ಹೋಂಡಾ ಕಾರುಗಳ ಅಬ್ಬರ: ಕಳೆದ ತಿಂಗಳ ಮಾರಾಟದಲ್ಲಿ ಭಾರೀ ಏರಿಕೆ
ಹೋಂಡಾ ಕಾರ್ಸ್ ಇಂಡಿಯಾ (Honda Cars India) ಕಂಪನಿಯು 2024ರ ಫೆಬ್ರವರಿ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ಕಾರು ಮಾರಾಟದ ವರದಿಯ ಪ್ರಕಾರ, ಕಳೆದ ತಿಂಗಳಿನಲ್ಲಿ ಹೋಂಡಾ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 7,142 ಯುನಿಟ್‌ಗಳನ್ನು ಮಾರಾಟ ಮಾಡಿದೆ ಎಂದು ಘೋಷಿಸಿದೆ.
ಕಳೆದ ತಿಂಗಳ ಕಾರು ಮಾರಾಟವನ್ನು 2023ರ ಫೆಬ್ರವರಿ ತಿಂಗಳಿನ ಮಾರಾಟದ ಅಂಕಿಅಂಶಗಳಿಗೆ ಹೋಲಿಸಿದರೆ ಶೇಕಡಾ 17 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಹೋಂಡಾ ಕಾರ್ಸ್ ಇಂಡಿಯಾದ ರಫ್ತು ಸಂಖ್ಯೆಗಳು 5,936 ಯುನಿಟ್‌ಗಳಾಗಿವೆ. ಇದು ಕಂಪನಿಯು 510 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ಗರಿಷ್ಠ ಮಾಸಿಕ ರಫ್ತು ಪ್ರಮಾಣವಾಗಿದೆ. ಕಳೆದ ತಿಂಗಳ ಮಾರಾಟದಲ್ಲಿ ಎಲಿವೇಟ್ ಮತ್ತು ಸಿಟಿ ಕಾರುಗಳು ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಿದೆ.

ಕಳೆದ ತಿಂಗಳ ಕಾರು ಮಾರಾಟದ ಬಗ್ಗೆ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಮಾರಾಟದ ನಿರ್ದೇಶಕರಾದ ಯುಚಿ ಮುರಾಟಾ ಮಾತನಾಡಿ, ಫೆಬ್ರವರಿಯಲ್ಲಿ ನಮ್ಮ ಪರ್ಫಾಮೆನ್ಸ್ ನಮ್ಮ ಯೋಜನೆಯಂತೆಯೇ ಇದೆ. ಹೋಂಡಾ ಎಲಿವೇಟ್ ತನ್ನ ದೃಢವಾದ ಪರ್ಫಾಮೆನ್ಸ್ ಅನ್ನು ಕಾಯ್ದುಕೊಂಡು, ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತದೆ,
ಹೋಂಡಾ ಸಿಟಿ ಮತ್ತು ಅಮೇಜ್ ಸಹ ತಮ್ಮ ತಮ್ಮ ವಿಭಾಗಗಳಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿದೆ. ಜೊತೆಗೆ, ನಮ್ಮ ರಫ್ತು ಕಾರ್ಯಕ್ಷಮತೆಯೂ ಉತ್ತಮವಾಗಿದೆ ಎಂದು ಹೇಳಿದರು. ಹೋಂಡಾ ಕಂಪನಿಯು ಪ್ರಸ್ತುತ ಸಿಟಿ ಮತ್ತು ಎಲಿವೇಟ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಎಲಿವೇಟ್‌ನ ಎಲೆಕ್ಟ್ರಿಕ್ ಆವೃತ್ತಿಯು ಮುಂದಿನ ಎರಡು ವರ್ಷಗಳಲ್ಲಿ ಆಗಮಿಸುವ ನಿರೀಕ್ಷೆಯಿದೆ.

