Hyundai: 2024ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್‌ನಲ್ಲಿ 70 ಸೇಫ್ಟಿ ಫೀಚರ್‌ಗಳು.. ಕ್ರೆಟಾ ಈಗ ಪ್ರೀಮಿಯಂ SUV, ಬಿಡುಗಡೆ?

ಹೊಸ ಹುಂಡೈ ಕ್ರೆಟಾ (Hyundai Creta) ಫೇಸ್‌ಲಿಫ್ಟ್ ಮಾಡೆಲ್ ಅನ್ನು ಕಂಪನಿಯು ಇತ್ತೀಚೆಗಷ್ಟೆ ಅನಾವರಣಗೊಳಿಸಿದೆ. ಇದೇ ತಿಂಗಳ 16 ರಂದು ಕ್ರೆಟಾ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಸಹ ಮಾಡಬಹುದು. ಈಗಾಗಲೇ ಬುಕ್ಕಿಂಗ್ ಅನ್ನು ಆನ್‌ಲೈನ್ ಮತ್ತು ಡೀಲರ್‌ಶಿಪ್‌ನಲ್ಲಿ ಪ್ರಾರಂಭಿಸಲಾಗಿದೆ. 25 ಸಾವಿರ ರೂ. ಕೊಟ್ಟು ಬುಕ್ ಮಾಡಬಹುದು.

ಹ್ಯುಂಡೈ ಕ್ರೆಟಾ ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಎಸ್‌ಯುವಿ ಎಂದು ಹೆಸರು ಮಾಡಿದೆ. ಹಾಗಾಗಿಯೇ ಕಂಪನಿ ಕ್ರೆಟಾವನ್ನು ಬಿಟ್ಟುಕೊಡದೆ ವರ್ಷಗಳು ಕಳೆದಂತೆ ಫೇಸ್‌ಲಿಫ್ಟ್‌ ಮಾಡಿ ಗ್ರಾಹಕರನ್ನು ಸೆಳೆಯುತ್ತಾ ಬಂದಿದೆ. ಇದೀಗ 2024 ಕ್ಕೆ ಅದ್ದೂರಿ ಡಿಸೈನ್, ಆಧುನಿಕ ತಂತ್ರಜ್ಞಾನ, ಸುಧಾರಿತ ಫೀಚರ್‌ಗಳು, ಉತ್ತಮ ನಿರ್ಮಾಣ ಗುಣಮಟ್ಟದೊಂದಿಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಹಾಗಾದ್ರೆ ಈಗ ಹೊಸ ಕ್ರೆಟಾದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ಇಲ್ಲಿ ನೋಡೋಣ.

hyundai-creta-facelift-comes-with-70-safety-features-7-variants-3-engine-options

ಹೊಸ 2024ರ ಕ್ರೆಟಾದಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳಿದ್ದು, ಕಂಪನಿಯು 6 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸೀಟ್‌ಬೆಲ್ಟ್, ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳ ಜೊತೆಗೆ 70 ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಿದೆ. ಜೊತೆಗೆ ಕಂಪನಿಯು ಕಾರಿನಲ್ಲಿ ಲೆವೆಲ್ - 2 ADAS ಅನ್ನು ಸಹ ಪರಿಚಯಿಸಿದೆ. ಈ ಮೂಲಕ ಹೊಸ ಕ್ರೆಟಾ ಮೊದಲಿಗಿಂತ ಈಗ ಹೆಚ್ಚು ಸುರಕ್ಷಿತ ಕಾರಾಗಿ ಹೊರಹೊಮ್ಮಿದೆ.

ವೇರಿಯೆಂಟ್-ಬಣ್ಣಗಳು: ಹೊಸ ಕ್ರೆಟಾ 7-ವೇರಿಯೆಂಟ್‌ಗಳು ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳನ್ನು ಒಳಗೊಂಡಿದೆ. ವಿವರವಾಗಿ ನೋಡುವುದಾದ್ರೆ E, EX, S, S(O), SX, SX Tech, SX(O) ಎಂಬ ವೇರಿಯೆಂಟ್‌ಗಳನ್ನು ಒಳಗೊಂಡಿದೆ. ಸ್ಟ್ರಾಂಗ್ ಎಮರ್ಲ್ಡ್ ಪರ್ಲ್, ಪೈರಿ ರೆಡ್, ರೇಂಜರ್, ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಬ್ಲಾಕ್ ರೂಫ್‌ನೊಂದಿಗೆ ಅಟ್ಲಾಸ್ ವೈಟ್ ಡ್ಯುಯಲ್ ಟೋನ್ ಶೇಡ್‌ನಲ್ಲಿ ಲಭ್ಯವಿದೆ.

hyundai-creta-facelift-comes-with-70-safety-features-7-variants-3-engine-options

ಇಂಟೀರಿಯರ್: ಇಂಟೀರಿಯರ್ ವಿಷಯಕ್ಕೆ ಬಂದರೆ ಪ್ರೀಮಿಯಂ ಎಲಿಮೆಂಟ್‌ಗಳನ್ನು ನೀಡಲಾಗಿದೆ. ಹೊಸ ಹ್ಯುಂಡೈ CRETA ಹೊಸ ಉದ್ದವಾದ ಡ್ಯಾಶ್‌ಬೋರ್ಡ್‌ನೊಂದಿಗೆ ಇಂಟಿಗ್ರೇಟೆಡ್ ಇನ್ಫೋಟೈನ್‌ಮೆಂಟ್ ಮತ್ತು ಡಿಜಿಟಲ್ ಕ್ಲಸ್ಟರ್ ಸ್ಕ್ರೀನ್‌ಗಳು, ಆಧುನಿಕ ಗ್ರಾಫಿಕ್ಸ್‌ನೊಂದಿಗೆ ಪ್ರೀಮಿಯಂ ಲೆಥೆರೆಟ್ ಸೀಟ್‌ಗಳು, ಲೆಥೆರೆಟ್ ಡೋರ್ ಆರ್ಮ್‌ರೆಸ್ಟ್ ಕವರಿಂಗ್, ಲೆಥೆರೆಟ್ ಡಿ ಕಟ್ ಸ್ಟೀರಿಂಗ್ ವೀಲ್, ಲೆಥೆರೆಟ್ ಸಿಫ್ಟರ್ ರೀಪ್ಡ್ ರೀಡಿಯಂಟ್ ಇಂಟೀರಿಯರ್‌ಗಳನ್ನು ಒಳಗೊಂಡಿದೆ.

ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಮತ್ತು ದುಬಾರಿ ಪ್ಯಾಕೇಜ್ ಜೊತೆಗೆ, ಹೊಸ ಹುಂಡೈ CRETA ಒಳಭಾಗವು ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ. ಹೊಸ ಹ್ಯುಂಡೈ CRETA ಕೇವಲ SUV ಮಾತ್ರವಲ್ಲ ಅದರ ಎಸ್‌ಯುವಿ ವಿಭಾಗದಲ್ಲಿ ಶ್ರೇಷ್ಠತೆಯ ಹೊಸ ಯುಗವನ್ನು ಪ್ರಾರಂಭಿಸಲು ಸಜ್ಜಾಗಿರುವ ಐರಾವತ ಎಂದು ಕಂಪನಿ ಹೇಳಿಕೊಂಡಿದೆ.

hyundai-creta-facelift-comes-with-70-safety-features-7-variants-3-engine-options

ಎಂಜಿಂನ್: ಹೊಸ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಜೊತೆಗೆ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ. ಈ ಎಂಜಿನ್ 160 BHP ಪವರ್ ಉತ್ಪಾದಿಸುತ್ತದೆ. ಇದರಲ್ಲಿ 6 ಸ್ಪೀಡ್ ಮ್ಯಾನುವಲ್, IVT, 7 ಸ್ಪೀಡ್ DCT, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡುವ ಸಾಧ್ಯತೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 10, 2024, 11:43 [IST]
English summary
Hyundai creta facelift comes with 70 safety features 7 variants 3 engine options
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+