ಹ್ಯುಂಡೈನ ಬೆಸ್ಟ್‌ 7-ಸೀಟರ್ ಕಾರು: ಸನ್‌ರೂಫ್, 6-ಏರ್‌ಬ್ಯಾಗ್, ಡೀಸೆಲ್ ಎಂಜಿನ್ ಆಯ್ಕೆ!

ಭಾರತದಲ್ಲಿ 7-ಸಿಟರ್ ಫ್ಯಾಮಿಲಿ ಕಾರುಗಳಿಗೆ ಭಾರೀ ಬೇಡಿಕೆ ಇದೆ, ಈ ವಿಭಾಗದಲ್ಲಿ ಹಲವು ಮಾದರಿಗಳಿದ್ದರೂ ಕೆಲವು ಮಾತ್ರ ಉತ್ತಮ ಬೇಡಿಕೆಯೊಂದಿಗೆ ಮುಂದುವರಿಯುತ್ತಿವೆ. ಇದಕ್ಕೆ ಕಾರಣವೆಂದರೆ ಗ್ರಾಹಕರು ಮೈಲೇಜ್ ಸೇರಿದಂತೆ ಫೀಚರ್ಸ್, ಬೆಲೆ, ಪರ್ಫಾಮೆನ್ಸ್ ವಿಷಯದಲ್ಲಿ ರಾಜಿಯಾಗಲು ಬಯಸುವುದಿಲ್ಲ. ಇವೆಲ್ಲವನ್ನೂ ಒಳಗೊಂಡ ಕಾರುಗಳಲ್ಲಿ ಹ್ಯುಂಡೈ ಅಲ್ಕಜಾರ್ ಕೂಡ ಒಂದು, ಈ ಕಾರು ಪ್ರಸ್ತುತ ಹ್ಯುಂಡೈ ನೀಡುವ ಬೆಸ್ಟ್‌ 7-ಸೀಟರ್ ಆಗಿದೆ. ಆದ್ರೆ ಈ ಕಾರಿನ ಬಗ್ಗೆ ವಿವರವಾದ ಮಾಹಿತಿಯಿಲ್ಲದೆ ಹಲವರಿಗೆ ಇದರ ಬಗ್ಗೆ ತಿಳಿದೇ ಇಲ್ಲ. ಹಾಗಾದ್ರೆ ಬನ್ನಿ ಹ್ಯುಂಡೈ ಅಲ್ಕಜಾರ್ ಬೆಲೆ, ಫೀಚರ್ಸ್ ಕುರಿತು ಪ್ರಮುಖ ವಿಷಯಗಳನ್ನು ನೋಡೋಣ.

ಹ್ಯುಂಡೈ ಅಲ್ಕಾಜರ್ ಅನ್ನು 6 ಮತ್ತು 7-ಸೀಟರ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಎರಡು ಎಂಜಿನ್ ಆಯ್ಕೆಗಳೊಂದಿಗೆ ಸಿಗುವ ಈ ಕಾರು, 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 160 ಪಿಎಸ್ ಪವರ್ ಮತ್ತು 253 ಎನ್ಎಂ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡಿಸಿಟಿನೊಂದಿಗೆ ಸಿಗುತ್ತದೆ.

hyundai-alcazar-price-features-engine-details

ಮತ್ತೊಂದು ಎಂಜಿನ್ ಆಯ್ಕೆಯಲ್ಲಿ 1.5-ಲೀಟರ್ ಡೀಸೆಲ್ ಇದ್ದು, ಇದು 116 ಪಿಎಸ್ ಪವರ್ 250 ಎನ್ಎಂ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಸಿಗುತ್ತದೆ. ಈ ಎರಡೂ ಎಂಜಿನ್‌ಗಳು ಈಗ ಸ್ಟಾರ್ಟ್/ಸ್ಟಾಪ್ ಫಂಕ್ಷನ್‌ನೊಂದಿಗೆ ಬರುತ್ತವೆ. ಹಾಗೆಯೇ ಇಕೋ, ಕಂಫರ್ಟ್ ಮತ್ತು ಸ್ಪೋರ್ಟ್‌ನಂತಹ ಮೂರು ಡ್ರೈವ್ ಮೋಡ್‌ಗಳು ಮತ್ತು ಸ್ನೋ, ಸ್ಯಾಂಡ್ ಮತ್ತು ಮಡ್‌ನಂತಹ ಟ್ರಾಕ್ಷನ್ ಮೋಡ್‌ಗಳನ್ನು ಹೊಂದಿದೆ.

