ಮೊದಲ 'ಮಹೀಂದ್ರಾ ಥಾರ್ ರಾಕ್ಸ್'ನ್ನು ಗಾಬರಿ ಹುಟ್ಟಿಸುವ ಬೆಲೆಗೆ ಹರಾಜಿನಲ್ಲಿ ಖರೀದಿಸಿದ್ದು ಇವರೇ..!

ಮಹೀಂದ್ರಾ & ಮಹೀಂದ್ರಾ (Mahindra & Mahindra), ಆಗಸ್ಟ್ 14ರ ತಡರಾತ್ರಿ 5-ಡೋರ್ ಆಯ್ಕೆಯಲ್ಲಿ ನೂತನ ಥಾರ್ ರಾಕ್ಸ್ (Thar Roxx) ಆಫ್-ರೋಡ್ ಎಸ್‌ಯುವಿಯನ್ನು ಮಾರಾಟಕ್ಕೆ ತರುವುದರೊಂದಿಗೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದೇ ಅಕ್ಟೋಬರ್ 3ರ ಬೆಳಗ್ಗೆ 11 ಗಂಟೆಗೆ ಥಾರ್ ರಾಕ್ಸ್‌ಗಾಗಿ ಬುಕ್ಕಿಂಗ್ ಪಡೆಯುವುದನ್ನು ಕಂಪನಿಯು ಆರಂಭಿಸಿತ್ತು. ಖರೀದಿದಾರರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿ, ಕೇವಲ 60 ನಿಮಿಷಗಳಲ್ಲಿ 1.76 ಲಕ್ಷ ಥಾರ್ ರಾಕ್ಸ್‌ ಎಸ್‌ಯುವಿಗಳನ್ನು ಆರ್ಡರ್ ಮಾಡಿದ್ದರು.

ಈ ಹಿಂದೆ (ಸೆ.15 ರಿಂದ 16) ಹೊಚ್ಚ ಹೊಸ ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಎಸ್‌ಯುವಿಯ ಮೊದಲ ಯುನಿಟ್‌ನ್ನು ಮಾರಾಟಗೊಳಿಸಲು ಕಂಪನಿಯು ಹರಾಜು ನಡೆಸಿತ್ತು. 'ವಿಐಎನ್ 0001' ಸರಣಿ ಸಂಖ್ಯೆ (ಸೀರಿಯಲ್ ನಂಬರ್) ಹೊಂದಿದ್ದ ಥಾರ್ ರಾಕ್ಸ್ ಸರಿ ಸುಮಾರು ರೂ.1.31 ಕೋಟಿಗೆ ಬಿಕಾರಿಯಾಗಿತ್ತು. ಸದ್ಯ, ಈ ಎಸ್‌ಯುವಿ ಯಾರ ಮನೆ ಸೇರಿದೆ ಎಂಬುದನ್ನು ಘೋಷಣೆ ಮಾಡಲಾಗಿದೆ.

First Mahindra Thar Roxx For Rs 1 31 Crore This Person Bought Details

ಮಿಂಡಾ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಉನ್ನತ ಹುದ್ದೆಯಲ್ಲಿರುವ ಆಕಾಶ್ ಮಿಂಡಾ, ಹೊಸ ಮಹೀಂದ್ರಾ ಥಾರ್ ರಾಕ್ಸ್‌ನ್ನು ಹರಾಜಿನಲ್ಲಿ ಗೆದ್ದಿದ್ದಾರೆ. ಈ ಎಸ್‌ಯುವಿಯನ್ನು ಮಹೀಂದ್ರಾ ಕಂಪನಿಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಮಂಜರಿ ಉಪಾಧ್ಯೆ, ಆಕಾಶ್ ಮಿಂಡಾಗೆ ಹಸ್ತಾಂತರಿಸಿದ್ದಾರೆ. ರೂ.25 ಲಕ್ಷ ಮೂಲ ಬೆಲೆ ಹೊಂದಿದ್ದ ನೆಬ್ಯುಲಾ ಬ್ಲೂ (ಕಡು ನೀಲಿ) ಬಣ್ಣದ ಥಾರ್ ರಾಕ್ಸ್‌ನ ಗರಿಷ್ಠ ಶ್ರೇಣಿ ರೂಪಾಂತರವಾಗಿರುವ 'ಎಎಕ್ಸ್7 ಎಲ್'ನ್ನು 4 ಪಟ್ಟು ಅಧಿಕ ಮೊತ್ತಕ್ಕೆ ಆಕಾಶ್ ಹರಾಜು ಕೂಗಿದ್ದರು.

