ಹೀರೋ 2 ಇನ್ 1... ಒಂದೇ ವಾಹನದಲ್ಲಿ ಆಟೋ-ಸ್ಕೂಟರ್... ಶೀಘ್ರದಲ್ಲೇ ಉತ್ಪಾದನೆ!

ಹೊಸ ವಾಹನ ವಿನ್ಯಾಸದೊಂದಿಗೆ ಇದೇ ವರ್ಷದ ಆರಂಭದಲ್ಲಿ ಸಖತ್ ಸದ್ದು ಮಾಡಿದ್ದ 'ಸರ್ಜ್ ಇವಿ' ಕಂಪನಿಯು ಇದೀಗ ತನ್ನ 2 ಇನ್ 1 ವಾಹನವಾದ ಹೀರೋ ಸರ್ಜ್ ಎಸ್ 32 (Hero Surge S32) ಉತ್ಪಾದನೆಗೆ ಸಜ್ಜಾಗಿದೆ ಎಂದು ವರದಿಯಾಗಿದೆ. ಸರ್ಜ್ ಇವಿಯು ಹೀರೋ ಕಂಪನಿಯ ಅಂಗಸಂಸ್ಥೆಯಾಗಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ಆಟೋವನ್ನು ಸಂಯೋಜಿಸುವ ಹೊಸ ಉತ್ಪನ್ನದ ತಯಾರಿಯಲ್ಲಿ ತೊಡಗಿದೆ. ಕಂಪನಿಯು ಈ ಹೊಸ ವಾಹನಕ್ಕೆ ಸರ್ಜ್ ಎಸ್ 32 ಎಂದು ಹೆರಿಟ್ಟಿದ್ದು, ಇದನ್ನು ಶೀಘ್ರದಲ್ಲೇ ಉತ್ಪಾದನೆ ಮಾಡಿ ಮಾರಾಟಕ್ಕೆ ತರಲು ಕಂಪನಿ ಸಜ್ಜಾಗಿದೆ ಎಂದು ವರದಿಯಾಗಿದೆ.

ವಿಶಿಷ್ಟವಾದ ಹೀರೋ ಸರ್ಜ್ ಎಸ್ 32 ವಾಹನವನ್ನು ಇದೇ ವರ್ಷದ ಆರಂಭದಲ್ಲಿ ಬಹಿರಂಗಪಡಿಸಲಾಗಿತ್ತು. ಹಲವು ತಿಂಗಳ ನಂತರ ಇದೀಗ ಹೀರೋ ಸರ್ಜ್ ಎಸ್ 32 ಮತ್ತೊಮ್ಮೆ ಸುದ್ದಿಯಾಗಿದೆ. ಹೌದು, ಕಂಪನಿಯು ಕೇವಲ ಒಂದು ವರ್ಷದೊಳಗೆ ಎಸ್ 32 ಉತ್ಪಾದನೆಯನ್ನು ಪ್ರಾರಂಭಿಸಲಿದೆ. ಮೂಲಗಳ ಪ್ರಕಾರ 2025 ರ ಮಧ್ಯಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

hero-surge-s32-2-in-1-electric-vehicle-launch-details

ವಿಶಿಷ್ಟವಾದ ಹೀರೋ ಸರ್ಜ್ ಎಸ್ 32 ವಾಹನವು ಎಲ್ಲಾ ರಸ್ತೆ ಪರಿಸ್ಥಿತಿಗಳಲ್ಲಿಯೂ ಓಡಿಸಬಹುದಾದ ವಾಹನವಾಗಿದೆ. ಇದನ್ನು ಕೇವಲ 3 ನಿಮಿಷಗಳಲ್ಲಿ ದ್ವಿಚಕ್ರ ವಾಹನದಿಂದ ತ್ರಿಚಕ್ರವಾಹನವಾಗಿ ಪರಿವರ್ತಿಸಬಹುದಾಗಿದೆ. ಈ ವಾಹನವನ್ನು ಬಳಸಿಕೊಂಡು ಗೂಡ್ಸ್‌ಗಳನ್ನು ಸರಬರಾಜು ಮಾಡುವುದು ಮಾತ್ರವಲ್ಲದೇ ಇಷ್ಟ ಬಂದಾಗ ಇದರಲ್ಲಿನ ಎಲೆಕ್ಟ್ರಿಕ್ ಸ್ಕೂಟರ್ ಹೊರ ತೆಗೆದು ನಮ್ಮ ಇಷ್ಟಕ್ಕೆ ಬಳಸಬಹುದಾಗಿದೆ.

