Hyundai: ಟಾಟಾ, ಮಹೀಂದ್ರಾಗೆ ನಿದ್ದೆಗೆಡಿಸಿದ ಹ್ಯುಂಡೈ: ಕ್ರೆಟಾ ಇವಿ ಬಿಡುಗಡೆ ಕನ್ಫರ್ಮ್ ಆಯ್ತು!
ಭಾರತದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ತಲಾ ಒಂದೊಂದು ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿವೆ. ಹ್ಯುಂಡೈ ಕೂಡ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪರಿಚಯಿಸಿದೆಯಾದರೂ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಕಂಡಿಲ್ಲ. ಟಾಟಾ, ಮಹೀಂದ್ರಾ, ಎಂಜಿ ಮೋಟಾರ್‌ನಂತೆ ಮಧ್ಯಮ ವರ್ಗದ ಎಲೆಕ್ಟ್ರಿಕ್ ಕಾರನ್ನು ಹ್ಯುಂಡೈ ಹೊಂದಿಲ್ಲ. ತನ್ನ ಇಂಧನ ಚಾಲಿತ ಕಾರುಗಳಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಕ್ರೆಟಾವನ್ನು ಈಗ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಪರಿಚಯಿಸಲು ಹ್ಯುಂಡೈ ಸಜ್ಜಾಗಿದೆ ಎಂದು ವರದಿಯಾಗಿದೆ. ಕ್ರೆಟಾ ಇವಿ ಅನಾವರಣದ ದಿನಾಂಕ ಕೂಡ ಈಗ ಬಹಿರಂಗವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಕ್ರೆಟಾ ಎಲೆಕ್ಟ್ರಿಕ್ ಕಾರನ್ನು ಭಾರತೀಯ ರಸ್ತೆಗಳಲ್ಲಿ ಹೆಚ್ಚಾಗಿ ಪರೀಕ್ಷಿಸಲಾಗುತ್ತಿದೆ, ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಹಾಗೂ ಚಿತ್ರಗಳು ವೈರಲ್ ಆಗಿವೆ. ಮೂಲಗಳ ಪ್ರಕಾರ 2025 ರಲ್ಲಿ ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಹೊಸ ಎಲೆಕ್ಟ್ರಿಕ್ ಕ್ರೆಟಾವನ್ನು ಪರಿಚಯಿಸುವ ಸಾಧ್ಯತೆ ಇದೆ. ಮಧ್ಯಮ ವಿಭಾಗದಲ್ಲಿ ಸ್ಪರ್ಧಾತ್ಮಕ ಬೆಲೆಗೆ ಇದು ಬಿಡುಗಡೆಯಾಗಲಿದೆ ಎಂದು ನಂಬಲಾಗಿದೆ.

ಈಗಾಗಲೇ ಟಾಟಾ ಕರ್ವ್ ಇವಿಯಿಂದ ಹಿಡಿದು ಎಂಜಿ ವಿಂಡ್ಸರ್‌ವರಗೆ ಭಾರತೀಯ ಎಲೆಕ್ಟ್ರಿಕ್ ಕಾರು ವಿಭಾಗವು ಸಖತ್ ಪೈಪೋಟಿಯಿಂದ ಕೂಡಿದೆ. ಅಲ್ಲದೇ ಮಾರುತಿ ಸುಜುಕಿ ಕೂಡ ತನ್ನ ಹೊಸ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಮೂಲಕ ಈ ವಿಭಾಗವು ಇನ್ನಷ್ಟು ಪೈಪೋಟಿಯಿಂದ ಕೂಡಿರಲಿದೆ. ಇನ್ನು ಹೊಸ ಕ್ರೆಟಾ ಇವಿ ಬಿಡುಗಡೆ ಬಗ್ಗೆ ಹ್ಯುಂಡೈ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಚ್ಚರಿಯ ಮಾಹಿತಿ ಹೊರಬಿಟ್ಟಿದ್ದಾರೆ.
ಹೂಡಿಕೆದಾರರ ಸಭೆಯಲ್ಲಿ, ಹ್ಯುಂಡೈ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ತರುಣ್ ಗರ್ಗ್ ಅವರು ಮಾತನಾಡಿ, ಮುಂದಿನ ವರ್ಷದ ಮೊದಲ ತಿಂಗಳಲ್ಲಿ ಎಲೆಕ್ಟ್ರಿಕ್ ಕ್ರೆಟಾವನ್ನು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು ಎಂದು ದೃಢಪಡಿಸಿದ್ದಾರೆ. ಭಾರತದಲ್ಲಿ ಕ್ರೆಟಾ ಇವಿ ಗೇಮ್ ಚೇಂಜರ್ ಆಗಲಿದೆ ಎಂದು ಸಿಇಒ ಉನ್ಸೂ ಕಿಮ್ ಕೂಡ ಭವಿಷ್ಯ ನುಡಿದಿದ್ದಾರೆ.