ಈ ಮೊದಲೇ ಮಹೀಂದ್ರಾ ಕಂಪನಿ ಘೋಷಣೆ ಮಾಡಿದಂತೆ ಹರಾಜಿನಲ್ಲಿ ಬಂದ ಅಷ್ಟು ಹಣವನ್ನು ವಿಜೇತ ವ್ಯಕ್ತಿ ಬಯಸಿದ ಎನ್‌ಜಿಒಗೆ ದೇಣಿಗೆ ನೀಡಲು ತೀರ್ಮಾನಿಸಲಾಗಿದೆ. ಅದರಂತೆ ನಾಂದಿ ಫೌಂಡೇಶನ್‌ಗೆ ರೂ.1.31 ಕೋಟಿಯನ್ನು ಕೊಡಲಾಗುತ್ತದೆ. ಹೆಚ್ಚುವರಿಯಾಗಿ ಇಷ್ಟೇ ಮೊತ್ತವನ್ನು ದೇಣಿಗೆ ನೀಡಲು ಮಹೀಂದ್ರಾ ಕೂಡ ನಿರ್ಧಾರ ಮಾಡಿದೆ.

First Mahindra Thar Roxx For Rs 1 31 Crore This Person Bought Details

2020ರಲ್ಲಿ 3-ಡೋರ್‌ ಆಯ್ಕೆಯ ಮಹೀಂದ್ರಾ ಥಾರ್ (3-Door Mahindra Thar) ಎಸ್‌ಯುವಿಯ ಮೊದಲ ಯುನಿಟ್‌ನ್ನು ಮಾರಾಟಗೊಳಿಸಲು ಸಹ ಕಂಪನಿಯು ಹರಾಜು ನಡೆಸಿತ್ತು. ಇದೇ ಆಕಾಶ್ ಮಿಂಡಾ, ರೂ.1.11 ಕೋಟಿ ಹರಾಜು ಕೂಗಿ, ನೂತನ ಕಾಪರ್ (ತಾಮ್ರ) ಬಣ್ಣದ 'ಥಾರ್'ನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು. ಈ ಹಣವನ್ನು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಲಾಗಿತ್ತು.

ದೇಶೀಯ ಗ್ರಾಹಕರ ಖರೀದಿಗೆ ಸಿಗುವ ನೂತನ ಮಹೀಂದ್ರಾ ಥಾರ್ ರಾಕ್ಸ್‌ ಎಸ್‌ಯುವಿ, ರೂ.12.99 ಲಕ್ಷದಿಂದ ರೂ.22.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 2.0-ಲೀಟರ್ 4-ಸಿಲಿಂಡರ್ ಟರ್ಬೊ ಪೆಟ್ರೋಲ್ ಮತ್ತು 2-ಲೀಟರ್ 4-ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಈ ಮಹೀಂದ್ರಾ ಥಾರ್ ರಾಕ್ಸ್‌ ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸ (ಡಿಸೈನ್) ಹೊಂದಿದೆ. ಉತ್ತಮವಾಗಿರುವ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಸರ್ಕ್ಯೂಲರ್ ಫಾಗ್ ಲೈಟ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. 10.25 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಸನ್‌ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 9, 2024, 12:56 [IST]
English summary
First mahindra thar roxx for rs 1 31 crore this person bought details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+