ವೈಶಿಷ್ಟ್ಯಗಳು: ಹ್ಯುಂಡೈ ಅಲ್ಕಜಾರ್‌ನಲ್ಲಿ ಡ್ಯುಯಲ್ 10.25-ಇಂಚಿನ ಡಿಸ್ಪ್ಲೇಗಳು (ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್), ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್ ಅಲ್ಕಾಜಾರ್‌ನ ಪ್ರಮುಖ ವೈಶಿಷ್ಟ್ಯಗಳಾಗಿವೆ. ಇತರ ವೈಶಿಷ್ಟ್ಯಗಳಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ವಾಯಿಸ್ ಕಂಟ್ರೋಲ್ ಸನ್‌ರೂಫ್ ಮತ್ತು ಡ್ಯುಯಲ್ ಕ್ಯಾಮೆರಾ ಡ್ಯಾಶ್ ಕ್ಯಾಮ್ ಸೆಟಪ್ ಇವೆ.

hyundai-alcazar-price-features-engine-details

ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್, ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಐಎಸ್‌ಒ ಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳನ್ನು ಒಳಗೊಂಡಿದೆ. ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360 ಡಿಗ್ರಿ ಕ್ಯಾಮೆರಾ ಸೇರಿವೆ.

ವೇರಿಯೆಂಟ್‌ಗಳು: ಅಲ್ಕಜಾರ್ ಒಟ್ಟು ಎಂಟು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಅವುಗಳನ್ನು ನೋಡುವುದಾದ್ರೆ ಪ್ರೆಸ್ಟೀಜ್, ಪ್ರೆಸ್ಟೀಜ್ (ಒ), ಪ್ಲಾಟಿನಂ, ಪ್ಲಾಟಿನಂ ಅಡ್ವೆಂಚರ್, ಪ್ಲಾಟಿನಂ (ಒ), ಸಿಗ್ನೇಚರ್, ಸಿಗ್ನೇಚರ್ (ಒ) ಮತ್ತು ಸಿಗ್ನೇಚರ್ (ಒ) ಅಡ್ವೆಂಚರ್ ಆಗಿವೆ. ಹ್ಯುಂಡೈ ಅಲ್ಕಜಾರ್ ಕಾರು ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮತ್ತು ಮಹೀಂದ್ರಾ ಎಕ್ಸ್‌ಯುವಿ 700 ಕಾರುಗಳಿಗೆ ಪೈಪೋಟಿ ನೀಡುತ್ತದೆ.

hyundai-alcazar-price-features-engine-details

ಬೆಲೆ: ಹ್ಯುಂಡೈ ಅಲ್ಕಾಜಾರ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.16.78 ಲಕ್ಷದಿಂದ ರೂ.21.28 ಲಕ್ಷಗಳಾಗಿದೆ. ಇದು ಪ್ರಸ್ತುತ ಮಾರಾಟದಲ್ಲಿರುವ ಮಾದರಿಯ ಬೆಲೆಗಳಾಗಿದ್ದು, ಹ್ಯುಂಡೈ ಕಂಪನಿಯು ಅಲ್ಕಜಾರ್ ಫೇಸ್‌ಲಿಫ್ಟ್ ಅನ್ನು ಕೂಡ ಬಿಡುಗಡೆ ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ 2024ರ ದ್ವಿತಿಯಾರ್ಧದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜುಗೊಳಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 7, 2024, 13:24 [IST]
English summary
Hyundai alcazar price features engine details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+