ಬೈಕ್‌ನಂತೆ ಮೈಲೇಜ್..! ಡುಯಲ್-ಸಿಎನ್‌ಜಿ ಎಂಜಿನ್‌ನೊಂದಿಗೆ 'ಹ್ಯುಂಡೈ ಔರಾ' ಕಾರು ಬಿಡುಗಡೆ, 7.49 ಲಕ್ಷ.. 5 ಸೀಟರ್
ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳುತ್ತಿದ್ದಾರೆ. ಕಂಪನಿಯು ಮಂಗಳವಾರ ಡುಯಲ್-ಸಿಎನ್‌ಜಿ (Dual-CNG) ಎಂಜಿನ್ ತಂತ್ರಜ್ಞಾನದೊಂದಿಗೆ ಹೊಚ್ಚ ಹೊಸ ಔರಾ (Aura) ಸೆಡಾನ್‌ನ್ನು ಬಿಡುಗಡೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನೂತನ ಹ್ಯುಂಡೈ ಔರಾ (Hyundai Aura) ಕಾರಿನ 'ಇ' ರೂಪಾಂತರವು (Variant) ಡುಯಲ್-ಸಿಎನ್‌ಜಿ ಎಂಜಿನ್ ತಂತ್ರಜ್ಞಾನವನ್ನು (Technology) ಪಡೆದಿದ್ದು, ರೂ.7.49 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಗಮನಾರ್ಹವಾಗಿ 'ಇ' ಎಂಬುದು ಔರಾ ಸೆಡಾನ್‌ನ ಆರಂಭಿಕ ಶ್ರೇಣಿ ರೂಪಾಂತರವಾಗಿದೆ. ಇದು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ರೂ.6.49 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.

ಪೆಟ್ರೋಲ್ (Petrol) ಹಾಗೂ ಸಿಎನ್‌ಜಿ (CNG) ಚಾಲಿತ ರೂಪಾಂತರಗಳ ಮಧ್ಯೆ ಬೆಲೆಯಲ್ಲಿ ರೂ.1 ಲಕ್ಷದವರೆಗೆ ವ್ಯತ್ಯಾಸವಿದೆ. ದೇಶದ ಕಾರು ಮಾರುಕಟ್ಟೆಯಲ್ಲಿ 'ಹ್ಯುಂಡೈ ಔರಾ' ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸೆಡಾನ್‌ಗಳ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದೆ. ಬಿಡುಗಡೆಯಾದಾಗಿನಿಂದಲೂ ಈವರೆಗೆ ಬರೋಬ್ಬರಿ 200,000ಕ್ಕೂ ಹೆಚ್ಚು ಔರಾ ಕಾರುಗಳನ್ನು ಮಾರಾಟ ಮಾಡಲಾಗಿದೆ.
ಹ್ಯುಂಡೈ ಔರಾ ಡುಯಲ್-ಸಿಎನ್‌ಜಿ (ಹೈ-ಸಿಎನ್‌ಜಿ) ಇ ರೂಪಾಂತರವು 1.2-ಲೀಟರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 69 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 95.2 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 28.4 ಕೆಎಂ/ಕೆಜಿ ಮೈಲೇಜ್ ನೀಡಲಿದೆ ಎಂದು ಹೇಳಲಾಗಿದೆ.

ಹೊಸ ಹ್ಯುಂಡೈ ಔರಾ ಡುಯಲ್-ಸಿಎನ್‌ಜಿ ಕಾರು, ಈಗಿರುವ ಮಾದರಿಯಂತೆ (ಮಾಡೆಲ್) ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದೆ. 5 ಆಸನ ವ್ಯವಸ್ಥೆಯನ್ನು ಒಳಗೊಂಡಿದ್ದು, ಝಡ್-ಆಕಾರಕ್ಕೆ ಹೋಲಿಕೆಯಾಗುವ ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಫ್ರಂಟ್ ಪವರ್ ವಿಂಡೋಸ್, ಹೈಡ್ ಅಡ್ಜಸ್ಟ್ಮೆಂಟ್ ಡ್ರೈವರ್ ಸೀಟ್, ಮಲ್ಟಿ ಇನ್ಫಾರ್ಮಶನ್ ಡಿಸ್ಪ್ಲೇ, 6-ಏರ್‌ಬ್ಯಾಗ್‌ಗಳು, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಹಾಗೂ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಹೊಂದಿದೆ.
ಕಳೆದ ಜುಲೈನಲ್ಲಿ ಹ್ಯುಂಡೈ ಎಕ್ಸ್‌ಟರ್ ಹೈ-ಸಿಎನ್‌ಜಿ ಡ್ಯುಯೊ ಎಸ್‌ಯುವಿಯನ್ನು ಪರಿಚಯಿಸಲಾಗಿತ್ತು. ಇದು ರೂ.8.50 ರಿಂದ ರೂ.9.38 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 1.2-ಲೀಟರ್ ಎಂಜಿನ್ ಹಾಗೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಸರಿ ಸುಮಾರು 27.1 ಕೆಎಂ/ಕೆಜಿ ಮೈಲೇಜ್ ಕೊಡುತ್ತದೆ. ಈ ಕಾರಿನಲ್ಲಿಯೂ 5 ಮಂದಿ ಪ್ರಯಾಣಿಸಬಹುದು.

ಈ ಹ್ಯುಂಡೈ ಎಕ್ಸ್‌ಟರ್ ಹೈ-ಸಿಎನ್‌ಜಿ ಕಾರು 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸನ್‌ರೂಫ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್‌ನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








