ಮತ್ತೆ ಅಖಾಡಕ್ಕೆ ಹಳೇ ಹುಲಿ: ಫೇಸ್‌ಲಿಫ್ಟ್ ಸ್ಕೋಡಾ ಓಕ್ಟಾವಿಯಾ ಶೀಘ್ರದಲ್ಲೇ ರೀಲಾಂಚ್
ಪ್ರಸಿದ್ದ ಕಾರು ತಯಾರಿಕಾ ಕಂಪನಿಯಾದ ಸ್ಕೋಡಾ ತನ್ನ ಕಾರು ಮಾದರಿಯೊಂದರ ಪೇಸ್‌ಲಿಫ್ಟ್ ಒಂದನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವ ಮುನ್ಸೂಚನೆಯೊಂದನ್ನು ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸ್ಕೋಡಾ ತನ್ನ ಸ್ಕೋಡಾ ಓಕ್ಟಾವಿಯಾ (Skoda Octavia) ಕಾರಿನ ಫೇಸ್‌ಲಿಫ್ಟ್ ಅನ್ನು ಜಾಗತಿಕ ಮಾರುಕಟ್ಟೆಗೆ ಅತಿ ಶೀಘ್ರದಲ್ಲಿಯೇ ಪರಿಚಯಿಸಲಿದೆ.
ಮಾಹಿತಿಗಳ ಪ್ರಕಾರ ಸ್ಕೋಡಾ ಕಂಪನಿಯು ತನ್ನ ಓಕ್ಟಾವಿಯಾ ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ತಿಳಿದು ಬಂದಿದೆ. ಸುದ್ದಿಯನ್ನು ತಿಳಿದ ಸ್ಕೋಡಾ ಅಭಿಮಾನಿಗಳು ಈಗಾಗಲೇ ಕುತೂಹಲದಿಂದ ಕಾಯಲು ಆರಂಭಿಸಿದ್ದು, ಹೊಸ ಕಾರು ಹೇಗಿರಲಿದೆ ಎಂದು ತಿಳಿಯಲು ಮುಂದಿನ ತಿಂಗಳವರೆಗೂ ಕಾಯಲೇಬೇಕಾಗಿದೆ ಎಂಬುದು ವಾಸ್ತವ.

ಈ ಕುರಿತಾಗಿ ಸ್ಕೋಡಾ ಈಗಾಗಲೇ ತನ್ನ ಯ್ಯೂಟ್ಯೂಬ್‌ನಲ್ಲಿ ಟೀಸರ್ ಒಂದನ್ನು ಹರಿಬಿಟ್ಟಿದ್ದು, ಓಕ್ಟಾವಿಯಾ ಈ ಹಿಂದಿಗಿಂತಲೂ ಅಗ್ರೆಸಿವ್ ಲುಕ್ ಹೊಂದಿರಲಿದೆ ಎಂದು ಆ ಟೀಸರ್ ವೀಕ್ಷಿಸಿದ ಕಾರು ಪ್ರೀಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು 2019 ರಲ್ಲಿ ಈ ಮಿಡ್ ಸೈಜ್ ಎಸ್‌ಯುವಿಯು ನಾಲ್ಕನೇ ತಲೆಮಾರು ಗ್ಲೋಬಲ್ ಡಿಬಟ್ ಮಾಡಿದ ನಂತರ ಈ ಕಾರಿಗೆ ಸಿಗುತ್ತಿರುವ ಮೇಜರ್ ಅಪ್‌ಡೇಟ್ ಇದಾಗಿದೆ.
ಇನ್ನು ನಾಲ್ಕನೇ ತಲೆಮಾರಿನ ಈ ಕಾರು ಕಳೆದ ವರ್ಷವಷ್ಟೇ ಭಾರತೀಯ ಮಾರುಕಟ್ಟೆಯಿಂದ ಹೊರನಡೆದಿತ್ತು. ಅಂದಿನಿಂದ ಇಂದಿನವರೆಗೂ ಸ್ಕೋಡಾ ಪ್ರೇಮಿಗಳು ಈ ಕಾರಿನ ಮರಳುವಿಕೆಗಾಗಿ ಕಾಯುತ್ತಲೇ ಇದ್ದರು. ಹಲವರು ಭಾರತೀಯ ಮಾರುಕಟ್ಟೆಯಿಂದ ಈ ಕಾರು ಮರೆಯಾಗಿದ್ದಕ್ಕೆ ಬೇಸರವನ್ನೂ ಸಹ ವ್ಯಕ್ತಪಡಿಸಿದ್ದರು. ಆದರೆ ಮತ್ತೆ ಈ ಓಕ್ಟಾವಿಯಾ ಕಾರು ರೀ ಲಾಂಚ್ ಆಗಲಿದೆ ಎಂಬ ವಿಷಯ ಹಲವರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ.
