ಟಾಟಾ ಪಂಚ್ ಬೆಲೆಗೆ ಪ್ರೀಮಿಯಂ ಸೆಡಾನ್: ಮಾರಾಟ ಹೆಚ್ಚಿಸಲು ಲಕ್ಷಕ್ಕೂ ಅಧಿಕ ರೂಗಳ ಡಿಸ್ಕೌಂಟ್!
ನಿಮಗೆಲ್ಲಾ ಗೊತ್ತಿರುವಂತೆ ಹೋಂಡಾ ಕಂಪನಿಯು ಭಾರತದಲ್ಲಿ ಮೂರೇ ಮೂರು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅವು ಯಾವುದು ಎಂದು ನೋಡುವುದಾರೆ, ಹೋಂಡಾ ಸಿಟಿ, ಹೋಂಡಾ ಎಲಿವೇಟ್ ಮತ್ತು ಹೋಂಡಾ ಅಮೇಜ್. ಇದರಲ್ಲಿ ಹೋಂಡಾ ಅಮೇಜ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ಕಂಪನಿಯು ಇನ್ನೇನು ಕೆಲವೇ ತಿಂಗಳಲ್ಲಿ ಭಾರತೀಯರ ಮುಂದೆ ಇಡಲಿದೆ. ಅದಕ್ಕಿಂತ ಮುಂಚಿತವಾಗಿ ಹೊಸ ಹೋಂಡಾ ಅಮೇಜ್ ಅನ್ನು ಖರೀದಿ ಮಾಡುವವರಿಗೆ ಕಂಪನಿ ಇದೀಗ ಭಾರೀ ಕೊಡುಗೆಯನ್ನು ನೀಡುತ್ತಿದೆ. ಹಾಗಾದರೆ ಇಂದಿನ ಈ ಲೇಖನದಲ್ಲಿ ನಾವು ಆ ಕೊಡುಗೆಗಳನ್ನು ನೋಡೋಣ.
ಸೂಚನೆ: ರಿಯಾಯಿತಿಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ ಮತ್ತು ಸ್ಟಾಕ್ ಲಭ್ಯತೆಗೆ ಒಳಪಟ್ಟಿರುತ್ತವೆ. ನಿಖರವಾದ ರಿಯಾಯಿತಿ ಅಂಕಿ ಅಂಶಕ್ಕಾಗಿ ದಯವಿಟ್ಟು ನಿಮ್ಮ ಸ್ಥಳೀಯ ವಿತರಕರನ್ನು ಸಂಪರ್ಕಿಸಿ. ಮಾಹಿತಿಗಳ ಪ್ರಕಾರ ಹೋಂಡಾ ಅಮೇಜ್ ಅನ್ನು ಖರೀದಿ ಮಾಡುವವರಿಗೆ ಕಂಪನಿ ಲಕ್ಷ ರೂಗಳ ವರೆಗೆ ಆಫರ್ ನೀಡುತ್ತಿದೆ ಎಂದು ತಿಳಿದು ಬಂದಿದೆ.

ಹೌದು, ಮೂಲಗಳ ಪ್ರಕಾರ ಹೊಸ ಹೋಂಡಾ ಅಮೇಜ್ ಖರೀದಿದಾರರಿಗೆ ಕಂಪನಿ ಸುಮಾರು ಒಂದು ಲಕ್ಷಕ್ಕೂ ಅಧಿಕ ರೂಗಳ ರಿಯಾಯಿತಿಯನ್ನು ನೀಡುತ್ತಿದೆ. ಕಂಪನಿಯು ತನ್ನ ಮಾದರಿಗಳಲ್ಲಿ ಮಾರಾಟವನ್ನು ಹೆಚ್ಚಿಸಲು ಆಕರ್ಷಕ ರಿಯಾಯಿತಿಗಳು ಮತ್ತು ಪ್ರಯೋಜನಗಳನ್ನು ನೀಡುವುದನ್ನು ಮುಂದುವರೆಸಿದೆ. ಜೂನ್ 2024 ರಂತೆಯೇ, ಈ ತಿಂಗಳ ಪ್ರಯೋಜನಗಳಲ್ಲಿ ನಗದು ರಿಯಾಯಿತಿಗಳು, ಎಕ್ಸ್‌ಚೇಂಜ್ ಬೋನಸ್‌ಗಳು ಇದರಲ್ಲಿ ಸೇರಿದೆ.
ಹೋಂಡಾ ಅಮೇಜ್ ಕಾರಿನ ಕುರಿತಾಗಿ ನೋಡುವುದಾದರೆ, Honda ಕಂಪನಿಯು 2013 ರಲ್ಲಿ ಮೊದಲ ಬಾರಿಗೆ ತನ್ನ Amaze ಕಾರ್ ಅನ್ನು ಬಿಡುಗಡೆಗೊಳಿಸಿತು. ಬಿಡುಗಡೆಯಾದ ನಂತರ ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ Maruti Suzuki Dzire, Ford Aspire ಕಾರುಗಳಿಗೆ ಪೈಪೋಟಿ ನೀಡುತ್ತಿತ್ತು. ಹಲವಾರು ಫೀಚರ್ ಗಳೊಂದಿಗೆ ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದ ಕಾರಣಕ್ಕೆ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಯಿತು.

ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಹೋಂಡಾ ಅಮೇಜ್‌ನ (Honda Amaze) ಡಿಸೈನ್‌ಗಳನ್ನು ನೋಡುವುದಾದರೆ, ಈ ಕಾರಿನಲ್ಲಿ ಎಲ್ಇಡಿ ಟರ್ನ್ ಸಿಗ್ನಲ್ ಇಂಡಿಕೇಟರ್ ಹೊಂದಿರುವ ಒಆರ್‌ವಿಎಂಗಳನ್ನು ನೀಡಲಾಗಿದೆ. ಈ ಮಿರರ್'ಗಳು ಎಲೆಕ್ಟ್ರಿಕ್ ಅಡ್ಜಸ್ಟಬಲ್ ಆಗಿದ್ದು ಫೋಲ್ಡ್ ಮಾಡಬಹುದು. ಕ್ರೋಮ್ ಬಣ್ಣದಲ್ಲಿರುವ ಡೋರ್ ಹ್ಯಾಂಡಲ್‌ಗಳು ಈ ಕಾರಿಗೆ ಪ್ರೀಮಿಯಂ ಅನುಭವವನ್ನು ನೀಡುತ್ತವೆ.
ಇನ್ನು ಈ ಕಾರಿನ ಹಿಂಭಾಗದಲ್ಲಿ ಸಿ ಶೇಪಿನಲ್ಲಿರುವ ಎಲ್ಇಡಿ ಟೇಲ್ ಲ್ಯಾಂಪ್, ಸಣ್ಣ ಬೂಟ್ ಲಿಪ್ ನೀಡಲಾಗಿದೆ. ರೇರ್ ಬಂಪರ್‌ನ ಕೆಳಭಾಗದಲ್ಲಿರುವ ಕ್ರೋಮ್ ಸ್ಟ್ರಿಪ್ ಈ ಕಾರಿನ ಪ್ರೀಮಿಯಂ ಲುಕ್ ಅನ್ನು ಹೆಚ್ಚಿಸುತ್ತದೆ. ಈ ಕಾರಿನ ಸೀಟುಗಳು, ಡೋರ್ ಹಾಗೂ ಡ್ಯಾಶ್ ಬೋರ್ಡ್ ಕೆಳಗಿನ ಭಾಗಗಳು ಬೀಜ್ ಬಣ್ಣವನ್ನು ಹೊಂದಿವೆ. ಇವುಗಳ ಮೇಲಿನ ಭಾಗ ಹಾಗೂ ಸೆಂಟರ್ ಕನ್ಸೋಲ್ ಕಪ್ಪು ಬಣ್ಣವನ್ನು ಹೊಂದಿವೆ.

ಈ ಕಾರಿನ ಎಂಜಿನ್ ನೋಡುವುದಾದೆ, ಮಾದರಿಯು 88 ಬಿಹೆಚ್‌ಪಿ ಪವರ್ ಹಾಗೂ 110 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ಡೀಸೆಲ್ ಮಾದರಿಯು 98.6 ಬಿಹೆಚ್‌ಪಿ ಪವರ್ ಹಾಗೂ 200 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಸಿವಿಟಿ ಹೊಂದಿರುವ ಮಾದರಿಯು 78.9 ಬಿಹೆಚ್‌ಪಿ ಪವರ್ ಹಾಗೂ 160 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