ವಿವಿಧ ವೇರಿಯೆಂಟ್‌ಗಳು: ತ್ರಿಚಕ್ರ ಆಟೋ (S32 PV), ತ್ರಿಚಕ್ರ ಸರಕು ವಾಹನ (S32 LD), ತ್ರಿಚಕ್ರ ಕವರ್ಡ್ ಸರಕು ವಾಹನ (S32 HD) ಮತ್ತು ಫ್ಲಾಟ್-ಬೆಡ್ ತ್ರಿಚಕ್ರ ಸರಕು (S32 FB) ವಾಹನಗಳನ್ನು ಇದರಲ್ಲಿ ಆಯ್ಕೆಗಳಾಗಿ ನೀಡಲಾಗುವುದು. ಈ ಎಲ್ಲಾ ಆವೃತ್ತಿಗಳಲ್ಲಿಯೂ ಸ್ಕೂಟರ್ ಭಾಗವನ್ನು ಜೋಡಿಸಬಹುದು ಹಾಗೂ ಹೊರತೆಗೆಯಬಹುದು.

hero-surge-s32-2-in-1-electric-vehicle-launch-details

ಹೀರೋ ಸರ್ಜ್‌ ಎಸ್‌32 ವಾಹನದ ವೇಗವನ್ನು ಗಮನಿಸುವುದಾದರೆ, ದ್ವಿಚಕ್ರ ವಾಹನದ ಸಂಧರ್ಭದಲ್ಲಿ ಇದರ ವೇಗ ಕೊಂಚ ಅಧಿಕವಾಗಿರಲಿದ್ದು, ಇದು ಗಂಟೆಗೆ ಸುಮಾರು 60 ಕಿಮೀ ವೇಗದಲ್ಲಿ ಚಲಿಸುತ್ತದೆ. ಈ ವಾಹನ ಆಟೋ ರಿಕ್ಷಾ ಆಗಿರುವ ಸಂಧರ್ಭದಲ್ಲಿ ಪ್ರತಿ ಗಂಟೆಗೆ ಸುಮಾರು 50 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಹೇಳಲಾಗುತ್ತಿದೆ.

ಹೀರೋ ಸರ್ಜ್‌ ಎಸ್‌32 ವಾಹನದ ಪವರ್‌ ನೊಡುವುದಾದರೆ, ತ್ರಿಚಕ್ರ ವಾಹನ ಅಥವಾ ಆಟೋ ರಿಕ್ಷಾ ರೀತಿಯಲ್ಲಿ ಇದನ್ನು ಬಳಸುವುದಾದರೆ ಈ ವಾಹನ ಸುಮಾರು 13.4 ಬಿಹೆಚ್‌ಪಿ ಪವರ್‌ ಅನ್ನು ಉತ್ಪಾದಿಸುತ್ತದೆ. ಅದೇ ರೀತಿ ಸ್ಕೂಟರ್ ಆಗಿ ಬಳಸುವಾಗ ಸುಮಾರು 4 ಬಿಹೆಚ್ ಪವರ್‌ ಅನ್ನು ಉತ್ಪಾದಿಸುತ್ತದೆ ಎಂದು ಈ ಹಿಂದೆ ಬಹಿರಂಗಪಡಿಸಿದಾಗ ವರದಿಯಾಗಿತ್ತು.

hero-surge-s32-2-in-1-electric-vehicle-launch-details

ಸರ್ಜ್ ಎಸ್ 32 ಲ್ಯಾಡರ್-ಫ್ರೇಮ್ ಚಾಸಿಸ್ ಸುತ್ತಲೂ ನಿರ್ಮಿಸಲಾದ ಎಎಂಎಸ್ಇಪಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಕಂಪನಿಯು ಸುರಕ್ಷಿತ ಮತ್ತು ವಿಶ್ವಾಸಾರ್ಹ ಬ್ಯಾಟರಿ ಮತ್ತು ಪೂರ್ಣ - ಲೋಹದ ಬಾಡಿ ನಿರ್ಮಾಣದ ಭರವಸೆ ನೀಡಿದೆ. ಒಟ್ಟಾರೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ವಿಭಾಗದಲ್ಲಿ ಇದು ಹೊಸ ಅಲೆ ಎಬ್ಬಿಸಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, November 20, 2024, 16:29 [IST]
English summary
Hero surge s32 2 in 1 electric vehicle launch details
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+