ಇನ್ನು ವಿಡಿಯೋವನ್ನು ಗಮನಿಸಿದರೆ ಕಪ್ಪು ಬಟ್ಟೆಯಲ್ಲಿ ಮುಚ್ಚಿದ ಕಾರನ್ನು ಆನ್ ಮಾಡಿ ಅದರ ಡಿಆರ್‌ಎಲ್‌ಗಳು ಮಾತ್ರ ಕಾಣುವಂತೆ ವಿಡಿಯೋವನ್ನು ಮಾಡಲಾಗಿದ್ದು ಈ ಚಿತ್ರಗಳು ಕಾರು ಪ್ರೇಮಿಗಳಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ. ಹೊಸ ಎಲ್‌ಇಡಿ ಹೆಡ್‌ಲೈಟ್‌ಗಳು ಈ ಕಾರಿಗೆ ಬರಲಿದೆ ಎಂಬುದು ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ಗಳಿಂದ ತಿಳಿದು ಬಂದಿದ್ದು ಕಾರು ಯಾವ ರೀತಿ ಕಾಣಿಸಲಿದೆ ಎಂಬ ಕುತೂಹಲವೇ ಎಲ್ಲರಲ್ಲೂ ಮೂಡಿದೆ.
ಇನ್ನು 2002ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಂಡಿದ್ದ ಆಕ್ಟೀವಿಯಾ ಕಾರು ತನ್ನ ವಿನೂತನ ವೈಶಿಷ್ಟ್ಯತೆ ಮತ್ತು ಪರ್ಫಾಮೆನ್ಸ್ ಮೂಲಕ ಜನಪ್ರಿಯತೆ ಕಾಯ್ದುಕೊಂಡಿದ್ದು, ಆಕ್ಟೀವಿಯಾದ ಎರಡನೇ ತಲೆಮಾರಿನ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಲಾರಾ ಹೆಸರಿನಲ್ಲಿ ಬಿಡುಗಡೆ ಮಾಡಿದಾಗಲೂ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿತ್ತು.
ಕಳೆದ ತಲೆಮಾರಿನ ಸ್ಕೋಟಾ ಆಕ್ಟಾವಿಯಾ ಕುರಿತಾಗಿ ನೋಡುವುದಾದರೆ, ಸಾಕಷ್ಟು ಪ್ರಮಾಣದಲ್ಲಿ ಲೆದರ್ ಹಾಗೂ ಅಲ್ಕಾಂಟರಾ ಹೊಂದಿದ್ದ, ಡ್ಯುಯಲ್ ಟೋನ್ ಬಣ್ಣದ ಡ್ಯಾಶ್‌ಬೋರ್ಡ್, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸರ್ಪೊಟ್ ಮಾಡುವ ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಟ್, ಟೂ-ಸ್ಪೀಕ್ ಸ್ಟೀಯರಿಂಗ್ ವ್ಹೀಲ್ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, 10.25 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿತ್ತು.
ಕಳೆದ ತಲೆಮಾರಿನ ಓಕ್ಟಾವಿಯಾ ಕಾರಿನಲ್ಲಿ ಸುರಕ್ಷತೆಗಾಗಿ ಫ್ರಂಟ್ ಹಾಗೂ ರೇರ್ ಏರ್‌ಬ್ಯಾಗ್, ಡ್ರೈವರ್ ಹಾಗೂ ಫ್ರಂಟ್ ಪ್ಯಾಸೆಂಜರ್ ಏರ್‌ಬ್ಯಾಗ್, ಕರ್ಟೇನ್ ಏರ್‌ಬ್ಯಾಗ್ ಸೇರಿದಂತೆ ಎಂಟು ಏರ್‌ಬ್ಯಾಗ್‌ಗಳನ್ನು ನೀಡಲಾಗಿತ್ತು. ಇದರ ಜೊತೆಗೆ ಎಬಿಎಸ್, ಇಬಿಡಿ, ಪಾರ್ಕ್ ಅಸಿಸ್ಟ್, ಇಬುಜ್ ಫ್ಯಾಟಿಗ್ ಅಲರ್ಟ್, ಮಲ್ಟಿ-ಕೊಲಿಷನ್ ಬ್ರೇಕ್ ಸೇರಿದಂತೆ ಹಲವಾರು ಫೀಚರ್'ಗಳನ್ನು ಸಹ ಈ ಕಾರಿನಲ್ಲಿ ನೀಡಲಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