ಸದ್ಯ ಎಲಿವೇಟ್ ಎಸ್‌ಯುವಿಯನ್ನು 1.5-ಲೀಟರ್, ಡಿಒಹೆಚ್‌ಸಿ, 4-ಸಿಲಿಂಡರ್, ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಮಾರಾಟ ಮಾಡುತ್ತಿದೆ. ಈ ಎಂಜಿನ್ 5ನೇ ತಲೆಮಾರಿನ ಹೋಂಡಾ ಸಿಟಿಯಲ್ಲಿ ಲಭ್ಯವಿದೆ. ಹೋಂಡಾ ಎಲಿವೇಟ್ ಎಸ್‍ಯುವಿ ಈ ಎಂಜಿನ್ 6,600rpm ನಲ್ಲಿ 119.4 bhp ಪವರ್ ಮತ್ತು 4,300rpm ನಲ್ಲಿ 145 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೋಂಡಾ ಎಲಿವೇಟ್ ಎಸ್‌ಯುವಿಯಲ್ಲಿ ಈ 1.5-ಲೀಟರ್ ಎಂಜಿನ್ ಹೊಂದಿರುವ ಟ್ರಾನ್ಸ್‌ಮಿಷನ್ ಆಯ್ಕೆಗಳು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು ಸಿವಿಟಿ ಗೇರ್‌ಬಾಕ್ಸ್ ಅನ್ನು ಒಳಗೊಂಡಿವೆ. ಹೋಂಡಾ ಪ್ರಕಾರ, ಹೋಂಡಾ ಎಲಿವೇಟ್ ಎಸ್‍ಯುವಿ ಮ್ಯಾನುವಲ್ ರೂಪಾಂತರವು 15.31 ಕಿ.ಮೀ ಮೈಲೇಜ್ ನೀಡಿದರೆ, CVT ರೂಪಾಂತರವು 16.92 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಈ ಹೋಂಡಾ ಎಲಿವೇಟ್ ಎಸ್‍ಯುವಿಯನ್ನು ಹೋಂಡಾ ಆರ್&ಡಿ ಏಷ್ಯಾ ಪೆಸಿಫಿಕ್, ಥೈಲ್ಯಾಂಡ್ ಅಭಿವೃದ್ಧಿಪಡಿಸಿದೆ. ಈ ಎಸ್‍ಯುವಿಯು ಅತ್ಯಾಧುನಿಕ ಸೌಕರ್ಯ ಮತ್ತು ತಂತ್ರಜ್ಞಾನದ ಜೊತೆಗೆ ಸ್ಥಿತಿ ಮತ್ತು ಹೆಚ್ಚು ವಿಶೇಷವಾದ ಖರೀದಿದಾರರನ್ನು ಆಕರ್ಷಿಸಿಸುವಂತೆ ವಿನ್ಯಾಸಗೊಳಿಸಿದೆ. ಹೊಸ ಎಸ್‍ಯುವಿ ಮಾದರಿಯ ವಿನ್ಯಾಸವು ನ್ಯೂ ಜನರೇಷನ್ CR-V ಮತ್ತು WR-V ಎಸ್‍ಯುವಿಗಳಿಂದ ಸ್ಫೂರ್ತಿ ಪಡೆದುಕೊಂಡಿದೆ.
ಹೋಂಡಾ ಕಂಪನಿಯು ತನ್ನ ಅಮೇಜ್ ಕಾರನ್ನು ಈ ವರ್ಷದ ದೀಪಾವಳಿ ಹಬ್ಬದ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಹೋಂಡಾ ಅಮೇಜ್ ಅನ್ನು ಸಿಟಿ ಮತ್ತು ಎಲಿವೇಟ್ ಮಿಡ್ ಸೈಜ್ ಎಸ್‍ಯುವಿಗೆ ಆಧಾರವಾಗಿರುವ ಅದೇ ಫ್ಲಾಟ್ ಫಾರ್ಮ್ ನಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್ ಅನ್ನು ಸಬ್ -4 ಮೀಟರ್ ಕಾರಿಗೆ ಅಳವಡಿಸಲು ಮಾರ್ಪಡಿಸಲಾಗುತ್ತದೆ. ಹೊಸ ಅಮೇಜ್ ಮಾದರಿಯು ಸಿಟಿ ಸೆಡಾನ್ ಗಿಂತ 2600mm ಕಡಿಮೆ ವೀಲ್‌ಬೇಸ್ ಅನ್ನು ಹೊಂದಿರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