ಕ್ರೆಟಾ ಇವಿ ವಿಶೇಷತೆಗಳು: ಹೊಸ ಕ್ರೆಟಾ ಇವಿ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.18 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಡ್ಯುಯಲ್ ಮೋಟರ್ ಆಯ್ಕೆ ನೀಡುವ ನಿರೀಕ್ಷೆಯಿದ್ದು, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದ್ರೆ 450 ಕಿ.ಮೀ ರೇಂಜ್ ಓಡಲಿದೆ. ಎಲೆಕ್ಟ್ರಿಕ್ ಮೋಟರ್ ಹ್ಯುಂಡೈನ ಎಂಟ್ರಿ ಲೆವೆಲ್ ಕೋನಾ ಎಲೆಕ್ಟ್ರಿಕ್ ಕಾರಿನಿಂದ ಪಡೆಯುವ ನಿರೀಕ್ಷೆಯಿದೆ.
ಹೊಸ ಎಲ್ಇಡಿ ಹೆಡ್ ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು ಸ್ಟ್ಯಾಂಡರ್ಡ್ ಕ್ರೆಟಾದ ಸಿಗ್ನೇಚರ್ ಲುಕ್ ಅನ್ನು ಉಳಿಸಿಕೊಳ್ಳಲಿದೆ. ಉಳಿದಂತೆ ಕ್ಲೋಸ್ಡ್-ಆಫ್ ಫ್ರಂಟ್ ಗ್ರಿಲ್ ಮತ್ತು ಹೊಸ 18-ಇಂಚಿನ ಏರೋ-ಇನ್ಸರ್ಟ್ ವೀಲ್‌ಗಳೊಂದಿಗೆ ಕೆಲವು ವಿನ್ಯಾಸ ನವೀಕರಣಗಳನ್ನು ಪಡೆಯಲಿದೆ. ಸೂಕ್ಷ್ಮ ಟ್ವೀಕ್‌ಗಳು ಇವಿ ಆವೃತ್ತಿಗೆ ಹೊಸ ನೋಟವನ್ನು ನೀಡಲಿವೆ.

ಫಿಚರ್ಸ್ ವಿಷಯಕ್ಕೆ ಬಂದರೆ ವಿಶಿಷ್ಟ ಶೈಲಿಯ ಸ್ಟೀರಿಂಗ್ ವೀಲ್ ಮತ್ತು ಸ್ಟೀರಿಂಗ್ ಕಾಲಮ್-ಮೌಂಟೆಡ್ ಡ್ರೈವ್ ಮೋಡ್ ಸೆಲೆಕ್ಟರ್, 10.25-ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಮತ್ತು 10.25-ಇಂಚಿನ ಡಿಜಿಟಲ್ ಕನ್ಸೋಲ್ ಹೊಂದಿರಲಿದೆ. 6 ಏರ್ ಬ್ಯಾಗ್‌ಗಳು, ಪನೋರಮಿಕ್ ಸನ್ ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಲೆವೆಲ್ 2 ADAS, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 360 ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








