ಮಾರುತಿ ಡಿಜೈರ್ ನಿದ್ದೆಗೆಡಿಸಲು ಬರುತ್ತಿದೆ ಲಕ್ಷುರಿ ಫೀಚರ್ಸ್‌ನ ಹೊಸ ಹೋಂಡಾ ಕಾರು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಮುಂಬರುವ ಮೂರನೇ ತಲೆಮಾರಿನ ಅಮೇಜ್ ಕಾರನ್ನು ಬಿಡುಗಡೆಗೊಳಿಸಲು ರೆಡಿಯಾಗಿದೆ. ಹೋಂಡಾ ಅಮೇಜ್ (Honda Amaze) ಮಾದರಿಯು ಡಿಸೆಂಬರ್ 4 ರಂದು ಬಿಡುಗಡೆಯಾಗಲಿದೆ. ಇದೀಗ ಹೋಂಡಾ ಕಂಪನಿಯು ಈ ಹೊಸ ಅಮೇಜ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಟೀಸರ್ ನಲ್ಲಿ ಈ ಹೊಸ ಅಮೇಜ್ ಕಾರಿನ ವಿನ್ಯಾಸ ಶೈಲಿಯನ್ನು ಬಹಿರಂಗಪಡಿಸಿದ್ದಾರೆ. ಮಾರುತಿ ಸುಜುಕಿ ಡಿಜೈರ್ ಮಾದರಿ ಕೂಡ ಹೊಸ ನವೀಕರಣಗಳೊಂದಿಗೆ ಈ ಅಮೇಜ್ ಕಾರಿಗೆ ಪ್ರಬಲ ಎದುರಾಳಿಯಾಗಿದೆ.

ಮಾರುತಿ ಡಿಜೈರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಮಾಡೆಲ್ ಆಗಿರುವುದರಿಂದ ಹೋಂಡಾ ಅಮೇಜ್ (Honda Amaze) ಮಾದರಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ದೊಡ್ಡ ಸವಾಲು ಇದೆ. ಹೋಂಡಾ ಅಮೇಜ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಅಮೇಜ್ ಮಾದರಿಗೆ ಸಿಟಿಯ ವಿನ್ಯಾಸ ಶೈಲಿಯನ್ನು ಹೊಂದಿರಲಿದೆ. ಮುಂಭಾಗದಲ್ಲಿ, ಹೊಸ ಅಮೇಜ್ ಮಧ್ಯದಲ್ಲಿ ಹೋಂಡಾ ಲೋಗೋದೊಂದಿಗೆ ದೊಡ್ಡ ಮತ್ತು ಅಗಲವಾದ ಗ್ರಿಲ್ ಅನ್ನು ಹೊಂದಿರುತ್ತದೆ.

Next-gen Honda Amaze

ಮೂರನೇ ತಲೆಮಾರಿನ ಹೋಂಡಾ ಅಮೇಜ್ ಹೊಸ ಟೀಸರ್ ನಲ್ಲಿ ಬಹಿರಂಗವಾದ ಮಾಹಿತಿಯಂತೆ. ಈ ಸೆಡಾನ್ ಹತ್ ಗ್ರಿಲ್, ಸ್ಲೀಕರ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಡಿಆರ್‌ಎಲ್‌ಗಳೊಂದಿಗೆ ಪರಿಷ್ಕೃತ ಫಾಸಿಕ, ಹೊಸ ಅಲಾಯ್ ವ್ಹೀಲ್ ಗಳು, ಬ್ಲೇಡ್ ಪ್ಯಾಟರ್ನ್‌ನೊಂದಿಗೆ ಸ್ಲೀಕರ್ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು ರಿವರ್ಕ್ ಮಾಡಿದ ರಿಯರ್ ಬಂಪರ್ ಅನ್ನು ಹೊಂದಿದ್ದು, ಇದು ಸ್ಪೋರ್ಟಿಯರ್ ಲುಕ್ ಅನ್ನು ನೀಡಿದೆ.

ವರದಿಗಳ ಪ್ರಕಾರ, ಮುಂಬರುವ ಮೂರನೇ ತಲೆಮಾರಿನ ಹೋಂಡಾ ಅಮೇಜ್ ಸಿಟಿ ಮತ್ತು ಎಲಿವೇಟ್ ಮಾದರಿಗಳಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ. ಆದರೂ ಕೆಲವು ಮಾರ್ಪಾಡುಗಳೊಂದಿಗೆ, ಗಮನಾರ್ಹವಾಗಿ ಕಡಿಮೆ ವೀಲ್‌ಬೇಸ್ ಅನ್ನು ಹೊಂದಿರುತ್ತದೆ. ಈ ಪ್ಲಾಟ್‌ಫಾರ್ಮ್ ಹೋಂಡಾ ತನ್ನ ಭಾರತದ ಸರಣಿಯಲ್ಲಿ ಎರಡು ಪ್ಲಾಟ್‌ಫಾರ್ಮ್‌ಗಳಿಂದ ಒಂದಕ್ಕೆ ಸುವ್ಯವಸ್ಥಿತಗೊಳಿಸಲು ಸಹಾಯವಾಗಲಿದೆ.

Next-gen Honda Amaze

ಹೋಂಡಾ ಭಾರತದಲ್ಲಿ ಡೀಸೆಲ್ ಎಂಜಿನ್‌ಗಳನ್ನು ಸ್ಥಗಿತಗೊಳಿಸುವುದರೊಂದಿಗೆ, ಹೊಸ ಅಮೇಜ್ ಪ್ರಸ್ತುತ ಮಾದರಿಯಂತೆಯೇ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರ ನೀಡುತ್ತದೆ. ಹೋಂಡಾ ಅಮೇಜ್ ಕಾರು 2013ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಮಾದರಿಯಾಗಿದೆ. ಈ ಹೋಂಡಾ ಅಮೇಜ್ ಸಬ್ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಉತ್ತಮ ಮಾರಾಟಗಾರರಲ್ಲಿ ಒಂದಾಗಿದೆ. ಮುಂಬರುವ ಮೂರನೇ ತಲೆಮಾರಿನ ಅಮೇಜ್ ಕಾರಿನಲ್ಲಿ ಬೋಲ್ಡ್ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

ಹೊಸ ಹೋಂಡಾ ಅಮೇಜ್ ಕಾರಿನಲ್ಲಿ 1.2-ಲೀಟರ್, ನಾಲ್ಕು-ಸಿಲಿಂಡರ್, ನ್ಯಾಚುರಲ್ ನಾಲ್ಕು-ಸಿಲಿಂಡರ್, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಉಳಿಸಿಕೊಳ್ಳಬಹುದು. ಈ ಎಂಜಿನ್ 89 bhp ಮತ್ತು 110 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಹೊಸ ಹೋಂಡಾ ಅಮೇಜ್ ಬಗ್ಗೆ ಹೆಚ್ಚು ಬಹಿರಂಗಪಡಿಸಲಾಗಿಲ್ಲವಾದರೂ, ಈ ಸೆಡಾನ್ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

Next-gen Honda Amaze

ಹೊಸ ಅಮೇಜ್ ಕಾರಿನಲ್ಲಿ ಸುರಕ್ಷತೆಗಾಗಿ ಇಬಿಡಿ, ISOFIX ಚೈಲ್ಡ್ ಸೀಟ್ ಆಂಕರ್‌ಗಳೊಂದಿಗೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸೀಟ್-ಬೆಲ್ಟ್ ರಿಮೈಂಡರ್ ಗಳನ್ನು ಹೊಂದಿರಲಿದೆ. ಹೋಂಡಾ ಭಾರತದಲ್ಲಿ ಡೀಸೆಲ್ ಎಂಜಿನ್‌ಗಳನ್ನು ಸ್ಥಗಿತಗೊಳಿಸುವುದರೊಂದಿಗೆ, ಹೊಸ ಅಮೇಜ್ ಪ್ರಸ್ತುತ ಮಾದರಿಯಂತೆಯೇ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 3, 2024, 16:01 [IST]
English summary
Honda amaze next gen teaser launch variants features powertrain details
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+