅದರ ಇಎಂಐ ಎಷ್ಟಿರುತ್ತದೆ ಎಂಬುದನ್ನು ವಿವರಿಸಲಿದ್ದೇವೆ. ಈ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ. ಇದು ಫಾರ್ಚ್ಯೂನರ್ ಕೊಳ್ಳುವವರಿಗೆ ಹೆಚ್ಚು ಸಹಾಯವಾಗಬಲ್ಲದು.

ಮೊದಲಿಗೆ ಟೊಯೊಟಾ ಫಾರ್ಚ್ಯೂನರ್ ಕಾರಿನ 33,44,000 ರೂಪಾಯಿಗಳು. ಇದಕ್ಕೆ ಕರ್ನಾಟಕದ ಆರ್‌ಟಿಒ ಟ್ಯಾಕ್ಸ್ ನೋಡುವುದಾದರೆ ಅದು ಸುಮಾರು 6,68,131 ಲಕ್ಷ ರೂಪಾಯಿಗಳಷ್ಟು ಬರುತ್ತದೆ. ಈ ಕಾರಿನ ಇನ್ಸ್ಯುರೆನ್ಸ್ ಸುಮಾರು 1,42,857 ರೂಗಳು. ಇವೆಲ್ಲಾ ಸೇರಿ ಬೆಂಗಳೂರಿನಲ್ಲಿ ಟೊಯೋಟಾ ಫಾರ್ಚ್ಯೂನರ್ ಸುಮಾರು 41,88,428 ರೂಗಳಷ್ಟಾಗುತ್ತದೆ.
ಇನ್ನು ಈ ಕಾರಿನ ಇಎಂಐ ಮತ್ತು ಕುರಿತಾಗಿ ನೋಡುವುದಾದರೆ ನೀವು ಈ ಕಾರಿಗೆ ಕನಿಷ್ಟವೆಂದರೂ 5,00,000 ರೂಗಳನ್ನು ಡೌನ್ ಪೇಮೆಂಟ್ ರೀತಿಯಲ್ಲಿ ಕಟ್ಟಬೇಕಾಗುತ್ತದೆ. ನೀವು 9.8% ಬಡ್ಡಿ ದರದಲ್ಲಿ ಸುಮಾರು ೭ ವರ್ಷಗಳ ಕಾಲಾವಧಿಗೆ ಲೋನ್ ಮಾಡಿದರೆ, ಪ್ರತೀ ತಿಂಗಳು ಸುಮಾರು 60,852 ರೂಗಳನ್ನು ಇಎಂಐ ರೂಪದಲ್ಲಿ ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.

ಟೊಯೋಟಾ ಫಾರ್ಚ್ಯೂನರ್ ಬಗ್ಗೆ ನೋಡುವುದಾದರೆ, 7-ಸೀಟುಗಳ ಪ್ರಸ್ತುತ ಜನರೇಷನ್ ಫಾರ್ಚೂನರ್ ಎಸ್‍ಯುವಿಯನ್ನು 2016 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಫಾರ್ಚೂನರ್ ಜಿಆರ್ ಸ್ಪೋರ್ಟ್ ರೂಪಾಂತರವನ್ನು ಶ್ರೇಣಿಗೆ ಸೇರಿಸಲಾಯಿತು. ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಲೆಜೆಂಡರ್ ಆವೃತ್ತಿಯು ಮಾರಾಟದಲ್ಲಿದೆ ಮತ್ತು ಇದು 4X4 ಆಯ್ಕೆಯೊಂದಿಗೆ ಸಹ ಲಭ್ಯವಿದೆ.
ಟೊಯೊಟಾ ಲೆಜೆಂಡರ್‌ನ 4×4 ರೂಪಾಂತರವನ್ನು ಫಾರ್ಚುನರ್‌ನ ಶ್ರೇಣಿಗೆ ಸೇರಿಸಿತು. ಟೊಯೊಟಾ ಫಾರ್ಚುನರ್‌ನ ಜಿಆರ್-ಸ್ಪೋರ್ಟ್ ರೂಪಾಂತರವನ್ನು ಕೂಡ ಬಿಡುಗಡೆಗೊಳಿಸಿತ್ತು. ಈ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಬೆಲೆಗಳಲ್ಲಿನ ಹೆಚ್ಚಳವನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಫಾರ್ಚೂನರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಈ ಫಾರ್ಚುನರ್ ಎಸ್‍ಯುವಿ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ. ಈ ಎಸ್‍ಯುವಿಯಲ್ಲಿ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಹೊಂದಿವೆ. ಟೊಯೊಟಾ ಫಾರ್ಚುನರ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಒಳಭಾಗದಲ್ಲಿ ಈಗ ಹೆಚ್ಚು ಪ್ರೀಮಿಯಂ ಆಗಿ ನವೀಕರಿಸಿದ್ದು, ಕೆಲವು ಹೊಸ ಫೀಚರ್ಸ್ ಅನ್ನು ಹೊಂದಿದೆ.
ಟೊಯೊಟಾ ತನ್ನ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಗೊಳಿಸಿತ್ತು. ಈ ಬಹುಬೇಡಿಕೆಯ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಟಾಪ್ ವೆರಿಯೆಂಟ್ ಲೆಜೆಂಡರ್ ಆಗಿದೆ. ಈ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications